Advertisement
ಆರ್ಥಿಕ ಅಪರಾಧ ಎಸಗಿ ವಿದೇಶಕ್ಕೆ ಪರಾರಿಯಾಗುವವರ ಸಂಖ್ಯೆ ಹೆಚ್ಚುತ್ತಿದ್ದು, ಸದ್ಯ ಇರುವ ಮಸೂದೆಯಲ್ಲಿ ಇದನ್ನು ತಡೆಯುವುದು ಸಾಧ್ಯವಿಲ್ಲ. ಅವರ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೂ ಸದ್ಯದ ಮಸೂದೆ ಅವಕಾಶ ನೀಡುತ್ತಿರಲಿಲ್ಲ. ಇದೇ ವೇಳೆ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಾಂಗ್ರೆಸ್ ಮಂಡಿಸಿದ ಹಕ್ಕುಚ್ಯುತಿ ಗೊತ್ತುವಳಿ ನೋಟಿಸ್ ಪರಿಶೀಲನೆಯಲ್ಲಿದೆ ಎಂದು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.
ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರದ್ದೂ ಲ್ಯಾಟರಲ್ ಎಂಟ್ರಿಯೇ…! ಪಾರ್ಶ್ವ (ಲ್ಯಾಟರಲ್) ಪ್ರವೇಶದ ಮೂಲಕ 10 ಜಂಟಿ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವ ಕೇಂದ್ರ ಸರಕಾರ, ಇದನ್ನು ಪ್ರಶ್ನಿಸಿರುವವರಿಗೆ ಡಾ. ಸಿಂಗ್ ಉದಾಹರಣೆಯನ್ನು ತೋರಿಸಿದೆ. ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಸರಕಾರಕ್ಕೆ ಮನಮೋಹನ್ ಸಿಂಗ್ ಅವರು ಸಲಹೆಗಾರರಾಗಿ ನೇಮಕವಾಗಿದ್ದುದು ಇದೇ ಮಾರ್ಗದಲ್ಲಿ ಎಂದು ಪ್ರಧಾನಿ ಕಾರ್ಯಾಲಯದ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಇದರಿಂದ ಐಎಎಸ್ ಅಧಿಕಾರಿಗಳ ನೈತಿಕತೆಗೆ ತೊಂದರೆಯಿಲ್ಲ ಎಂದಿದ್ದಾರೆ.