Advertisement
ನಗರದ ಗಿರಿಯಮ್ಮ ವೃತ್ತದಲ್ಲಿರುವ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ವತಿಯಿಂದ ದೇವನಹಳ್ಳಿ ಮಂಡಲದ ನೂತನ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಸನ್ಮಾನ ಹಾಗೂ ವಿವಿಧ ಪಕ್ಷಗಳ ಮುಖಂಡರುಗಳ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಟಿಕೆಟ್ ಕೇಳಲು ಬರಬೇಡಿ: ಕೇವಲ ನಾಯಕರುಗಳ ಮನೆಗಳನ್ನು ಸುತ್ತಿಕೊಂಡು ಇದ್ದರೆ ಸಾಲದು, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ತಳ ಮಟ್ಟದಿಂದ ಬಲಗೊಳಿಸಬೇಕು. ಮುಂದಿನ ಗ್ರಾಪಂ, ಜಿಪಂ , ತಾಪಂ , ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು. ಇಲ್ಲವಾದರೆ, ವಿಧಾನಸಭಾ ಚುನಾವಣೆಯ ಟಿಕೇಟ್ ಕೇಳಲು, ನಮ್ಮ ಮನೆ ಬಾಗಲಿಗೆ ಯಾರೂ ಬರಬೇಡಿ ಎಂದರು.
ಬಜೆಟ್ ನಂತರ ಅಭಿವೃದ್ಧೀ ಪರ್ವ: ನೆರೆ ಹಾವಳಿ ಯಿಂದ ರಾಜ್ಯದ ಅಭಿವೃದ್ಧಿ ಕಾರ್ಯದಲ್ಲಿ ಒಂದಿಷ್ಟು ಹಿನ್ನಡೆಯಾಗಿದೆ.ಬಜೆಟ್ ನಂತರ ಅಭಿವೃದ್ಧಿ ಕಾರ್ಯಗಳು ಸಮಾರೋಪ ಹಾದಿಯಲ್ಲಿ ಸಾಗುತ್ತದೆ. ನೂತನ ಅಧ್ಯಕ್ಷರು, ಪದಾಧಿಕಾರಿಗಳು ಪಕ್ಷದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ವಿದೇಶದಿಂದ ಬಂದ ನಂತರ ವಿಸ್ತರಣೆ: ಮುಖ್ಯ ಮಂತ್ರಿಗಳು ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದು ಅವರು ಬಂದ ಕೂಡಲೇ ಸಚಿವ ಸಂಪುಟ ರಚನೆ ಆಗುತ್ತದೆ. ದೇವನಹಳ್ಳಿ ಮುಂದಿನ ಹತ್ತು ವರ್ಷದಲ್ಲಿ ಬೆಂಗಳೂರು ಸಿಟಿತಯಂತೆ ಬೆಳೆಯಲಿದೆ. ದೇವನಹಳ್ಳಿಗೆ ಸಾಕಷ್ಟು ಇತಿಹಾಸವಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿ ವಿಶ್ವದ ಗಮನ ಸೆಳೆದಿದೆ ಎಂದು ಹೇಳಿದರು. ನೂತನ ದೇವನಹಳ್ಳಿ ಮಂಡಲ ಅಧ್ಯಕ್ಷ ಬೊಮ್ಮವಾರ ಸುನೀಲ್ ಮಾತನಾಡಿ, ಪಕ್ಷದ ಎಲ್ಲಾ ಕಾರ್ಯಕರ್ತರು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡಲಾಗುವುದು ಎಂದರು.
ಮಾಜಿ ಶಾಸಕ ಜಿ.ಚಂದ್ರಣ್ಣ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್.ಎಂ ರವಿಕುಮಾರ್, ಪ್ರಭಾಕರ್, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಎ.ಸಿ ಗುರುಸ್ವಾಮಿ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ದೇಸು ನಾಗರಾಜ್, ರಾಜ್ಯ ರೈತ ಮೋರ್ಚಾ ಮಾಜಿ ಉಪಾಧ್ಯಕ್ಷ ನಾರಾಯಣ ಗೌಡ, ತಾ.ಸೊಸೈಟಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕೆ.ನಾಗೇಶ್, ಜಿಲ್ಲಾ ಪ್ರ.ಕಾರ್ಯದರ್ಶಿ ನಾರಾಯಣಸ್ವಾಮಿ,
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎನ್.ರಾಜ ಗೋಪಾಲ್, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ನೀಲೇರಿ ಮಂಜುನಾಥ್, ರವಿಕುಮಾರ್,ಮೇಳೆಕೋಟೆ ಗ್ರಾಪಂ ಉಪಾಧ್ಯಕ್ಷ ಚಿದಾನಂದ್, ಪುರಸಭಾ ಸದಸ್ಯೆ ಲಕ್ಷ್ಮೀ, ತಾ.ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ, ಪ್ರಧಾನ ಕಾರ್ಯದರ್ಶಿ ವಿಮಲಾ, ಜಿಲ್ಲಾ ಮಹಿಳಾ ಘಟಕದ ಪ್ರ.ಕಾರ್ಯದರ್ಶಿ ಗಾಯಿತ್ರಿ, ಎಸ್ ಟಿ ಮೂರ್ಚಾ ಜಿಲ್ಲಾಧ್ಯಕ್ಷ ಮುನಿ ಕೃಷ್ಣಪ್ಪ, ಶಿವಪ್ರಸಾದ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.