Advertisement

ಎಲ್ಲ ದಿನ ದುರ್ಗಾ ವಿಗ್ರಹ ವಿಸರ್ಜನೆಗೆ ಅವಕಾಶ

12:15 PM Sep 22, 2017 | Team Udayavani |

ಕೋಲ್ಕತಾ: ಮೊಹರಂ ಹಬ್ಬ ಮತ್ತು ಅ.1ರಂದು ರಾತ್ರಿ 10ರ ಬಳಿಕ ದುರ್ಗಾ ವಿಗ್ರಹಗಳನ್ನು ವಿಸರ್ಜಿಸಬಾರದು ಎಂದು ಆದೇಶ ಹೊರಡಿಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಲ ಸರಕಾರದ ಆದೇಶವನ್ನು ಕಲ್ಕತ್ತಾ ಹೈಕೋರ್ಟ್‌ ತಿರಸ್ಕರಿಸಿದೆ. ಜತೆಗೆ ಮೊಹರಂ ದಿನವೂ  ಸೇರಿ ಎಲ್ಲಾ ದಿನಗಳಲ್ಲಿ ವಿಗ್ರಹ ವಿಸರ್ಜನೆಗೆ ಅನುವು ಮಾಡಬೇಕು. ಅದಕ್ಕೆ ಸಂಬಂಧಿಸಿದಂತೆ ಭದ್ರತಾ ವ್ಯವಸ್ಥೆಯನ್ನು ರಾಜ್ಯ ಸರಕಾರ ಮಾಡಬೇಕು ಎಂದು ಪ್ರಭಾರ ಮುಖ್ಯ ನ್ಯಾಯಮೂರ್ತಿ ರಾಕೇಶ್‌ ತಿವಾರಿ ಮತ್ತು ನ್ಯಾ. ಹರೀಶ್‌ ಟಂಡನ್‌ ನೇತೃತ್ವದ ಪೀಠ ಗುರುವಾರ ಆದೇಶಿಸಿದೆ. ಕೋಲ್ಕತಾದ ಯಾವ ಮಾರ್ಗಗಳಲ್ಲಿ ಮೆರವಣಿಗೆ ಸಾಗಬೇಕು ಎನ್ನುವುದರ ಬಗ್ಗೆಯೂ ಗುರುತು ಹಾಕುವ ಕೆಲಸ ಮಾಡಬೇಕು ಎಂದು ಆದೇಶಿಸಿದೆ. ಕೋರ್ಟ್‌ನ ಈ ಆದೇಶದಿಂದ ದೀದಿಗೆ ತೀವ್ರ ಹಿನ್ನಡೆಯಾಗಿದೆ. ಮಾರ್ಗ ಗುರುತಿನ ಬಗ್ಗೆ ಎಲ್ಲೆಡೆ ಜಾಹೀರಾತು, ಮಾಹಿತಿ ನೀಡಬೇಕು ಎಂದು ನ್ಯಾಯಪೀಠ ಸೂಚಿಸಿದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಸಾಮರಸ್ಯ ಕಾಪಿಡುವ ಬಗ್ಗೆ ಅಗತ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದೆ. 

Advertisement

ಯಾರೂ ಹೇಳಬೇಕಿಲ್ಲ: ಹೈಕೋರ್ಟ್‌ ತೀರ್ಪಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಸಿಎಂ ಮಮತಾ ಬ್ಯಾನರ್ಜಿ “ಏನು ಮಾಡಬೇಕು ಎಂಬುದರ ಬಗ್ಗೆ ನನಗೆ ಯಾರೂ ಹೇಳಬೇಕಾಗಿಲ್ಲ. ಶಾಂತಿ ಕಾಪಾಡುವ ಬಗ್ಗೆ ಏನು ಕ್ರಮ ಬೇಕೋ ಅದನ್ನು ಕೈಗೊಳ್ಳುತ್ತೇನೆ. ತುಷ್ಟೀಕರಣ ರಾಜಕಾರಣ ಮಾಡಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next