Advertisement

ಕಳ್ಳಿ ಗಿಡ ಈಗ ಮನೆ ಆಲಂಕಾರಿ

12:07 AM Sep 07, 2019 | mahesh |

ಗಿಡಗಳು ಮನೆಯಲ್ಲಿದ್ದರೆ ಮನೆಗೆ ಏನೋ ಒಂದು ವಿಧವಾದ ಶೋಭೆ ಉಂಟಾಗುತ್ತದೆ. ಮನೆಮಂದಿಯ ಮನಸ್ಸನ್ನು ಆಹ್ಲಾದವಾಗಿರಿಸುವಲ್ಲಿ ಹೂ ಗಿಡಗಳ ಪಾತ್ರ ಮಹತ್ವದ್ದೇ. ಅದು ಮನೆಯ ಒಳಗಿರಲಿ ಅಥವಾ ಮನೆಯ ಹೂದೋಟವಾಗಿರಲಿ ಎಲ್ಲಿದ್ದರೂ ಹೂಗಳು ಮನೆಯ ಅಂದವನ್ನು ಹೆಚ್ಚಿಸುತ್ತವೆ.

Advertisement

ಈಗ ಟ್ರೆಂಡ್‌ ಬದಲಾಗಿದೆ. ಕೇವಲ ಹೂವಿನ ಗಿಡಗಳು ಮಾತ್ರವಲ್ಲ ಕ್ರೋಟನ್‌ ಗಿಡಗಳೂ ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಈ ಸಾಲಿಗೆ ಈಗ ಕಳ್ಳಿ ಗಿಡವೂ ಸೇರಿಕೊಂಡಿದೆ. ಕಾಂಡ ತುಂಬ ಮುಳ್ಳುಗಳನ್ನು ಹೊಂದಿ, ಹೊಗೆ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಈ ಗಿಡಗಳನ್ನು ಹಿಂದೆ ಮನೆಗೆ ದೃಷ್ಟಿ ತಾಗದಿರು ವುದೆಕ್ಕೆಂದು ನೆಡುತ್ತಿದ್ದರು. ಮನೆಯ ಒಳಗೆ ಈ ಗಿಡಗಳಿಗೆ ಪ್ರವೇಶವಿರಲಿಲ್ಲ. ಈಗ ಅದು ಫ್ಯಾಶನ್‌ ಆಗಿದೆ.

ಉಡುಗೊರೆಯಾಗಿ ಕಳ್ಳಿ ಗಿಡ

ಗಿಡಗಳನ್ನು ಉಡುಗೊರೆಯಾಗಿ ಕೊಡುವುದೂ ಈಗ ಒಂದು ಫ್ಯಾಶನ್‌. ಕಳ್ಳಿ ಕೂಡಾ ಆ ಸಾಲಿಗೆ ಸೇರಿದೆ. ಇದರಲ್ಲಿ ಹಲವಾರು ವಿಧಗಳಿವೆ.

1 ಕ್ರಿಸ್‌ಮಸ್‌ ಕಳ್ಳಿ ಇದರಲ್ಲಿ ಕೆಂಬಣ್ಣದ ಹೂ ಅರಳುತ್ತದೆ. ಸಾಧಾರಣ ಸಣ್ಣ ಗಿಡವಾಗಿದ್ದು ಇದನ್ನು ಮನೆಯ ಟೀಪಾಯ್‌ಗಳಲ್ಲಿ ಜೋಡಿಸಬಹುದು.

Advertisement

2 ಬ್ಯಾರಲ್ ಕಳ್ಳಿ: ನೋಡಲು ಸ್ವಲ್ಪ ದಪ್ಪವಾಗಿ ಮುಳ್ಳುಗಳು ಅಧಿಕವಾಗಿರುವ ಈ ವಿಧದ ಕಳ್ಳಿ ಗಿಡಕ್ಕೆ ಹೆಚ್ಚು ನೀರಿನ ಅಗತ್ಯವಿಲ್ಲ. ಬದಲಾಗಿ ಸೂರ್ಯನ ಕಿರಣ ಅತೀ ಹೆಚ್ಚಾಗಿ ಬೇಕಾಗಿದೆ. ಆದುದರಿಂದ ಈ ವಿಧದ ಕಳ್ಳಿ ಗಿ ಬೆಳೆಯಲು ಮನೆಯ ಒಳಗಡೆಗಿನ ಜಾಗ ಪ್ರಶಸ್ತವಲ್ಲ. ಸಿಟೌಟ್ ಅಥವಾ ಟೆರೇಸ್‌ ಗಾರ್ಡನ್‌ಗಳಲ್ಲಿ ಈ ಗಿಡವನ್ನು ನೆಡಬಹುದು.

3 ಫೇರಿ ಕ್ಯಾಸ್ಟಲ್ ಕಳ್ಳಿ: ವೈವಿಧ್ಯಮಯ ಕಾಂಡಗಳನ್ನು ಹೊಂದಿರುವ ಈ ಕಳ್ಳಿಗಿಡ ಒಟ್ಟಿಗೆ ಬೆಳೆಯುತ್ತದೆ. ಯಾವುದೇ ವಿಧದ ದ್ಯಾನವನಕ್ಕೂ ಈ ಕಳ್ಳಿ ಹೇಳಿ ಮಾಡಿಸಿದಂತಿದೆ. ನಿಧಾನವಾಗಿ ಬೆಳೆಯುವ ಈ ಗಿಡ ಸುಮಾರು 6 ಫೀಟ್ ಬೆಳೆಯುತ್ತದೆ. ಇದರಲ್ಲಿ ಹೂ ಬಿಡುವುದು ತುಂಬಾ ನಿಧಾನವಾಗಿ. ಆದುದರಿಂದ ಇದನ್ನು ಪ್ಲಾಸ್ಟಿಕ್‌ ಹೂಗಳಿಂದ ಅಲಂಕರಿಸಲು ಅವಕಾಶವಿದೆ.

4 ನಕ್ಷತ್ರ ಕಳ್ಳಿ: ಸಮುದ್ರ ಕಳ್ಳಿ ಅಥವಾ ನಕ್ಷತ್ರ ಕಳ್ಳಿ ಎಂದು ಕರೆಯಲ್ಪಡುವ ಈ ಗಿಡ ಮನೆಯ ಒಳಾಂಗಣದಲ್ಲಿ ಜೋಡಿಸಲು ಅತೀ ಸೂಕ್ತವಾದ ಗಿಡವಾಗಿದೆ. ಸಣ್ಣ ಎತ್ತರದಲ್ಲಿ ಬೆಳೆಯುವ ಈ ಗಿಡದಲ್ಲಿ ಹಳದಿ ಅಥವಾ ಬಿಳಿ ಬಣ್ಣದ ಹೂಗಳಾಗುತ್ತವೆ.

5 ಬನ್ನಿ ಕಳ್ಳಿ ಎಲೆಯ ಆಕಾರದ ಕಾಂಡಗಳನ್ನು ಹೊಂದಿ ಸಾಧಾರಣ ಎತ್ತರಕ್ಕೆ ಬೆಳೆಯುತ್ತವೆ. ಮುದ್ದಾಗಿರುವ ಈ ಗಿಡಗಳನ್ನು ಮನೆಯ ಒಳಗೆ ಹಾಗೂ ಹೊರಗೆ ಬೆಳೆಸಲು ಉತ್ತಮವಾಗಿದೆ.

•ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next