Advertisement

12 ವರ್ಷದೊಳಗಿನ ಹುಡುಗಿಯರ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ: ವಿಧೇಯಕ

03:34 PM Apr 21, 2018 | udayavani editorial |

ಹೊಸದಿಲ್ಲಿ : ಹನ್ನೆರಡು ವರ್ಷ ಪ್ರಾಯದ ಒಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

Advertisement

16 ವರ್ಷ ಪ್ರಾಯದೊಳಗಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಈಗಿರುವ ಕನಿಷ್ಠ 10 ವರ್ಷ ಜೈಲು ಶಿಕ್ಷೆಯನ್ನು 20 ವರ್ಷಗಳಿಗೆ ಏರಿಸಲಾಗಿದ್ದು ಇದನ್ನು ಜೀವಾವಧಿಗೆ ವಿಸ್ತರಿಸಲಾಗುವುದು.

12 ವರ್ಷದೊಳಗಿನ ಹುಡುಗಿಯರ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಕನಿಷ್ಠ 20 ವರ್ಷಗಳ ಜೈಲು ಶಿಕ್ಷೆಯಾಗಲಿದೆ. 

ಅತ್ಯಾಚಾರ ಪ್ರಕರಣಗಳ ತ್ವರಿತ ನ್ಯಾಯ ತೀರ್ಮಾನಕ್ಕಾಗಿ ಸಚಿವ ಸಂಪುಟ ಹಲವು ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. 

ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವ ಈ ವಿಧೇಯಕವನ್ನು ಈಗಿನ್ನು ರಾಷ್ಟ್ರಪತಿಗಳ ಅನುಮೋದನೆಗಾಗಿ ಕಳುಹಿಸಲಾಗುವುದು. 

Advertisement

ಈಗ ಜಾರಿಯಲ್ಲಿರುವ ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯಿದೆಯಡಿ (ಪೋಕ್‌ಸೋ) ಮಕ್ಕಳ ಮೇಲೆ ಅತ್ಯಾಚಾರ ಅಪರಾಧ ಎಸಗುವವರಿಗೆ ಕನಿಷ್ಠ 7 ವರ್ಷ ಮತ್ತು ಗರಿಷ್ಠ ಜೀವಾವಧಿ ಜೈಲು ಶಿಕ್ಷೆ ಇದೆ. 

ಕಥುವಾ ಮತ್ತು ಉನ್ನಾವೋ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ವ್ಯಕ್ತವಾದ ರಾಷ್ಟ್ರಾದ್ಯಂತದ ಆಕ್ರೋಶ ಮತ್ತು ಮಕ್ಕಳ ಅತ್ಯಾಚಾರಿಗಳಿಗೆ ಮರಣ ದಂಡನೆಯ ಶಿಕ್ಷೆ ನೀಡಬೇಕೆಂಬ ಆಗ್ರಹ ಮುಗಿಲು ಮುಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ  ಅತ್ಯುಗ್ರ ವಿಧೇಯಕವನ್ನು ಪಾಸು ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next