Advertisement

ಪುರಸಭೆ ಚುನಾವಣೆಗೂ ಮುನ್ನ ಲೆಕ್ಕಾಚಾರ

09:50 AM Apr 04, 2022 | Team Udayavani |

ವಾಡಿ: ಪಟ್ಟಣದ ಪುರಸಭೆಯ ಐದು ವರ್ಷ ಆಡಳಿತಾವಧಿ ಯಾವಾಗ ಕೊನೆಗೊಳ್ಳುತ್ತದೋ? ಚುನಾವಣೆ ಯಾವಾಗ ಘೋಷಣೆಯಾಗುತ್ತದೆಯೋ? ಎನ್ನುವ ಕಾತುರದಲ್ಲಿರುವ ಆಡಳಿತಾ ರೂಢ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷ ಬಿಜೆಪಿಯ ಕಾರ್ಯಕರ್ತರಲ್ಲಿ ತಳಮಳ ಶುರುವಾಗಿದೆ.

Advertisement

ಚುನಾವಣೆ ಘೋಷಣೆಗೂ ಮುನ್ನವೇ ಗೆಲುವಿನ ರಣತಂತ್ರ ಹೆಣೆಯಲು ಎರಡೂ ಪಕ್ಷಗಳ ನಾಯಕರು ಗುಪ್ತ ಸಭೆಗಳನ್ನು ಸಂಘಟಿಸಿ ಪೂರ್ವ ಸಿದ್ಧತೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ ಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ, ಪ್ರತಿಯೊಂದು ವಾರ್ಡ್‌ಗಳ ಮತದಾರರ ಪಟ್ಟಿಗಳನ್ನು ಪಡೆದು ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆ ಆರಂಭಿಸಿದೆ.

ಪುರಸಭೆಯ ಸಾರ್ವತ್ರಿಕ ಚುನಾವಣೆ 2017 ಏ.9ರಂದು ನಡೆದಿದ್ದು, 2017ರ ನವೆಂಬರ್‌ 10ರಂದು ಮೊದಲ ಅವಧಿ ಅಧ್ಯಕ್ಷರಾಗಿ ಕಾಂಗ್ರೆಸ್‌ ನ ಮೈನಾಬಾಯಿ ಗೋಪಾಲ ರಾಠೊಡ, ಉಪಾಧ್ಯಕ್ಷರಾಗಿ ಮಲ್ಲಯ್ಯ ಗುತ್ತೇದಾರ ಪದಗ್ರಹಣ ಮಾಡಿದ್ದರು. ಮೊದಲ 30 ತಿಂಗಳ ಆಡಳಿತ ಅಧಿಕಾರವ 2020ರ ಮೇ 10ರಂದು ಕೊನೆಗೊಂಡಿತು. ಎರಡನೇ ಅವಧಿಯ ಅಧ್ಯಕ್ಷರಾಗಿ ಝರೀನಾಬೇಗಂ, ಉಪಾಧ್ಯಕ್ಷರಾಗಿ ತಿಮ್ಮಯ್ಯ ಪವಾರ 2020ರ ಸೆ.3ರಂದು ಪದಗ್ರಹಣ ಮಾಡಿದ್ದಾರೆ. 2017ರ ಸಾರ್ವತ್ರಿಕ ಚುನಾವಣೆ ನಡೆದ ದಿನಾಂಕದ ಪ್ರಕಾರ 2022 ಏ.9ಕ್ಕೆ ಪುರಸಭೆಯ ಆಡಳಿತದ ಐದು ವರ್ಷ ಅವಧಿ ಪೂರ್ಣಗೊಳ್ಳಲಿದೆ.

ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣದ ದಿನಾಂಕದ ಪ್ರಕಾರ ಅಡಳಿತಾವಧಿ ಲೆಕ್ಕ ಮಾಡಿದ್ದಾದರೆ ಪ್ರಸಕ್ತ ಸಾಲಿನ ಅಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಲ್ಲಿ ಎರಡು ತಿಂಗಳು ಮುಂಚಿತವಾಗಿಯೇ ಎರಡನೇ ಅವಧಿಯ 28 ತಿಂಗಳು ಪೂರ್ಣವಾಗಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿವೆ. ಹಿಂದಿನ ಚುನಾವಣೆಗಳಲ್ಲಿ ಬಹುಮತ ಪಡೆದು ನೇರವಾಗಿ ಪುರಸಭೆ ಗದ್ದುಗೆ ಹಿಡಿಯಲು ಸಾಧ್ಯವಾಗದ ಬಿಜೆಪಿಗೆ ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೇರಬೇಕು ಎನ್ನುವ ಆಶಯವಿದ್ದು, ಬಿಜೆಪಿ ನಾಯಕರು ಸದ್ಯ ಎರಡು ಸುತ್ತಿನ ಸಭೆ ನಡೆಸಿದ್ದಾರೆ.

ಕಳೆದ 15 ವರ್ಷಗಳಿಂದ ಪುರಸಭೆ ಅಧಿಕಾರದಲ್ಲಿರುವ ಕಾಂಗ್ರೆಸ್‌ ತನ್ನ ಪ್ರತಿಷ್ಠೆ ಉಳಿಸಿಕೊಳ್ಳುವ ಕಸರತ್ತು ಮಾಡುತ್ತಿದೆ. ವಿಧಾನಸಭೆ ಚುನಾವಣೆಗೂ ಮುಂಚೆಯೇ ನಡೆಯಲಿರುವ ಚಿತ್ತಾಪುರ ಮತಕ್ಷೇತ್ರದ ವಾಡಿ ಪುರಸಭೆ ಚುನಾವಣೆ ಗೆಲ್ಲುವುದು ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೂ ಸವಾಲಾಗಿದೆ. ಎರಡನೇ ಅವಧಿಯ ಆಡಳಿತದ ಮೂವತ್ತು ತಿಂಗಳು ಪೂರ್ಣಗೊಳ್ಳುತ್ತದೋ ಅಥವಾ ಅದಕ್ಕೂ ಮೊದಲೇ ಸರ್ಕಾರ ಚುನಾವಣೆ ಘೋಷಣೆ ಮಾಡುತ್ತದೋ ಎನ್ನುವ ಗೊಂದಲ ಕಾಂಗ್ರೆಸ್‌-ಬಿಜೆಪಿ ನಾಯಕರನ್ನು ಕಾಡುತ್ತಿದೆ.

Advertisement

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಆಡಳಿತಾವಧಿ ಚುನಾವಣೆ ದಿನಾಂಕದಿಂದ ಶುರುವಾಗಿವುದಿಲ್ಲ. ಚುನಾವಣಾಧಿಕಾರಿಗಳು ನಡೆಸುವ ಚುನಾಯಿತ ಸದಸ್ಯರ ಮೊದಲ ಸಭೆಯಿಂದ ಐದು ವರ್ಷ ಅವಧಿಯ ಗಣತಿಯಾಗುತ್ತದೆ. ಎರಡನೇ ಅವಧಿಗೆ ಮೀಸಲಾತಿ ಪ್ರಕಟವಾಗಲು ತಡವಾಗಿದ್ದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ವಾಡಿ ಪುರಸಭೆಯ ಜನಪ್ರತಿನಿಧಿಗಳ ಐದು ವರ್ಷದ ಆಡಳಿತಾವಧಿ 2017ರ ನ.10ರಂದು ಆರಂಭಗೊಂಡಿದ್ದು, 2022ರ ನ.10ರಂದು ಕೊನೆಗೊಳ್ಳಲಿದೆ. -ಉಮಾಕಾಂತ ಹಳ್ಳೆ ತಹಶೀಲ್ದಾರ್‌, ಚಿತ್ತಾಪುರ

-ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next