Advertisement
ನೀತಿ ಸಂಹಿತೆ ಜಾರಿಯಲ್ಲಿರುವಾಗ ಹಾಗೂ ಚುನಾವಣಾ ಪ್ರಚಾರದ ವೇಳೆ ರಾಜಕೀಯಪಕ್ಷಗಳು, ಅದರ ಪ್ರತಿನಿಧಿಗಳು, ಅಭ್ಯರ್ಥಿಗಳು ಅಥವಾ ಅವರಿಗೆ ಸಂಬಂಧಪಟ್ಟವರು, ಇಲ್ಲವೇ ಯಾರೇ ಸಾರ್ವಜನಿಕರು ಚುನಾವಣಾ ಅಕ್ರಮಗಳಲ್ಲಿ ತೊಡಗಿದ್ದರೆ, ಮತದಾರರಿಗೆ ಆಮಿಷ ಒಡ್ಡುತ್ತಿದ್ದರೆ, ಬೆದರಿಕೆ ಹಾಕುತ್ತಿದ್ದರೆ ಸಾಮಾನ್ಯ ನಾಗರಿಕರು ಈ ಆ್ಯಪ್‌ನ ನೆರವಿನಿಂದ ಅದನ್ನು ತಡೆಯಬಹುದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಬಳಸಲಾಗಿತ್ತು. ಅದನ್ನು ಈಗ ರಾಜ್ಯವ್ಯಾಪಿ ಮಾಡಲಾಗಿದೆ.
ಸಿವಿಜಿಲ್ ಆ್ಯಪ್ ಜಿಪಿಎಸ್ ಆಧಾರಿತವಾಗಿದ್ದು, ಚುನಾವಣಾ ಅಕ್ರಮಗಳು ಯಾವ ಭೌಗೋಳಿಕ ಪ್ರದೇಶದಿಂದ ಮಾಹಿತಿ ಬಂದಿರುತ್ತದೆಯೋ ಅದಕ್ಕೆ ಹತ್ತಿರವಾದ ಫ್ಲೈಯಿಂಗ್ ಸ್ಕ್ವಾಡ್‌ಗೆ ಮಾಹಿತಿ ಬರುತ್ತದೆ. ಜಿಐಎಸ್ ಮ್ಯಾಪ್ ಆಧಾರದಲ್ಲಿ ದೂರುಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ. ಮಾಹಿತಿ ಸಿಕ್ಕ ತಕ್ಷಣ 15 ನಿಮಿಷದೊಳಗೆ ಚುನಾವಣಾ ನೀತಿ ಸಂಹಿತೆ ಜಾರಿ ತಂಡ ಸ್ಥಳಕ್ಕೆ ಆಗಮಿಸುತ್ತದೆ. ದೂರು ಪರಿಶೀಲಿಸಿ ಅದರ ಬಗ್ಗೆ 100 ನಿಮಿಷದಲ್ಲಿ ಕ್ರಮಕೈಗೊಂಡು ಆಯೋಗಕ್ಕೆ ವರದಿ ಸಲ್ಲಿಸಲಾಗುತ್ತದೆ. ಗೂಗಲ್ ಪ್ಲೇಸ್ಟೋರ್ ಅಥವಾ ಆ್ಯಪ್ ಸ್ಟೋರ್ ನಿಂದ ಸಿವಿಜಿಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ನಿರ್ವಹಣೆಗೆ 11 ಸಾವಿರ ಸಿಬ್ಬಂದಿ
Related Articles
Advertisement
ಆ್ಯಪ್ ದುರ್ಬಳಕೆ ಮಾಡಿಕೊಂಡರೆ ಹುಷಾರ್ಚುನಾವಣಾ ನೀತಿ ಸಂಹಿತೆ ಜಾರಿಯ ಭಾಗವಾಗಿ ಈ ಸಿವಿಜಿಲ್ ಆ್ಯಪ್ ತರಲಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಯಲು ಸಾಮಾನ್ಯ ನಾಗರಿಕರಿಗೆ ಇದೊಂದು ಸಮರ್ಥ ಅಸ್ತ್ರ. ಆದರೆ, ಇದನ್ನು ಅತ್ಯಂತ ಜವಾಬ್ದಾರಿಯಿಂದ ಬಳಕೆ ಮಾಡಿಕೊಳ್ಳಬೇಕು. ಬೇಕಾ ಬಿಟ್ಟಿ ದೂರು ಕೊಡುವುದಾಗಲಿ, ಅನಗತ್ಯ ಫೋಟೋ, ವಿಡಿಯೋ ಹಾಕುವುದನ್ನು ಆಯೋಗ ಸಹಿಸುವುದಿಲ್ಲ. ಯಾರಾದರೂ ಪದೇಪದೆ ಇದನ್ನು ಮುಂದುವರಿಸಿದರೆ, ಅವರ ಮೊಬೈಲ್ ನಂಬರ್‌ನನ್ನು ಆ್ಯಪ್‌ನಿಂದ ಬ್ಲಾಕ್ ಮಾಡಲಾಗುತ್ತದೆ. ಈ ಆ್ಯಪ್‌ನ ದುರ್ಬಳಕೆ ಮಾಡಿಕೊಂಡರೆ ಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಎಚ್ಚರಿಕೆ ನೀಡಿದರು. ಸುಳ್ಳು ಕೇಸ್‌ಗಳೇ ಹೆಚ್ಚು
ಮಾ.10ರಿಂದ ಸಿ ವಿಜಿಲ್ ಆ್ಯಪ್ ಅನುಷ್ಠಾನಕ್ಕೆ ತರಲಾಗಿದೆ. ಇಲ್ಲಿವರೆಗೆ 186 ದೂರುಗಳು ಬಂದಿದ್ದು, ಅದರಲ್ಲಿ 111 ದೂರು ಸುಳ್ಳು ಎಂದು ಗೊತ್ತಾಗಿದೆ. ಬಹುತೇಕರು ಸೆಲ್ಫಿ ಹಾಕಿದ್ದಾರೆ. 45 ದೂರುಗಳನ್ನು ವಿಲೇವಾರಿ ಮಾಡಲಾಗಿದ್ದು,
30 ದೂರುಗಳು ತನಿಖಾ ಹಂತದಲ್ಲಿವೆ ಎಂದು ಮುಖ್ಯ ಚುನಾವಣಾಧಿಕಾರಿ ಮಾಹಿತಿ ನೀಡಿದರು.