Advertisement

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

11:24 PM Sep 18, 2024 | Team Udayavani |

ಹೊಸದಿಲ್ಲಿ: ಚಂದ್ರ ಮತ್ತು ಮಂಗಳಯಾನದ ಬಳಿಕ ಇದೀಗ ಶುಕ್ರಯಾನಕ್ಕೆ ನೆರವು ನೀಡಲು ಕೇಂದ್ರದ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಇದು ಶುಕ್ರಗ್ರಹದ ವೈಜ್ಞಾನಿಕ ಅಧ್ಯಯನ ಯೋಜನೆಯಾಗಿದೆ. ಈ ಯೋಜನಗೆ 1,236 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ. ಇದರಲ್ಲಿ 824 ಕೋಟಿ ರೂ. ನೌಕೆ ತಯಾರು ಮಾಡುವುದಕ್ಕೆ ವೆಚ್ಚವಾಗುತ್ತದೆ.

Advertisement

ಶುಕ್ರ ಭೂಮಿಗೆ ಹತ್ತಿರದ ಗ್ರಹವಾ­ಗಿದ್ದು, ಇದರ ಅಧ್ಯಯನ ಮೂಲಕ ಗ್ರಹಗಳು ಹೇಗೆ ನಿರ್ಮಾಣಗೊಂಡವು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು ಎನ್ನಲಾಗಿದೆ.

ಮರುಬಳಕೆ ರಾಕೆಟ್‌ ಉತ್ಪಾದನೆಗೆ ನೆರವು: ಭಾಗಶಃ ಮರುಬಳಕೆ ರಾಕೆಟ್‌ ಉತ್ಪಾದನೆಗೂ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಇದಕ್ಕಾಗಿ 8,240 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. ತನ್ನದೇ ಆದ ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪನೆ ಮಾಡುವ ಯೋಜನೆಯಲ್ಲಿರುವ ಭಾರತಕ್ಕೆ ಮರುಬಳಕೆ ರಾಕೆಟ್‌ಗಳು ಮಹತ್ವದ ನೆರವು ಒದಗಿಸಲಿವೆ. ಈ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಗಳಿಸಿಕೊಳ್ಳಲು 96 ತಿಂಗಳು (8 ವರ್ಷ) ಅವಧಿಯನ್ನು ನಿಗದಿಪಡಿಸಲಾಗಿದೆ.

ಪಿಕೆ ರಸಗೊಬ್ಬರಕ್ಕೆ 24,475 ಕೋಟಿ ರೂ. ನೀಡಲು ಒಪ್ಪಿಗೆ
ಮುಂಬರುವ ರಬಿ ಋತುಮಾನಕ್ಕೆ ಫಾಸೆàಟ್‌ ಮತ್ತು ಪೊಟ್ಯಾಶ್‌ ರಸಗೊಬ್ಬರಕ್ಕೆ 24,475 ಕೋಟಿ ರೂ. ಸಹಾಯಧನ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಇದು ರೈತರ ವೆಚ್ಚವನ್ನು ಕಡಿಮೆ ಮಾಡಲಿದೆ ಎಂದು ಹೇಳಿದರು. 2010ರ ಎಪ್ರಿಲ್‌ನಿಂದ ಈ ಗೊಬ್ಬರಗಳ ಮೇಲೆ ಕೇಂದ್ರ ಸರಕಾರ ಸಹಾಯಧನ ನೀಡುತ್ತಾ ಬಂದಿದೆ.
**
2028ಕ್ಕೆ ಭಾರತದ್ದೇ ಆದ ಬಾಹ್ಯಾಕಾಶ ಕೇಂದ್ರ
ಭಾರತ 2028ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ಕೇಂದ್ರವನ್ನು ಹೊಂದಲು ಯೋಜನೆ ರೂಪಿಸಿದೆ. ಇದಕ್ಕೆ ಕ್ಯಾಬಿನೆಟ್‌ ಸಹ ಒಪ್ಪಿಗೆ ಸೂಚಿಸಿದೆ. ಇದಕ್ಕೆ “ಭಾರತೀಯ ಅಂತರಿಕ್ಷ ಸ್ಟೇಶನ್‌’ ಎಂದು ಹೆಸರಿ ಡಲಾಗಿದ್ದು, ಮೊದಲ ಹಂತದ ಯೋಜನೆ ಯನ್ನು 2028ಕ್ಕೆ ಪೂರ್ಣ ಗೊಳಿಸಿ, 2036ರಿಂದ ಇದರ ಕಾರ್ಯನಿರ್ವಹಣೆ ಆರಂಭಿಸಲು ನಿರ್ಧರಿಸಲಾಗಿದೆ. ಗಗನಯಾನ ಯೋಜನೆಗೆ ಒಟ್ಟಾರೆ 20,193 ಕೋಟಿ ರೂ. ನೀಡಲು ನಿರ್ಧರಿಸಲಾಗಿದೆ.

ಅನಿಮೇಶನ್‌, ಗೇಮಿಂಗ್‌ ರಾಷ್ಟ್ರೀಯ ಕೇಂದ್ರ ಸ್ಥಾಪನೆ
ಅನಿಮೇಶನ್‌, ವಿಶುವಲ್‌ ಎಫೆಕ್ಟ್, ಗೇಮಿಂಗ್‌, ಕಾಮಿಕ್ಸ್‌ ಮತ್ತು ಎವಿಜಿಸಿ ವಾಸ್ತವತೆಗಳನ್ನು ಕಲಿಸುವುದಕ್ಕಾಗಿ ರಾಷ್ಟ್ರೀಯ ಕೇಂದ್ರವನ್ನು ಸ್ಥಾಪನೆ ಮಾಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಐಐಎಂಗಳ ಮಾದರಿಯಲ್ಲಿ ಇದು ಕಾರ್ಯನಿರ್ವಹಿಸಲಿದೆ. ಅತ್ಯಾಧುನಿಕವಾದ ಕಂಟೆಂಟ್‌ ಹಬ್‌ ಆಗಿ ಭಾರತವನ್ನು ನಿರ್ಮಾಣ ಮಾಡಲು ಇದು ಸಹಾಯಕವಾಗಲಿದೆ. ಚಲನಚಿತ್ರ ನಿರ್ಮಾಣ, ಒಟಿಟಿ ವೇದಿಕೆಗಳ ಬೆಳವಣಿಗೆ, ಜಾಹೀರಾತು, ಆರೋಗ್ಯ, ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next