Advertisement

ಸಂಪುಟ ವಿಸ್ತರಣೆ ಕಸರತ್ತು ;ಯಾವಾಗ? ರಮೇಶ್‌ ಜಾರಕಿಹೊಳಿಗೆ ಕೊಕ್‌?

10:20 AM Sep 14, 2018 | |

ಬೆಂಗಳೂರು: ಅಸಮಾಧಾನದ ನಡುವೆಯೆ ಕಾಂಗ್ರೆಸ್‌ ಪಾಳಯದಲ್ಲಿ ಸಂಪುಟ ವಿಸ್ತರಣೆ ಕಸರತ್ತು ತೀವ್ರಗೊಂಡಿದ್ದು, ಒತ್ತಡದ ವಾತಾವರಣವೂ ಪಕ್ಷದೊಳಗೆ ನಿರ್ಮಾಣವಾಗಿದೆ. 

Advertisement

ಸೆಪ್ಟಂಬರ್‌ 25 ರ ಒಳಗೆ ಸಂಪುಟ ವಿಸ್ತರಿಸಬೇಕು ಎಂದು ಕೆಲ ಪ್ರಮುಖ ಕಾಂಗ್ರೆಸ್‌ ನಾಯಕರು ಮನವಿ ಮಾಡಿರುವ ಬಗ್ಗೆ  ವರದಿಯಾಗಿದೆ. 

26 ರಿಂದ ಪಿತೃಪಕ್ಷ  ಬರುವ ಕಾರಣ ಜೆಡಿಎಸ್‌ ವರಿಷ್ಠ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಪುತ್ರ,ಸಚಿವ ಎಚ್‌.ಡಿ.ರೇವಣ್ಣ ಅವರು ಒಪ್ಪುವ ಸಾಧ್ಯತೆಗಳು ಕಡಿಮೆ ಎಂದಿದ್ದಾರೆ. 

ಬಹುತೇಕ ಅಕ್ಟೋಬರ್‌ 10 ರ ಬಳಿಕ  ನವರಾತ್ರಿ ವೇಳೆ ಸಂಪುಟ ವಿಸ್ತರಣೆ ಆಗುವ ಎಲ್ಲಾ ಸಾಧ್ಯತೆಗಳಿವೆ. 

ಡಿಸಿಎಂ ಡಾ.ಜಿ.ಪರಮೇಶ್ವರ್‌ ಮತ್ತು ಸಚಿವ ಡಿ.ಕೆ.ಶಿವಕುಮಾರ್‌ ಅವರು ಈ ಕುರಿತು ಮಹತ್ವದ ಮಾತುಕತೆ ನಡೆಸಿರುವ ಬಗ್ಗೆ ವರದಿಯಾಗಿದೆ. 

Advertisement

ರಾಮಲಿಂಗಾ ರೆಡ್ಡಿ ಪರ ಖರ್ಗೆ ಲಾಭಿ 
ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಲಾಭಿ ಮಾಡಿರುವ ಬಗ್ಗೆ ವರದಿಯಾಗಿದೆ. 

ರಮೇಶ್‌ ಜಾರಕಿಹೊಳಿಗೆ ಕೊಕ್‌?
ರಮೇಶ್‌ ಜಾರಕಿಹೊಳಿ ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಅವರನ್ನು ಸಂಪುಟದಿಂದ ಕೈ ಬಿಟ್ಟು ಸಹೋದರ ಸತೀಶ್‌ ಜಾರಕಿಹೊಳಿ ಅವರಿಗೆ ಸ್ಥಾನ ಕಲ್ಪಿಸಬೇಕು ಎಂದು ಕೆಲ ಪ್ರಮುಖ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. 

ಬಳ್ಳಾರಿ ವಿಚಾರದಲ್ಲಿ ಜಟಿಲ 
ಬಳ್ಳಾರಿ ವಿಚಾರದಲ್ಲಿ ಕಾಂಗ್ರೆಸ್‌ಗೆ ತೀವ್ರ ತಲೆನೋವಾಗಿದ್ದು, ಜಾರಕಿಹೊಳಿ ಸಹೋದರರು ಸಚಿವ ಡಿ.ಕೆ.ಶಿವಕುಮಾರ್‌ಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಬಳ್ಳಾರಿಯ ಶಾಸಕರೊಬ್ಬರಿಗೆ ಸಚಿವ ಸ್ಥಾನವನ್ನು ನೀಡಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಲೆಕ್ಕಾಚಾರ ಹಾಕುತ್ತಿದೆ. 

ಆನಂದ್‌ ಸಿಂಗ್‌, ನಾಗೇಂದ್ರ ಅವರ ಮೇಲೆ ಗಣಿ ಆರೋಪಗಳಿವೆ, ಪರಮೇಶ್ವರ್‌ ನಾಯ್ಕ ಅವರ ಮೇಲೂ ಆರೋಪಗಳಿವೆ. ಇನ್ನೊಂದೆಡೆ ಸಂಡೂರಿನ ತುಕಾರಾಂಗೆ ಸಚಿವ ಸ್ಥಾನ ನೀಡಲು ಭೀಮಾ ನಾಯ್ಕ ವಿರೋಧವಿದೆ. ಜೆಡಿಎಸ್‌ ತೊರೆದಿದ್ದ ಭೀಮಾ ನಾಯ್ಕಗೆ ಸಚಿವ ಸ್ಥಾನ ನೀಡಲು ಸಿಎಂ ಎಚ್‌ಡಿಕೆ ಅವರು ಒಪ್ಪುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next