Advertisement

ಸಚಿವ ಸಂಪುಟ ಅಸಮಾಧಾನ: ಮಾರ್ಗದಲ್ಲಿ ನಿಂತು ಅಪಸ್ವರ ತೆಗೆಯೋ ಅವಶ್ಯಕತೆ ಇಲ್ಲ ಎಂದ ನಳಿನ್

06:59 PM Jan 15, 2021 | Team Udayavani |

ಮಂಗಳೂರು: ಯಾವುದೇ ಅಸಮಾಧಾನಗಳಿದ್ದರೆ, ಪಕ್ಷದ ಹೈಕಮಾಂಡ್ ಗೆ ಹೇಳಬಹುದು. ಮಾರ್ಗದಲ್ಲಿ ನಿಂತು ಮಾತನಾಡೋದು ಪಕ್ಷದಲ್ಲಿ ಅಶಿಸ್ತು ಎನಿಸಿಕೊಳ್ಳುತ್ತದೆ. ಮೇಲಿನವರು ಎಲ್ಲಾ ಗಮನಿಸುತ್ತಿದ್ದಾರೆ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

Advertisement

ಸಚಿವ ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯ ಕೆಲವರು ಅಸಮಾಧಾನ ಹೊರಹಾಕುತ್ತಿರುವ ಹಿನ್ನೆಲೆ ಮಾತನಾಡಿದ ಅವರು, ಪಾರ್ಟಿಯ ನಿಯಂತ್ರಣದಲ್ಲಿ ಮಾತನಾಡಬೇಕು, ಮಾರ್ಗದಲ್ಲಿ ನಿಂತು ಅಪಸ್ವರ ತೆಗೆಯೋ ಅವಶ್ಯಕತೆ ‌ಇಲ್ಲ. ಯಾರೋ ಒಬ್ಬರು ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರೆ, ಅದು ‌ನೋವು‌ ಮತ್ತು ‌ಭಾವನೆ ಅಷ್ಟೆ. ಅದನ್ನು ಮಾತನಾಡೋ ರೀತಿಯಲ್ಲಿ ಮಾತನಾಡಿ, ತೋರ್ಪಡಿಸುವ ರೀತಿಯಲ್ಲಿ ತೋರ್ಪಡಿಸಿ ಎಂದರು.

ಯತ್ನಾಳ್ ಬಗ್ಗೆ ಕೇಂದ್ರದ ಶಿಸ್ತು ಸಮಿತಿ ಗಮನಕ್ಕೆ ‌ತರಲಾಗಿದೆ. ಸಿ. ಡಿ ಬಗ್ಗೆ ಮುಖ್ಯಮಂತ್ರಿಗಳೇ ತೋರಿಸಿ ಅಂದಿದ್ದಾರೆ, ತೋರಿಸಲಿ, ಬಾಯಿಗೆ ಬಂದ ಹಾಗೆ ‌ಮಾತನಾಡುವುದು ಸರಿಯಲ್ಲ. ನಮ್ಮ ಪಕ್ಷದ ವಿಚಾರಗಳು ಸಿದ್ದರಾಮಯ್ಯನವರಿಗೆ ಅಗತ್ಯವಿಲ್ಲ  ಎಂದು ಕಿಡಿಕಾರಿದರು.

ಇದನ್ನೂ ಓದಿ: ದಕ್ಷಿಣಕನ್ನಡ ಜಿಲ್ಲೆಯ 6 ಕೇಂದ್ರಗಳಲ್ಲಿ ನಾಳೆಯಿಂದ ಲಸಿಕೆ ವಿತರಣೆ: ಜಿಲ್ಲಾಧಿಕಾರಿ ಮಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next