Advertisement
ಇದನ್ನೂ ಓದಿ:ಸುಬ್ರಹ್ಮಣ್ಯ: ನಾಯಿಯನ್ನು ಓಡಿಸಿಕೊಂಡು ನಾಡಿಗೆ ಬಂದ ಚಿರತೆ ಶೌಚಾಲಯದಲ್ಲಿ ಬಂಧಿ!
Related Articles
Advertisement
ಸಂಸದೀಯ ಸ್ಥಾಯಿ ಸಮಿತಿಯ ವರದಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಗೃಹ ಸಚಿವಾಲಯ ಈ ಸ್ಪಷ್ಟನೆ ನೀಡಿದ್ದು, “ಗಣತಿಯಲ್ಲಿ ಸಂಗ್ರಹಿಸಲಾಗುವ ಎಲ್ಲ ವೈಯಕ್ತಿಕ ಮಟ್ಟದ ಮಾಹಿತಿಯು ರಹಸ್ಯವಾಗಿರುತ್ತದೆ. ವಿವಿಧ ಆಡಳಿತಾತ್ಮಕ ಮಟ್ಟದಲ್ಲಿ ಕೇವಲ ಒಟ್ಟಾರೆ ದತ್ತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ. ಈ ಹಿಂದಿನ ಗಣತಿಗಳಂತೆಯೇ, 2021ರ ಗಣತಿಯನ್ನು ಯಶಸ್ವಿಯಾಗಿ ಪೂರ್ಣ ಗೊಳಿಸುವ ನಿಟ್ಟಿನಲ್ಲಿ ಸೂಕ್ತ ಜನಜಾಗೃತಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು. ಗಣತಿ ಹಾಗೂ ಎನ್‌ಪಿಆರ್‌ಗೆ ಸಂಬಂಧಿಸಿದ ಪ್ರಶ್ನಾವಳಿಗಳನ್ನೂ ಸಿದ್ಧ ಪಡಿಸಲಾದಿದೆ. ಆದರೆ, ಸದ್ಯದ ಮಟ್ಟಿಗಂತೂ ರಾಷ್ಟ್ರೀಯ ಮಟ್ಟದಲ್ಲಿ ಎನ್‌ಆರ್‌ಸಿ ಪ್ರಕ್ರಿಯೆ ಕೈಗೊಳ್ಳುವ ಬಗ್ಗೆ ನಿರ್ಧಾರ ಅಂತಿಮಗೊಂಡಿಲ್ಲ’ ಎಂದು ಹೇಳಿದೆ.
ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ನೇತೃತ್ವದ ಸ್ಥಾಯಿ ಸಮಿತಿಯು ಕಳೆದ ವರ್ಷದ ಫೆಬ್ರವರಿಯಲ್ಲಿ ನೀಡಿದ ವರದಿಯಲ್ಲಿ, ಮುಂಬರುವ ಎನ್‌ಪಿಆರ್ ಮತ್ತು ಗಣತಿ ಕುರಿತು ಜನರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ಉಲ್ಲೇಖಿಸಿತ್ತು.
ನಡೆಯದ ಕಲಾಪ: ರಾಜ್ಯಸಭೆ, ಲೋಕಸಭೆಯಲ್ಲಿ ಕಲಾಪ ನಡೆಸಲು ಸಾಧ್ಯವಾಗದೆ, ಬುಧವಾರಕ್ಕೆ ಮುಂದೂಡಿಕೆಯಾಗಿದೆ. ಎರಡೂ ಸದನಗಳಲ್ಲಿ ರೈತಕಾಯ್ದೆಯ ಬಗ್ಗೆ ಚರ್ಚೆಯಾಗಬೇಕು ಎಂದು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಕಲಾಪ ನಡೆಸಲು ಅಸಾಧ್ಯವಾಯಿತು. ಹೀಗಾಗಿ 2 ಸದನಗಳಲ್ಲಿ ಕಲಾಪ ಮುಂದೂಡಿಕೆ ಮಾಡಿದರೂ ಪರಿಸ್ಥಿತಿ ಸುಧಾರಣೆಯಾಗುವ ನಿರೀಕ್ಷೆ ವ್ಯರ್ಥವಾಯಿತು. ದೇಶವ್ಯಾಪಿ ಕಾಯ್ದೆ ಇಲ್ಲ
ಮದುವೆಯ ಬಳಿಕ ಬಲ ವಂತವಾಗಿ ಮತಾಂತರ ತಡೆಗಟ್ಟಲು ದೇಶಕ್ಕೇ ಅನ್ವಯವಾಗುವ ಕಾಯ್ದೆ ಇಲ್ಲ. ಈ ಅಂಶಗಳೇನಿದ್ದರೂ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಜಿ.ಕಿಶನ್ ರೆಡ್ಡಿ ಲೋಕಸಭೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮತಾಂತರ ವಿಚಾರ ತಡೆ ಯುವುದು, ನಿಯಂತ್ರಣ ಕ್ರಮಗಳು, ಕೇಸು ದಾಖಲು ಮಾಡುವುದು ಮತ್ತು ತನಿಖೆ ನಡೆಸುವುದು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ವಿಚಾರವಾಗಿದೆ. ಹೀಗಾಗಿ, ಮದುವೆಯ ಬಳಿಕ ಬಲವಂತದ ಮತಾಂತರ ತಡೆಯಲು ದೇಶವ್ಯಾಪಿ ಕಾಯ್ದೆ ಇಲ್ಲ ಎಂದಿದ್ದಾರೆ. ಮಧ್ಯಪ್ರದೇಶ, ಉತ್ತರ ಪ್ರದೇಶಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದೆ. ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಅದನ್ನು ಜಾರಿಗೆ ತರುವ ಬಗ್ಗೆ
ಚಿಂತನೆಗಳು ನಡೆದಿವೆ. ಪರಿಷ್ಕಣೆಗೆ ಕ್ರಮ: ಇದೇ ವೇಳೆ ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಇರುವ ಕೆನೆ ಪದರ ನಿರ್ಧರಿಸುವ ಇರುವ ಆದಾಯದ ಮಿತಿ ಬದಲು ಮಾಡುವ ನಿಟ್ಟಿನಲ್ಲಿನಲ್ಲಿ ಪರಿಶೀಲನೆ ನಡೆದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.