Advertisement

ನಿಂತಿದ್ದ ಲಾರಿಗೆ ಕ್ಯಾಬ್‌ ಡಿಕ್ಕಿ: ಇಬ್ಬರು ಸಾವು

08:44 AM Jul 29, 2017 | Team Udayavani |

ಬೆಂಗಳೂರು: ನಿಂತಿದ್ದ ಲಾರಿಗೆ ಓಲಾ ಕ್ಯಾಬ್‌ ಡಿಕ್ಕಿಯಾಗಿ  ಇಬ್ಬರು ಮೃತಪಟ್ಟ ಘಟನೆ ಏರ್‌ಪೋರ್ಟ್‌ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

Advertisement

ದೆಹಲಿ ಮೂಲದ ಪ್ರಯಾಣಿಕ ಉಮೇಶ್‌ ಕುಮಾರ್‌ ಮಿಶ್ರಾ, ಕ್ಯಾಬ್‌ ಚಾಲಕ ಮೃತಪಟ್ಟವರು ಮತ್ತೂಬ್ಬ ಪ್ರಯಾಣಿಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕ್ಯಾಬ್‌ ಸಂಪೂರ್ಣ ಜಖಂಗೊಂಡಿದೆ.  ಅಪಘಾತದಿಂದ ಒಂದು ಗಂಟೆಗೂ ಅಧಿಕ ಕಾಲ ಸಂಚಾರ ಅಸ್ತವ್ಯಸ್ಥಗೊಂಡಿದೆ. 

ಯಲಹಂಕ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕಾಮಿಸಿ ಪ್ರಕರಣ ದಾಖಲಿಸಿಕೊಂಡಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next