Advertisement

ಒಡಿಶಾದ ಎಲ್ಲ ಸಚಿವರ ರಾಜೀನಾಮೆ: ಪಾಟ್ನಾಯಕ್ ಹೊಸ ರಣತಂತ್ರ

05:57 PM Jun 04, 2022 | Team Udayavani |

ಭುವನೇಶ್ವರ : ಭಾನುವಾರ ನಡೆಯಲಿರುವ ಬಹು ನಿರೀಕ್ಷಿತ ಸಂಪುಟ ಪುನರ್ ರಚನೆಗೆ ಮುನ್ನ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಚಿವ ಸಂಪುಟದ ಎಲ್ಲಾ ಸದಸ್ಯರು ಇಂದು ಶನಿವಾರ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

Advertisement

ಆಡಳಿತಾರೂಢ ಬಿಜು ಜನತಾ ದಳ ಸರ್ಕಾರವು 29 ಮೇ 2022 ರಂದು ತನ್ನ ಐದನೇ ಅವಧಿಯ ಮೂರು ವರ್ಷಗಳನ್ನು ಪೂರ್ಣಗೊಳಿಸಿದ ಸಮಯದಲ್ಲಿ ಈ ಪುನರಾವರ್ತನೆಯು 2024 ರ ವಿಧಾನಸಭಾ ಚುನಾವಣೆಯ ಮೊದಲು ಪಕ್ಷವನ್ನು ಬಲಪಡಿಸಲು ಪ್ರಮುಖ ತಾಲೀಮು ಎಂದು ಹೇಳಲಾಗಿದೆ.

ಪುರಿ ಪ್ರವಾಸದಲ್ಲಿರುವ ರಾಜ್ಯಪಾಲ ಪ್ರೊ.ಗಣೇಶಿ ಲಾಲ್ ಅವರು ರಾಜ್ಯ ಸಚಿವಾಲಯದ ಲೋಕಸೇವಾ ಭವನದಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ್ದಾರೆ. ಭಾನುವಾರ ಬೆಳಗ್ಗೆ 11.45ಕ್ಕೆ ರಾಜಭವನದ ಲೋಕಸೇವಾ ಭವನದ ಆವರಣದಲ್ಲಿರುವ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ : ಪಂಜಾಬ್ ಕಾಂಗ್ರೆಸ್ ಗೆ ಶಾಕ್ ಮೇಲೆ ಶಾಕ್ : ಹಲವು ನಾಯಕರು ಬಿಜೆಪಿಗೆ

ಐದನೇ ಅವಧಿಯ ಮುಖ್ಯಮಂತ್ರಿಯಾಗಿರುವ ಪಟ್ನಾಯಕ್ ಅವರು ಜೂನ್ 20 ರಿಂದ ರೋಮ್ ಮತ್ತು ದುಬೈಗೆ ಭೇಟಿ ನೀಡಲಿದ್ದಾರೆ ಮತ್ತು ಅವರು ನಿರ್ಗಮಿಸುವ ಮೊದಲು ನೂತನ ಸಂಪುಟ ರಚಿಸಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next