Advertisement

ಕೇಬಲ್‌ ರೈಲ್ವೆ: ಇಳಿಜಾರಿನ ಪಯಣ ಆರಂಭ

06:45 AM Dec 18, 2017 | Team Udayavani |

ಬೆರ್ನ್: ವಿಶ್ವದಲ್ಲೇ ಅತ್ಯಂತ ಕಡಿದಾದ ಪ್ರದೇಶದಲ್ಲಿ ಸಾಗುವ ಕೇಬಲ್‌ ರೈಲ್ವೆ ಎಂಬ ಹೆಗ್ಗಳಿಕೆ ಗಳಿಸಿರುವ ರೈಲ್ವೆ ಲೈನ್‌ ಸ್ವಿಜರ್ಲೆಂಡ್‌ನ‌ಲ್ಲಿ ಭಾನುವಾರ ಸಂಚಾರಕ್ಕೆ ಮುಕ್ತವಾಗಿದೆ. ಈ ಮೂಲಕ ಸ್ವಿಸ್‌ನ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಕ್ಷೇತ್ರವು ಹೊಸ ಮೈಲುಗಲ್ಲು ಸಾಧಿಸಿದಂತಾಗಿದೆ.

Advertisement

ಸಿಲಿಂಡರ್‌ ಆಕಾರದ ಬೋಗಿಗಳ ಮಾದರಿಯ ವಿಶೇಷ ವಿನ್ಯಾಸ ಹೊಂದಿರುವ ಈ ರೈಲು 100 ಮೀಟರ್‌ನಷ್ಟು ದೂರವನ್ನು ಅತ್ಯಂತ ಕಡಿದಾದ ಪ್ರದೇಶದಲ್ಲಿ ಕ್ರಮಿಸುತ್ತದೆ. 360 ಅಡಿ ಎತ್ತರಕ್ಕೆ ಚಲಿಸುವಾಗ, ಇಳಿಜಾರು- ಏರುನೆಲಕ್ಕೆ ಅನುಗುಣವಾಗಿ ಬೋಗಿಗಳೂ ವಾಲುತ್ತಾ ಸಾಗುವುದು ವಿಶೇಷ. 

ಪರ್ವತಪ್ರದೇಶಗಳೇ ಹೆಚ್ಚಿರುವಂಥ ಸ್ವಿಜರ್ಲೆಂಡ್‌ನ‌ಲ್ಲಿ ಮಕ್ಕಳು ಶಾಲೆಗೆ ತೆರಳಲೂ ಕೇಬಲ್‌ ಕಾರ್‌ಗಳನ್ನೇ ಅವಲಂಬಿಸಿದ್ದಾರೆ. ಹೀಗಿರುವಾಗ, ಇಲ್ಲಿ ಕೇಬಲ್‌ ರೈಲ್ವೆ ಸಂಚಾರ ಆರಂಭವಾಗಿರುವುದು ಇಲ್ಲಿನ ಜನರಿಗೆ ವರವಾಗಿ ಪರಿಣಮಿಸಿದೆ. ಈ ರೈಲು ಸಂಪರ್ಕವು ಸಮುದಾಯಗಳನ್ನು ಸಂಪರ್ಕಿಸಲು ನೆರವಾಗುವುದು ಮಾತ್ರವಲ್ಲದೇ, ಅತ್ಯುತ್ತಮ ಪ್ರವಾಸಿ ತಾಣವಾಗಿಯೂ ಮಾರ್ಪಾಡಾಗುತ್ತಿದೆ ಎನ್ನುತ್ತಾರೆ ರೈಲ್ವೆ ಇಲಾಖೆಯ ವಕ್ತಾರ ಇವಾನ್‌ ಸ್ಟೈನರ್‌. 

53 ದಶಲಕ್ಷ ಡಾಲರ್‌ ವೆಚ್ಚದಲ್ಲಿ (340 ಕೋಟಿ ರೂ.) ಈ ರೈಲನ್ನು ನಿರ್ಮಿಸಲಾಗಿದೆ. ವಿಶ್ವದಲ್ಲೇ ಶೇ.106ರ ಗರಿಷ್ಠ ಇಳಿಜಾರಿನಲ್ಲಿ ಇದು ಸಂಚರಿಸಲಿದೆ. ಈ ಹಿಂದೆ, 1902ರಲ್ಲಿ ಇಂಗ್ಲೆಂಡ್‌ನ‌ ಈಸ್ಟ್‌ ಕ್ಲಿಫ್ ಲಿಫ್ಟ್ ಫ‌ನಿಕ್ಯುಲರ್‌ ರೈಲ್ವೆಯು ಶೇ.78ರ ಇಳಿಜಾರಿನ ಮೂಲಕ ವಿಶ್ವದ ಅತಿ ಕಡಿದಾದ ಪ್ರದೇಶದಲ್ಲಿ ಸಾಗುವ ರೈಲು ಎಂಬ ಖ್ಯಾತಿ ಗಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next