Advertisement

ಕರಾವಳಿಯಲ್ಲಿ ಇನ್ನೇನಿದ್ದರೂ ಸಚಿವ ಸ್ಥಾನದ ಲೆಕ್ಕಾಚಾರ

10:04 AM May 17, 2018 | Harsha Rao |

ಮಂಗಳೂರು: ರಾಜ್ಯದಲ್ಲಿ ಹೊಸ ಸರಕಾರ ರಚನೆ ಕುರಿತಂತೆ ಬೆಂಗಳೂರಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಸರ್ಕಸ್‌ ನಡೆಯುತ್ತಿದ್ದರೆ, ಕರಾವಳಿಯಲ್ಲಿ ಸಚಿವ ಸ್ಥಾನ ಯಾರಿಗೆ ಎಂಬ ಲೆಕ್ಕಾಚಾರ ಶುರುವಾಗಿದೆ. 

Advertisement

ಬಿಜೆಪಿ ಸರಕಾರ ರಚನೆಯಾದರೆ, ದಕ್ಷಿಣ ಕನ್ನಡದಲ್ಲಿ 7 ಸ್ಥಾನ ಹಾಗೂ ಉಡುಪಿ ಜಿಲ್ಲೆಯಲ್ಲಿ 5 ಸ್ಥಾನಗಳನ್ನು ಗೆದ್ದು ಕೊಂಡಿರುವ ಹಿನ್ನೆಲೆ ಯಲ್ಲಿ ಕನಿಷ್ಠ ನಾಲ್ಕು ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿ ಬರುತ್ತಿದೆ. ದಕ್ಷಿಣ ಕನ್ನಡದಲ್ಲಿ ಆರು ಶಾಸಕರದು ಹೊಸ ಮುಖ. ಹೀಗಾಗಿ 6ನೇ ಬಾರಿಗೆ ಆಯ್ಕೆಯಾದ ಎಸ್‌. ಅಂಗಾರ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಿದೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ?
ಇನ್ನೊಂದೆಡೆ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸರಕಾರ ರಚನೆಯಾದರೂ ಕರಾವಳಿಗೆ ಇಲ್ಲದಿದ್ದರೂ ದಕ್ಷಿಣ ಕನ್ನಡ ಜಿಲ್ಲೆ ಲಾಭದ ನಿರೀಕ್ಷೆಯಲ್ಲಿದೆ.

ಕಾಂಗ್ರೆಸ್‌ನಿಂದ ಯು.ಟಿ. ಖಾದರ್‌ ಅವರು ಮಾತ್ರ ಆಯ್ಕೆಯಾಗಿದ್ದು, ಅವರಿಗೆ ಸಚಿವ ಸ್ಥಾನ ಖಚಿತ ಎಂಬ ಅಭಿಪ್ರಾಯ ಇದೆ. ಇದರ ಮಧ್ಯೆ ಕರಾವಳಿ ಭಾಗಕ್ಕೆ ಸೇರಿರುವ ಜೆಡಿಎಸ್‌ ಮಹಾಪ್ರಧಾನ ಕಾರ್ಯದರ್ಶಿ, ಎಚ್‌.ಡಿ. ದೇವೆಗೌಡ ಹಾಗೂ ಎಚ್‌.ಡಿ. ಕುಮಾರಸ್ವಾಮಿಯವರಿಗೆ ಅಪ್ತರಾದ ಬಿ.ಎಂ.ಫಾರೂಕ್‌ಗೆ ಅವಕಾಶ ಸಿಗುವ ಸಾಧ್ಯತೆಯೂ ಇದೆ. ಫಾರೂಕ್‌ ಅವರು ರಾಜ್ಯಸಭೆಗೆ ಹಾಗೂ ರಾಜ್ಯಸಭೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ ಚುನಾವಣಾ ಕಾರ್ಯತಂತ್ರ ರೂಪಿಸುವ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿಸಿ ಸಚಿವ ಸ್ಥಾನ ನೀಡಬಹುದೆಂಬ ಚರ್ಚೆ ಸ್ಥಳೀಯ ಕಾಂಗ್ರೆಸ್‌-ಜೆಡಿಎಸ್‌ ವಲಯದಲ್ಲಿದೆ.

ಬಿಜೆಪಿಗೆ ಜನಾದೇಶ ನೀಡಿದ್ದಾರೆ. ಬಿಜೆಪಿ ಸರಕಾರ ರಚಿಸುವುದು ಖಚಿತ, ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವರು. ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದರೆ ಕರಾವಳಿ ಭಾಗದವರಿಗೂ ಮಂತ್ರಿ ಮಂಡಲದಲ್ಲಿ ಪ್ರಾತಿನಿಧ್ಯ ದೊರೆಯಬಹುದು.
– ನಳಿನ್‌ ಕುಮಾರ್‌ ಕಟೀಲು, ಸಂಸದ, ಬಿಜೆಪಿ ಕೋರ್‌ ಕಮಿಟಿ ಸದಸ್ಯ 

Advertisement

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟ ಸರಕಾರ ರಚನೆಯಾಗಲಿದೆ. ಕುಮಾರಸ್ವಾಮಿ ರಾಜ್ಯದಲ್ಲಿ ಸುಭದ್ರ,ಅಭಿವೃದ್ಧಿಪರ ಆಡಳಿತ ವನ್ನು ನೀಡಲಿದ್ದಾರೆ ‘.
– ಎಂ.ಬಿ. ಸದಾಶಿವ, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ 

