ಹೊಸದಿಲ್ಲಿ: ಹತ್ತೂಂಬತ್ತು ರಾಜ್ಯಗಳಲ್ಲಿರುವ 736 ಅಣೆಕಟ್ಟುಗಳನ್ನು ಮುಂದಿನ ಹತ್ತು ವರ್ಷಗಳ ಕಾಲ ನಿರ್ವಹಿಸಲು 10, 211 ಕೋಟಿ ರೂ.ಗಳ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ನವ ದಿಲ್ಲಿಯಲ್ಲಿ ಗುರುವಾರ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಜಲಶಕ್ತಿ ಖಾತೆ ಸಚಿವ ಗಜೇಂದ್ರ ಸಿಂಗ್ ಚೌಹಾಣ್ ಈ ಮಾಹಿತಿ ನೀಡಿದ್ದಾರೆ. ಎರಡು ಹಂತಗಳಲ್ಲಿ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಹೇಳಿದ ಚೌಹಣ್ ಮೊದಲ ಆರು ವರ್ಷಗಳು ಅಂದರೆ ಎಪ್ರಿಲ್ 2021ರಿಂದ ಮಾರ್ಚ್ 2031ರ ವರೆಗೆ ಎಂದರು.
ಮೊದಲ ಹಂತದ ಯೋಜನೆ 2012ರಲ್ಲಿ ಶುರುವಾಗಿ ಹಾಲಿ ವರ್ಷ ಮುಕ್ತಾಯ ಗೊಂಡಿದೆ. ಈ ಅವಧಿಯಲ್ಲಿ ಏಳು ರಾಜ್ಯ ಗಳ 223 ಅಣೆಕಟ್ಟುಗಳ ನಿರ್ವಹಣೆ ಮತ್ತು ಇತರ ಕಾಪಿಡುವಿಕೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಹೇಳಿದ್ದಾರೆ.
ಯೋಜನೆಯ ಒಟ್ಟು ಮೊತ್ತದ ಶೇ. 80ರಷ್ಟು ಮೊತ್ತವನ್ನು ವಿಶ್ವಬ್ಯಾಂಕ್, ಉಳಿದ ಶೇ.20ರಷ್ಟು ಮೊತ್ತವನ್ನು ಮತ್ತೂಂದು ಸಂಸ್ಥೆ ಭರಿಸಲಿದೆ. 7 ಸಾವಿರ ಕೋಟಿ ಮೊತ್ತ ವನ್ನು ವಿಶ್ವಬ್ಯಾಂಕ್ ಮತ್ತು ಉಳಿದ 3, 211 ಕೋಟಿ ರೂ. ಮೊತ್ತವನ್ನು ಯೋಜನೆ ಜಾರಿ ಸಂಸ್ಥೆ ಗಳು ಭರಿಸಲಿವೆ ಎಂದರು ಚೌಹಾಣ್. ಇದರ ಜತೆಗೆ ಒಟ್ಟು ಯೋಜನೆಯ ಮೊತ್ತದ ಪೈಕಿ ಶೇ.4ನ್ನು ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸುವ ಬಗ್ಗೆಯೂ ಪ್ರಧಾನಿ ಸಮ್ಮತಿ ಸೂಚಿಸಿದರು. ದೇಶದಲ್ಲಿ 5, 334 ದೊಡ್ಡ ಅಣೆಕಟ್ಟುಗಳಿವೆ. 411 ಅಣೆಕಟ್ಟುಗಳು ನಿರ್ಮಾಣ ಹಂತದಲ್ಲಿವೆ.
ಇಥೆನಾಲ್ ದರ ಹೆಚ್ಚಳ: ಮತ್ತೂಂದು ಮಹತ್ವದ ನಿರ್ಣಯದಲ್ಲಿ ಆರ್ಥಿಕ ವ್ಯವ ಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಇಥೆ ನಾಲ್ ದರವನ್ನು ಪ್ರತಿ ಲೀಟರ್‌ಗೆ 3.34ಕ್ಕೆ ಹೆಚ್ಚಿಸಲು ಅನುಮತಿ ನೀಡಿದೆ. ಕಬ್ಬಿನ ಹಾಲಿನಿಂದ ತೆಗೆಯುವ ಪ್ರತಿ ಲೀಟರ್ ಇಥೆನಾಲ್‌ಗೆ ಸದ್ಯ 59.27 ರೂ. ಇದೆ. ದರ ಹೆಚ್ಚಳದ ಬಳಿಕ 62.65 ರೂ.ಗೆ ಆಗಲಿದೆ. ಡಿಸೆಂಬರ್‌ನಿಂದ ಹೊರ ದರ ಜಾರಿಗೆ ಬರಲಿದೆ. ಮೊಲೇಸಸ್‌ನಿಂದ ಪಡೆಯಲಾಗುವ ಇಥೆನಾಲ್ ದರವನ್ನು ಹಾಲಿ 43. 75 ರೂ.ಗಳಿಂದ 45.69ಕ್ಕೆ ಪರಿಷ್ಕರಿಸಲಾಗಿದೆ.