Advertisement
ಪ್ರಧಾನಿ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಜತೆಗೆ ವಿಶೇಷ ವಿವಾಹ ಕಾಯ್ದೆ, ಹಿಂದೂ ವಿವಾಹ ಕಾಯ್ದೆ ಗಳಿಗೂ ತಿದ್ದುಪಡಿ ತರುವ ಸಾಧ್ಯತೆಗಳಿವೆ. ಕಳೆದ ವರ್ಷ ಸ್ವಾತಂತ್ರ್ಯ ದಿನದ ಭಾಷಣದ ವೇಳೆ ಪ್ರಧಾನಿ ಮಹಿಳೆಯರ ಮದುವೆ ವಯಸ್ಸು ಪರಿಷ್ಕರಿಸುವ ಬಗ್ಗೆ ಮಾತನಾಡಿದ್ದರು. ಸದ್ಯ ದೇಶದಲ್ಲಿ ಮಹಿಳೆಯರಿಗೆ ವಿವಾಹದ ವಯಸ್ಸು 18 ಮತ್ತು ಪುರುಷರಿಗೆ 21.
Related Articles
Advertisement
ಮಹಿಳೆಯರ ಶ್ರೇಯೋಭಿವೃದ್ಧಿಗಾಗಿಯೇ ವಿವಾಹ ವಯಸ್ಸು ಪರಿಷ್ಕರಿಸಲು ಶಿಫಾರಸು ಮಾಡಲಾಗಿದೆ ಎಂದಿದ್ದಾರೆ. ಪ್ರತೀ ಕ್ಷೇತ್ರದಲ್ಲಿಯೂ ಮಹಿಳೆಗೆ ಸಮಾನ ಅವಕಾಶ ಕಲ್ಪಿಸುವ ಈ ದಿನಗಳಲ್ಲಿ ಇಂಥ ಶಿಫಾರಸಿನ ಅಗತ್ಯ ಇತ್ತು. ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ಗ್ರಾಮೀಣ ಪ್ರದೇಶಗಳ ತಜ್ಞರು, ಎನ್‌ಜಿಒಗಳ ಜತೆಗೆ ಸಮಗ್ರವಾಗಿ ಪರಾಮರ್ಶೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಅಭಿಪ್ರಾಯ ಸಂಗ್ರಹಿಸುವ ವೇಳೆ ಮಹಿಳೆಯರ ವಿವಾಹ ವಯಸ್ಸು 22 ಅಥವಾ 23 ಇದ್ದರೆ ಒಳ್ಳೆಯದು ಎಂದು ಅನಿಸಿಕೆ ವ್ಯಕ್ತವಾಗಿತ್ತು ಎಂದು ಜೇಟಿÉ ಹೇಳಿದ್ದಾರೆ. ಮಹಿಳೆಯರ ವಿವಾಹ ವಯಸ್ಸು ಹೆಚ್ಚಿಸುವುದರಿಂದ ಅವರಿಗೆ ಹೆಚ್ಚು ಪಡೆಯಲು ಮತ್ತು ಉದ್ಯೋಗಕ್ಕೆ ತೆರಳಲು ಅನುಕೂಲವಾಗಲಿದೆ ಎಂದು ಜಯಾ ಜೇಟಿÉ ಪ್ರತಿಪಾದಿಸಿದ್ದಾರೆ. ಎಲ್ಲ ಧರ್ಮಗಳಿಗೆ ಸೇರಿದವರಿಂದಲೂ ಅಭಿಪ್ರಾಯ ಸಂಗ್ರಹಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.
ನೀತಿ ಆಯೋಗದ ಸದಸ್ಯ ಡಾ| ವಿ.ಕೆ. ಪೌಲ್, ಉನ್ನತ ಶಿಕ್ಷಣ, ಶಾಲಾ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಗಳು ಸದಸ್ಯರಾಗಿದ್ದ ಈ ಸಮಿತಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪ್ರಧಾನಮಂತ್ರಿಗಳ ಕಚೇರಿ, ನೀತಿ ಆಯೋಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು.
ಕಾಯ್ದೆ ಪ್ರಕಾರ ಸದ್ಯ ಹೇಗೆ? :
ಹಿಂದೂ ವಿವಾಹ ಕಾಯ್ದೆ : 1955 ಸೆಕ್ಷನ್ 5(3)ರ ಪ್ರಕಾರ ವಧುವಿನ ವಯಸ್ಸು 18, ವರನಿಗೆ 21.
ವಿಶೇಷ ವಿವಾಹ ಕಾಯ್ದೆ : 1954 ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಪ್ರಕಾರ ವಧುವಿಗೆ 18, ವರನಿಗೆ 21 ವರ್ಷ.
ಏಕೆ ಈ ಶಿಫಾರಸು? :
- ಪುರುಷ ಮತ್ತು ಮಹಿಳೆಯರಿಗೆ ಒಂದೇ ಮದುವೆ ವಯಸ್ಸು ಇರಿಸುವ ಮೂಲಕ ಲಿಂಗ ಸಮಾನತೆ ಕಾಯ್ದುಕೊಳ್ಳುವುದು.
- ಕಡಿಮೆ ವಯಸ್ಸಿನಲ್ಲಿಯೇ ಮದುವೆಯಾಗುವುದರಿಂದ ಬೇಗನೆ ತಾಯಿಯಾಗುವ ಆತಂಕ.
- ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಪ್ರತಿಕೂಲ ಪರಿಣಾಮ.
- ತಾಯಿ ಮತ್ತು ಮಗುವಿಗೆ ಪೌಷ್ಟಿಕಾಂಶಗಳ ಕೊರತೆ. ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಹೆಚ್ಚಳ ತಗ್ಗಿಸಲು ಮದುವೆ ವಯಸ್ಸು ಏರಿಕೆಯಿಂದ ಅನುಕೂಲ.
- ಇತ್ತೀಚಿನ ಎನ್‌ಎಚ್‌ಎಫ್ಎಸ್-5ರಲ್ಲಿ ಕಂಡು ಬಂದಿರುವ ಪ್ರಕಾರ ಸಂತಾನೋತ್ಪತ್ತಿ ಸಾಮರ್ಥ್ಯ (ಫರ್ಟಿಲಿಟಿ ರೇಟ್) ಶೇ. 2.0ಕ್ಕೆ ಕುಸಿತ.
- ಈ ಸಮೀಕ್ಷೆಯ ಪ್ರಕಾರ ಬಾಲ್ಯ ವಿವಾಹ ಪ್ರಮಾಣ ಕಡಿಮೆಯಾಗಿದೆ. 2015-16ನೇ ಸಾಲಿನಲ್ಲಿ ಶೇ. 27, 2019-20ನೇ ಸಾಲಿನಲ್ಲಿ ಶೇ. 23.
- ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗಗಳ ಅವಕಾಶ ಹೆಚ್ಚು ಸಿಗುವಂತಾಗಲು.