Advertisement

ಏರ್‌ ಇಂಡಿಯಾ ಶೀಘ್ರ ಖಾಸಗಿ ತೆಕ್ಕೆಗೆ ಸಾಧ್ಯತೆ

02:14 AM Jun 01, 2017 | Team Udayavani |

ಬ್ಲೂಮ್‌ಬರ್ಗ್‌: ಸಾಲದಿಂದಾಗಿ ಸಂಕಷ್ಟದಲ್ಲಿರುವ ಏರ್‌ ಇಂಡಿಯಾ ಶೀಘ್ರದಲ್ಲಿಯೇ ಖಾಸಗೀಕರಣ ಆದರೆ ಅಚ್ಚರಿ ಇಲ್ಲ. ಈ ಕುರಿತ ಪ್ರಸ್ತಾವನೆ ಕೇಂದ್ರದ ಮುಂದಿದ್ದು, ಪ್ರಧಾನಿ ಮೋದಿ ಇದಕ್ಕೆ ಗ್ರೀನ್‌ ಸಿಗ್ನಲ್‌ ನೀಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳುತ್ತಿವೆ. ಈಗಾಗಲೇ ಏರಿಂಡಿಯಾ ಕೊಂಡುಕೊಳ್ಳುವವರಿಗಾಗಿ ಹಡುಕಾಟ ನಡೆಸಲಾಗುತ್ತಿದೆ. ಆದರೆ ಯಾರೇ ಕೊಂಡುಕೊಳ್ಳಲು ಮುಂದಾದರೂ, ಅಂದಾಜು 20 ಸಾವಿರ ಕೋಟಿ ರೂ. ಸಾಲ ಹೊರಬೇಕಾಗಿ ಬರಲಿದೆ. ಪ್ರಸ್ತಾವನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಏರ್‌ ಇಂಡಿಯಾ ವಕ್ತಾರ ಧನಂಜಯ್‌ ಕುಮಾರ್‌, ಈ ಬಗ್ಗೆ ಪ್ರಧಾನಿ ಮೋದಿ ಅವರು ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಚಿವ ಸಂಪುಟದಲ್ಲಿಯೂ ಚರ್ಚೆಯಾಗಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next