ಉಡುಪಿ: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಮಂಗಳೂರಿನ ಅಶ್ವಿನಿ ಸತೀಶ್ ಪೈ ಉತ್ತೀರ್ಣರಾಗಿದ್ದಾರೆ. ಮಂಗಳೂರಿನ ಎಂಆರ್‌ಪಿಎಲ್ ಅರೋಮಾಟಿಕ್ ಕಾಂಪ್ಲೆಕ್ಸ್ ಹಾಗೂ ಎಪಿಎಸ್‌ಬಿ ಆ್ಯಂಡ್ ಅಸೋಸಿಯೇಟ್ ಕಂಪೆನಿಯಲ್ಲಿ ಆರ್ಟಿಕಲ್ಶಿಪ್ ನಡೆಸಿದ್ದು, “ಸಿಎ’ಯ ಎರಡು ಹಂತಗಳಾದ ಸಿಪಿಟಿ ಹಾಗೂ ಇಂಟರ್ ಮೀಡಿಯೆಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್‌ನಲ್ಲಿ ಪಡೆದಿದ್ದಾರೆ. ಇವರು ಎಚ್. ಸತೀಶ್ ಪೈ ಮತ್ತು ಆಶಾ ಸತೀಶ್ ಪೈ ದಂಪತಿಯ ಪುತ್ರಿ.
ಮಂಗಳೂರಿನ ಎಚ್. ಪಲ್ಲವಿ ಪ್ರಭು ಉತ್ತೀರ್ಣರಾಗಿದ್ದಾರೆ. ಲೆಕ್ಕಪರಿಶೋಧಕ ಪಿ. ನರೇಂದ್ರ ಪೈ ಬಳಿ ಆರ್ಟಿಕಲ್‌ಶಿಪ್ ನಡೆಸಿದ್ದು, “ಸಿಎ’ಯ ಇಂಟರ್ ಮೀಡಿಯೆಟ್‌ನ ತರಬೇತಿಯನ್ನು ತ್ರಿಶಾ ಕ್ಲಾಸಸ್‌ನಲ್ಲಿ ಪಡೆದಿರುತ್ತಾರೆ. ಇವರು ಪ್ರಶಾಂತ್ ಪ್ರಭು ಮತ್ತು ಲಕ್ಷ್ಮೀ ಪ್ರಭು ದಂಪತಿಯ ಪುತ್ರಿ.
ಮಂಗಳೂರಿನ ತನ್ವಿ ಜೆ.ಎನ್. ಉತ್ತೀರ್ಣರಾಗಿದ್ದಾರೆ. ಲೆಕ್ಕಪರಿಶೋಧಕ ಮನೋಹರ್ ಚೌಧರಿ ಆ್ಯಂಡ್ ಅಸೋಸಿಯೇಟ್ಸ್ ಬಳಿ ಆರ್ಟಿಕಲ್‌ಶಿಪ್ ನಡೆಸಿದ್ದು, “ಸಿಎ’ಯ ಇಂಟರ್ ಮೀಡಿಯೆಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್‌ನಲ್ಲಿ ಪಡೆದಿದ್ದಾರೆ. ಇವರು ಜೈನಾಥ್ ಎನ್.ಮತ್ತು ಉಷಾ ಜೆ.ಎನ್. ದಂಪತಿಯ ಪುತ್ರಿ.