Advertisement

ಸಂಪುಟ ಸರ್ಜರಿ : ಸಂಜೆ 6ಕ್ಕೆ ನಡೆಯುವ ಪ್ರಮಾಣ ವಚನದಲ್ಲಿ 43 ಮಂದಿ ಮೋದಿ ಟೀಮ್ ಗೆ ಎಂಟ್ರಿ..?

03:50 PM Jul 07, 2021 | Team Udayavani |

ನವ ದೆಹಲಿ : 2019 ರ ಮೇನಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮಂತ್ರಿ ಮಂಡಲದಲ್ಲಿ ನಡೆಯುತ್ತಿರುವ ಮೊದಲ ಪುನರ್‌ ರಚನೆಗೆ ಕ್ಷಣ ಗಣನೆ ಆರಂಭವಾಗಿದೆ.

Advertisement

ಇಂದು ( ಬುಧವಾರ, ಜುಲೈ 7) ಸಂಜೆ 6 ಗಂಟೆಗೆ ಕೇಂದ್ರ ಸರ್ಕಾರದ ಸಚಿವ ಸಂಪುಟ ಪುನರ್ ರಚನೆ ರಾಷ್ಟ್ರಪತಿ ಭವನದಲ್ಲಿನಡೆಯಲಿದ್ದು, ಈಗಾಗಲೇ ಸಂಭಾವ್ಯ ಸಚಿವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಸಂಪುಟ ಪುನರ್ ರಚನೆ ಕಾರ್ಯಕ್ರಮದಲ್ಲಿ ಒಟ್ಟು 43 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ‍್ಥೆ ಪಿಟಿಐ ವರದಿ ಮಾಡಿದೆ.

ಇದನ್ನು ಓದಿ : ಅಮೆಜಾನ್ ಗೆ ತಲೆನೋವಾದ ‘ಅಲೆಕ್ಸಾ’ ಮತ್ತು ‘94% ರಿಯಾಯಿತಿ’

ನಾರಾಯಣ್ ರಾಣೆ, ಸರ್ಬಾನಂದ ಸೋನೊವಾಲ್, ಜ್ಯೋತಿರಾದಿತ್ಯ ಸಿಂಧಿಯಾ, ಅಜಯ್ ಭಟ್, ಭೂಪೇಂದರ್ ಯಾದವ್, ಶೋಭಾ ಕರಂದ್ಲಾಜೆ, ಸುನೀತಾ ದುಗ್ಗಲ್, ಮೀನಾಕ್ಷಿ ಲೇಖಿ, ಭಾರತಿ ಪವಾರ್, ಶಂತನು ಠಾಕೂರ್ ಮತ್ತು ಕಪಿಲ್ ಪಾಟೀಲ್ ಮತ್ತು ಅಪ್ನಾ ದಳದ ಅನುಪ್ರಿಯಾ ಪಟೇಲ್. ಜೆಡಿಯುನ ಆರ್‌ ಸಿ ಪಿ ಸಿಂಗ್, ಎಲ್‌ ಜೆಪಿಯ ಪಶುಪತಿ ಪಾರಸ್ ಅವರು ಪ್ರಧಾನಿಯನ್ನು ಭೇಟಿ ಮಾಡಿದ್ದಾರೆ.

Advertisement

ರಾಜ್ಯ ಸಚಿವರಾದ ಜಿ ಕಿಶನ್ ರೆಡ್ಡಿ, ಪುರುಷೋತ್ತಮ್ ರೂಪಾಲ ಮತ್ತು ಅನುರಾಗ್ ಠಾಕೂರ್ ಮತ್ತಿತರರು ಪ್ರಧಾನಿಯನ್ನು ಭೇಟಿ ಮಾಡಿದ್ದು, ಅವರಿಗೂ ಸಂಪುಟ ದರ್ಜೆಗೆ ಬಡ್ತಿ ಸಿಗುವ ಸಾಧ್ಯತೆ ಇದೆ ಎಂದು ಸುದ್ದಿ ಮೂಲಗಳು ಮಾಹಿತಿ ನೀಡಿವೆ.

ಇನ್ನು, ಕೇಂದ್ರ ಸಚಿವರಾದ ಆರ್ ಕೆ ಸಿಂಗ್, ಮನ್ಸುಖ್ ಮಾಂಡವಿಯಾ ಮತ್ತು ಹರ್ದೀಪ್ ಸಿಂಗ್ ಪುರಿ ಅವರು ಸಹ ಬಡ್ತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯುವಕರು ಮತ್ತು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಆಡಳಿತಾತ್ಮಕ ಅನುಭವ ಹೊಂದಿರುವವರು, ಬಡ್ತಿ ಪಡೆಯುವವರು ಒಳಗೊಂಡು ಸುಮಾರು 43 ಮಂದಿಗೆ ಸಚಿವ ಸ್ಥಾನದ ಭಾಗ್ಯ ಇಂದು ಮೋದಿ ಸರ್ಕಾರದ ನೂತನ ಸಂಪುಟದಲ್ಲಿ ಸಿಗಲಿದೆ ಎಂದು ಹೇಳಲಾಗಿದೆ.

ಸಂಭಾವ್ಯ ಸಚಿವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಸಂದರ್ಭ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡ ಜೊತೆಯಲ್ಲಿದ್ದರು ಎಂದು ವರದಿಯಾಗಿದೆ.

ಇದನ್ನು ಓದಿ : ಶಾಪ್ಸಿ ಮೂಲಕ ಬೇರೆಯವರಿಗೆ ವಸ್ತುಗಳನ್ನು ಬುಕ್‍ ಮಾಡಿಕೊಡಿ, ನೀವು ಕಮಿಷನ್‍ ಪಡೆಯಿರಿ!

Advertisement

Udayavani is now on Telegram. Click here to join our channel and stay updated with the latest news.

Next