Advertisement

ಬ್ಯಾಂಕುಗಳ ವಿಲೀನಕ್ಕೆ ಸಂಪುಟ ತಾತ್ವಿಕ ಒಪ್ಪಿಗೆ

07:10 AM Aug 24, 2017 | |

ಹೊಸದಿಲ್ಲಿ: ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಇನ್ನಷ್ಟು  ಸದೃಢಗೊಳಿಸುವ ಸಲುವಾಗಿ “ಪರ್ಯಾಯ ವ್ಯವಸ್ಥೆ’ ಜಾರಿಗೆ ತರಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.  

Advertisement

ಇದೇ ಪರ್ಯಾಯ ವ್ಯವಸ್ಥೆ ಮೂಲಕವೇ ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನಗೊಳಿಸುವುದಕ್ಕೂ ಕೇಂದ್ರ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ. ಬುಧವಾರ ನಡೆದ ಸಚಿವ ಸಂಪು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬ್ಯಾಂಕುಗಳನ್ನು ಇನ್ನಷ್ಟು ಸದೃಢ ಮಾಡಿ, ಅವುಗಳೇ ಆರ್ಥಿಕ ಅವಶ್ಯಕತೆಯನ್ನು ಈಡೇರಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಪರ್ಯಾಯ ವ್ಯವಸ್ಥೆಯ ಮೊರೆ ಹೋಗಲಾಗಿದೆ. ನಮ್ಮ ಉದ್ದೇಶ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಗಟ್ಟಿ ಮಾಡಬೇಕು ಎಂಬುದೇ ವಿನಃ ಅವುಗಳನ್ನು ಹಾಳು ಮಾಡುವದಲ್ಲ. 

ಹೀಗಾಗಿ ಸದೃಢ ಮತ್ತು ವಿಲೀನದಂಥ ನಿರ್ಧಾರಗಳ ಮೂಲಕ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಗಟ್ಟಿ ಮಾಡುತ್ತೇವೆ ಎಂದು ಸಚಿವ ಸಂಪುಟ ಸಭೆ ಬಳಿಕ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next