Advertisement

ಗ್ರಾಮೀಣ ಮೂಲಸೌಲಭ್ಯ ನಿಗಮ ಕಳಪೆ ಆರ್ಥಿಕ ನಿರ್ವಹಣೆ : ಸಿಎಜಿ ವರದಿ

10:35 PM Feb 23, 2023 | Team Udayavani |

ಬೆಂಗಳೂರು: ಕರ್ನಾಟಕ ಗ್ರಾಮೀಣ ಮೂಲ ಸೌಲಭ್ಯ ನಿಗಮದ ಕಾರ್ಯನಿರ್ವಹಣೆಯನ್ನು ಲೆಕ್ಕ ಪರಿಶೋಧನೆಗೊಳಪಡಿಸಿರುವ ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ಆರ್ಥಿಕ ನಿರ್ವಹಣೆ ಕಳಪೆಯಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.

Advertisement

ಗುಣಮಟ್ಟ ನಿಯಂತ್ರಣ ನಿಷ್ಕ್ರಿಯ, ಕಾಮಗಾರಿ ಅನುಷ್ಠಾನದಲ್ಲಿ ಲೋಪ, ಸಕಾಲದಲ್ಲಿ ಮುಗಿಸದ ಕಾಮಗಾರಿ, ಹೆಚ್ಚುವರಿ ವೆಚ್ಚ, ಹಣ ಬಿಡುಗಡೆಗೆ ಮುನ್ನವೇ ವೆಚ್ಚ ಮಾಡಿರುವುದು, ರಾಯಧನ ವಸೂಲಿ ಮಾಡದಿರುವ ಬಗ್ಗೆ ಸಿಎಜಿ ಆಕ್ಷೇಪಿಸಿದೆ.

ಅಂದಾಜು ಪಟ್ಟಿ ತಯಾರಿಕೆ, ಪರಿಶೀಲನೆ, ಮಂಜೂರಾತಿಯ ಪ್ರತೀ ಹಂತದಲ್ಲೂ ಜವಾಬ್ದಾರಿ ನಿಗದಿಪಡಿಸಲಾಗಿದೆ ಎಂಬುದನ್ನು ಸರಕಾರ ಖಚಿತಪಡಿಸಿಕೊಳ್ಳಬೇಕು, ಟೆಂಡರ್‌ ಪ್ರಕ್ರಿಯೆ ಅನುಸರಿಸದೆಯೇ ಕಾಮಗಾರಿಗಳನ್ನು ಉಪ- ಗುತ್ತಿಗೆ ನೀಡುವುದಕ್ಕೆ ಹೊಣೆಗಾರಿಕೆ ನಿಗದಿಪಡಿಸಬೇಕು, ಕಾಮಗಾರಿಯಲ್ಲಿ ನೇಮಿಸಿಕೊಂಡ ಕೂಲಿಯಾಳುಗಳಿಗೆ ಪಾವತಿಗಳ ವಿವರಗಳನ್ನು ದತ್ತಾಂಶವಾಗಿ ನಿರ್ವಹಿಸಬೇಕೆಂದು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next