ಕಲಬುರಗಿ: ರಾಜ್ಯ ಸರಕಾರ ಕಲಬುರಗಿಯಲ್ಲಿ ನಡೆಸಿದ ಕ್ಯಾಬಿನೆಟ್ ಸಭೆ ಸಮಾಧಾನ ತಂದಿದೆಯೇ ಹೊರತು, ನನಗೆ ತೃಪ್ತಿ ತಂದಿಲ್ಲ ಎಂದು ಸಿಎಂ ಸಲಹೆಗಾರ ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ ಮತ್ತೊಮ್ಮೆ ಸರಕಾರದ ವಿರುದ್ಧ ನಿರ್ಭಿಡೆಯಾಗಿ ಅಸಮಧಾನ ಹೊರ ಹಾಕಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಡಿದ ಅವರು,ಕಲ್ಯಾಣ ಕರ್ನಾಟಕಕ್ಕೆ ಐದು ಸಾವಿರ ಕೋಟಿ ಬರುತ್ತಿರುವುದಕ್ಕೆ ಹಳೆ ಮೈಸೂರು ಭಾಗದವರಿಗೆ ಹೊಟ್ಟೆ ಕಿಚ್ಚು ಶುರುವಾಗಿದೆ. ನಮ್ಮ ಅಭಿವೃದ್ಧಿಯನ್ನ ಸಹಿಸಲು ಆಗದೆ ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಎಲ್ಲಾ ಶಾಸಕರು ಸಭೆ ನಡೆಸಿ ಹಸಿರು ಸೇನೆಯ ವಿರುದ್ದ ಪ್ರತಿಭಟಿಸ್ತೆವೆ ಎಂದರು.
ಹಿಂದೆ ಯಡಿಯೂರಪ್ಪ, ಜಗದೀಶ ಶೆಟ್ಟರ್ ಸಭೆ ಮಾಡಿದಾಗ ನೀವೆಷ್ಟು ಅಭಿವೃದ್ದಿ ಮಾಡಿದ್ದೀರಿ ಎಂದು ಆಶೋಕ ಆರೋಪಕ್ಕೆ ತಿರುಗೇಟು ನೀಡಿದರು.
ಸಭೆಯಲ್ಲಿ ತರಾ ತರಿಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆ ಆಗಿವೆ. ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಮುಂದಾಗಿದ್ದಾರೆ.ಆದ್ರೆ ಅಂಡರ್ ಗ್ರೌಂಡ್ ವಾಟರ್ ಹೆಚ್ಚಳ ಮಾಡೋದ್ರ ಬಗ್ಗೆ ಗಮನ ಕೊಡ್ತಿಲ್ಲ. ಅದಕ್ಕಾಗಿ ಚಿಂತನೆ ಇಲ್ಲ ಎಂದರು.
ಜಲಜೀವಲ್ ಯೋಜನೆಗೆ ನೀರು ಎಲ್ಲಿಂದ ತರ್ತಾರೆ ಹೇಗೆ ತರ್ತಾರೆ ಅನ್ನೋದು ಸ್ಪಷ್ಟತೆ ಇಲ್ಲ. ಇದರಿಂದಾಗಿ ಉಂಟಾಗಿರುವ ಸಮಸ್ಯೆ ಬಗೆ ಹರಿದಿಲ್ಲ ಎಂದರು.