**


ಉಡುಪಿ: ಬಿಜೆಪಿ ಸರಕಾರದಲ್ಲಿ ಸಚಿವರಾಗಲು ಜಿಲ್ಲೆಯ ನಾಲ್ವರು ಅರ್ಹರಾಗಿದ್ದಾರೆ. ಆದರೆ ಎಲ್ಲರಿಗೂ ಸಚಿವ ಸ್ಥಾನ ಕಷ್ಟ. ಹಾಗಾಗಿ ಇವರಲ್ಲಿ ಅತಿ ಹಿರಿಯ ಶಾಸಕ ಹಾಲಾಡಿ ಯವರಿಗೆ ಪದವಿ ಸಿಗುವುದು ಬಹು ತೇಕ ಖಚಿತ. ಅವರದ್ದು ಇದು 5ನೆಯ ಅವಧಿ. 2012ರಲ್ಲಿ ಡಾ|ವಿ.ಎಸ್‌.ಆಚಾರ್ಯರು ನಿಧನ ಹೊಂದಿದಾಗ ಇವರಿಗೆ ಸಚಿವ ಸ್ಥಾನ ಸಿಗಬೇಕಿತ್ತು, ಆದರೆ ಕೊನೆ ಕ್ಷಣದಲ್ಲಿ ಕೈ ತಪ್ಪಿತ್ತು. ಈ ಹಿನ್ನೆಲೆಯಲ್ಲಿ ಹಾಲಾಡಿ ಬಿಜೆಪಿ ತೊರೆದಿದ್ದರು. ಈ ಬಾರಿ ವಿಧಾನ ಪರಿಷತ್‌ ಸದಸ್ಯರಿಗೆ ಅವಕಾಶ ಸಿಗುವುದು ಕಷ್ಟ ಎನ್ನಲಾಗುತ್ತಿದೆ. 

ಕಾರ್ಕಳದ ಶಾಸಕಸುನಿಲ್‌ಕುಮಾರ್‌ 3ನೆಯ ಬಾರಿಗೆ ಆಯ್ಕೆಯಾಗಿದ್ದು, ಯವಕರಾಗಿ ಆಡಳಿತ ಯಂತ್ರವನ್ನು ನಡೆಸುವ ಸಾಮರ್ಥ್ಯ ಹೊಂದಿದವರು. ಬಜರಂಗದಳ ಮೂಲದವರಾಗಿದ್ದು, ಆರೆಸ್ಸೆಸ್‌ಗೆ ತೀರಾ ಹತ್ತಿರದವರು. ಈ ಹಿಂದೆ ವಿಧಾನಸಭೆಯಲ್ಲಿ ವಿಪಕ್ಷ ಮುಖ್ಯ ಸಚೇತಕರಾಗಿದ್ದರು. ಬಿಲ್ಲವ ಸಮು ದಾಯದವರು. ಆದರೆ ಕೋಟ ಶ್ರೀನಿವಾಸ ಪೂಜಾರಿ ಕೂಡ ಇದೇ ಸಮುದಾಯಕ್ಕೆ ಸೇರಿದವರು. ಇಬ್ಬರಲ್ಲಿ ಯಾರಿಗೆ ಸಿಗುತ್ತದೆ ಎಂದು ಕಾದು ನೋಡಬೇಕು.

ಜತೆಗೆ ಉಡುಪಿಯ ಶಾಸಕ ಕೆ. ರಘುಪತಿ ಭಟ್‌ 3ನೆಯ ಬಾರಿಗೆ ಶಾಸಕರಾದವರು. ಈ ಬಾರಿ ಸಚಿವ ರಾಗಿದ್ದ ಪ್ರಮೋದ್‌ ಅವರನ್ನು ಸೋಲಿಸಿರುವುದೂ ರಘುಪತಿ ಭಟ್‌ಗೆ ಅವಕಾಶ ಕೊಡಿ ಸುವ ಸಾಧ್ಯತೆ ಇದೆ. ಜಾತಿ ಸಮೀ ಕರಣದಲ್ಲಿ ಹೆಚ್ಚು ಕಡಿಮೆಯಾಗುವ ಸಾಧ್ಯತೆಯೂ ಇದೆ. ಲಾಲಾಜಿ ಮೆಂಡನ್‌ ಹೆಸರೂ ಚಾಲ್ತಿಗೆ ಬರಬಹುದು. ಸುಕುಮಾರ ಶೆಟ್ಟಿ ಮೊದಲ ಬಾರಿ ಶಾಸಕರಾದವರು. 

ಯಾರಾದರೂ ಸರಿ!
ಮತ ಎಣಿಕೆ ಕೇಂದ್ರದಲ್ಲಿ ಮಂಗಳವಾರ ರಘುಪತಿ ಭಟ್‌ ಮತ್ತು ಸುನಿಲ್‌ ನೀಡಿದ ಹೇಳಿಕೆ ಭವಿಷ್ಯಕ್ಕೆ ತಾಳೆ ಯಾಗುತ್ತದೆ. ಸುನಿಲ್‌ “ನಾವೆಲ್ಲ ಒಂದಾಗಿ ಇಡೀ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುತ್ತೇವೆ’ ಎಂದಿದ್ದರು. ಸಚಿವ ಪದವಿ ಬಗ್ಗೆ “ಯಾರಾದರೂ ಸೈ’ ಎಂದಿದ್ದರು. ರಘುಪತಿ ಭಟ್‌ರನ್ನು ಸಚಿವ ಪದವಿ ಬಗ್ಗೆ ಕೇಳಿದಾಗ,”ಆ ಬಗ್ಗೆ ಯೋಚನೆಯನ್ನೇ ಮಾಡಿಲ್ಲ’ ಎಂದಿದ್ದರು.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next