ಬೆಂಗಳೂರು: ಕೆಲವರು ಜಾತಿ ಹೆಸರನ್ನು ಹೇಳಿ ರಾಜಕೀಯ ಮಾಡುತ್ತಾರೆ. ತಮಗೆ ಬೇಕಾದ ಮುಖವಾಡ ಹಾಕುತ್ತಾರೆ. ಅವರು ಜಾತಿ ಹೆಸರನ್ನು ಹೇಳುವುದು ಬಿಟ್ಟರೆ ಅವರು ಬದುಕಲು ಸಾಧ್ಯವಿಲ್ಲ. ಯಾರಿಗೆ ತನ್ನ ಯೋಗ್ಯತೆ ಮೇಲೆ ಅತ್ಯುನ್ನತ ಸ್ಥಾನ ತಲುಪಲು ಸಾಧ್ಯವಿಲ್ಲವೋ ಅಂತವರು ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ ಎಂದು ಹುಯಿಲೆಬ್ಬಿಸುತ್ತಾರೆ.
ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಕೌಟುಂಬಿಕ ಭಟ್ಟಂಗಿಗಳ ಮೂಲಕ ಆಂತರಿಕ ಪ್ರಜಾಪ್ರಭುತ್ವ ಇಲ್ಲವಾಗಿಸಿದ್ದಾರೆ. ಈಗ ಧ್ರುವೀಕರಣ ರಾಜಕೀಯ ಶುರುವಾಗಿದೆ. ಪರಿವಾರದ ಹೆಸರಲ್ಲಿ, ಅಪ್ಪ ಅಮ್ಮ ಅಜ್ಜನ ಹೆಸರನ್ನು ಹೇಳಿಕೊಂಡು ಅಧಿಕಾರ ನಮ್ಮ ಜನ್ಮ ಸಿದ್ಧ ಹಕ್ಕು ಎನ್ನುವುದೊಂದು ಭಾಗ, ತುಷ್ಟಿಕರಣದ ರಾಜಕೀಯ ಇನ್ನೊಂದು ಕಡೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ ಇದು ಮತ್ತೊಂದು ಭಾಗ. ಸ್ವಾರ್ಥದ ರಾಜಕೀಯ ಒಂದು ಕಡೆಯಾದರ ರಾಷ್ಟ್ರದ ಏಳಿಗೆಗಾಗಿ ರಾಷ್ಟ್ರವಾದದ ಬಿಜೆಪಿ ಇನ್ನೊಂದು ಕಡೆ ಎಂದರು.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಶಿಂಧೆ ದರ್ಬಾರ್ ಶುರು: ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ಏಕನಾಥ ಶಿಂಧೆ
ಬಿಜೆಪಿ ಬೆಳವಣಿಗೆ ಕಂಡು ಜಾತಿವಾದಿಗಳು, ಪರಿವಾರವಾದಿಗಳು ಕಂಗೆಟ್ಡಿದ್ದಾರೆ. ಬಿಜೆಪಿ ಬೆಳವಣಿಗೆಯಿಂದ ಜಾತಿವಾದಿ ತುಷ್ಟಿಕರಣ ವಾದಕ್ಕೆ ಕೊಡಲಿ ಪೆಟ್ಟು ಕೊಟ್ಟಿದೆ. ಹಾಗಾಗಿ ಬಾಲ ಸುಟ್ಟ ಬೆಕ್ಕಿನಂತೆ ಚೀರಾಡುತ್ತಿದ್ದಾರೆ. ಭಾರತಕ್ಕೆ ವಿಶ್ವ ಮಟ್ಟದ ನಾಯಕತ್ವ ಸಿಕ್ಕಿದೆ. ಭಾರತಕ್ಕೆ ನಾಯಕತ್ವದಿಂದ ಜಗತ್ತಿನಲ್ಲಿ ಒಂದು ಸ್ಥಾನ ಮಾನ ಸಿಕ್ಕಿದೆ ಎಂದು ಸಿ.ಟಿ.ರವಿ ಹೇಳಿದರು.
ಮೊದಲ ಬಾರಿ ರಾಷ್ಟ್ರಪತಿ ಮಾಡುವ ಅವಕಾಶ ನಮಗೆ ಬಂದಾಗ ವಾಜಪೇಯಿ ಅವರ ನೇತೃತ್ವದಲ್ಲಿ ಅಬ್ಲುಲ್ ಕಲಾಂರನ್ನು ಆಯ್ಕೆ ಮಾಡಿದ್ದೆವು. ನಮ್ಮಲ್ಲೇ ಒಬ್ಬರನ್ನು ಮಾಡಿದ್ದಾರೆ ಎಂದು ಎಲ್ಲರೂ ಸಂತಸಪಟ್ಟರು. ಆದರೆ ಯುಪಿಎ ಕಲಾಂರನ್ನು ಎರಡನೇ ಅವಧಿಗೆ ರಾಷ್ಟ್ರಪತಿ ಆಗಲು ಅವಕಾಶ ನೀಡಲಿಲ್ಲ. ರಮಾನಾಥ್ ಕೋವಿಂದ್ ಯಾವುದೇ ವಿವಾದ ಇಲ್ಲದೇ ಅವಧಿ ಮುಗಿಸಿದ್ದಾರೆ. ಈಗ ದ್ರೌಪದಿ ಮುರ್ಮು ಅಪಾರ ಅನುಭವ ಹೊಂದಿದವರು. ಸಾಮಾಜಿಕ ನ್ಯಾಯ ಎನ್ನುವುದು ನಮಗೆ ಮುಖವಾಡವಲ್ಲ. ಅದು ನಮಗೆ ಬದ್ಧತೆ ಎಂದು ಯಶ್ವಂತ್ ಸಿನ್ಹಾ ಆರೋಪಕ್ಕೆ ಸಿಟಿ ರವಿ ತಿರುಗೇಟು ನೀಡಿದರು.