Advertisement

ಟಿಕೆಟ್‌ ಅಂತಿಮಗೊಳಿಸುವುದು ಸಂಸದೀಯ ಮಂಡಳಿ: ಸಿ.ಟಿ.ರವಿ

11:26 PM Jul 24, 2022 | Team Udayavani |

ಬೆಂಗಳೂರು : ನಮ್ಮಲ್ಲಿ ಪ್ರಧಾನಿಗೂ ಟಿಕೆಟ್‌ ಅಂತಿಮಗೊಳಿಸುವುದು ಪಕ್ಷದ ಸಂಸದೀಯ ಮಂಡಳಿ. ಇದು ಯಡಿಯೂರಪ್ಪ ಅವರಿಗೂ ಗೊತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಕೇವಲ ಸಲಹೆ ನೀಡಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಇಲ್ಲಿ ಯಾವುದೇ ಗೊಂದಲ ಇಲ್ಲ. ಯಡಿಯೂರಪ್ಪ ಅವರು ಚುನಾವಣೆಗೆ ನಿಲ್ಲುವುದಿಲ್ಲ ಅಂದಿದ್ದಾರೆಯೇ ಹೊರತು, ಸಕ್ರಿಯ ರಾಜಕೀಯದಿಂದ ದೂರ ಹೋಗುತ್ತೇನೆ ಎಂದಿಲ್ಲ. ಅವರೊಬ್ಬ ಜನನಾಯಕ. ಮುಖ್ಯಮಂತ್ರಿಗಳಾಗಿಯೂ ಕೆಲಸ ಮಾಡಿದವರು. ಪಕ್ಷವನ್ನು ಕಟ್ಟಿದವರಲ್ಲಿ ಅವರೂ ಒಬ್ಬರು ಎಂದರು.

ಮುಖವಾಡ ಕಳಚಿದ ರಮೇಶ್‌ ಕುಮಾರ್‌
ರಮೇಶ್‌ ಕುಮಾರ್‌ ಈ ಬಾರಿ ಸತ್ಯ ಹೇಳಿದ್ದಾರೆ. ಯಾವಾಗಲೂ ಮುಖವಾಡ ಧರಿಸಿರುವ ಅವರು ಈ ಬಾರಿ ಕಳಚಿದ್ದಾರೆ. ಜತೆಗೆ ಕಾಂಗ್ರೆಸ್‌ ಮುಖವಾಡವನ್ನು ಕಳಚಿದ್ದಾರೆ ಎಂದು ರವಿ ಹೇಳಿದರು.

ಒಕ್ಕಲಿಗರಲ್ಲಿ ಸಣ್ಣ ಮನಸ್ಥಿತಿಯಿಲ್ಲ
ಒಕ್ಕಲಿಗರು ಸಣ್ಣ ಮನಸ್ಥಿತಿಯಿಂದ ಯೋಚಿಸುವುದಿಲ್ಲ ಹಾಗೂ ಭ್ರಷ್ಟಾಚಾರವನ್ನು ಬಯಸುವುದಿಲ್ಲ. ಯಾರ ಯೋಗ್ಯತೆ ಏನು ಎಂಬುದು ಅವರಿಗೆ ಗೊತ್ತಿದೆ. ಒಕ್ಕಲಿಗರು ಇಷ್ಟಪಡೋದು ಸರ್ವಹಿತ ಬಯಸುವ ರಾಜಕೀಯವನ್ನು ಎಂದರು.

ಎಲ್ಲರಿಗೂ ಒಂದೇ ಕಾನೂನು
ಫ್ಲೆಕ್ಸ್ ಹಾಕಿದವರ ಮೇಲೆ ಎಫ್ಐಆರ್‌ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿ ಸಿದ ಅವರು, ನಾನು ಹುಟ್ಟುಹಬ್ಬದ ಫ್ಲೆಕ್ಸ್ ಹಾಕಲು ಹೇಳಿಲ್ಲ. ಹಾಕಿದ್ದನ್ನು ಸಮರ್ಥಿಸುವುದಿಲ್ಲ. ಅವರ ಮೇಲೆ ಕಾನೂನು ಪ್ರಕಾರ ಕ್ರಮ ಆಗಲಿ. ಕಾನೂನು ಸಿದ್ದರಾಮಯ್ಯ ಅವರಿಗೂ ಒಂದೇ; ಸಿಟಿ ರವಿಗೂ ಒಂದೇ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next