Advertisement

ಡಿಕೆಶಿ ಕನಕಪುರಕ್ಕಷ್ಟೇ ಹುಲಿ, ರಾಜ್ಯಕ್ಕೆ ಅಲ್ಲ :ಸಚಿವ ಸಿ ಟಿ ರವಿ

09:18 AM Nov 19, 2019 | Team Udayavani |

ಚಿಕ್ಕಬಳ್ಳಾಪುರ: ಡಿ.ಕೆ.ಶಿವಕುಮಾರ್ ಬರೀ ಕನಕಪುರಕ್ಕೆ ಅಷ್ಟೆ ಹುಲಿ ಇಡೀ ರಾಜ್ಯಕ್ಕೆ ಅಲ್ಲ ಎಂದು ರಾಜ್ಯ ಪ್ರವಾಸೋದ್ಯಮ ಸಿ.ಟಿ.ರವಿ ತಿಳಿಸಿದರು.

Advertisement

ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್.ಪೇಟೆಯಲ್ಲಿ ನಾರಾಯಣಗೌಡ ಮೇಲೆ ಚಪ್ಪಲಿ ತೂರಾಟ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಲಾಗದೇ ಮೂರನೇ ದರ್ಜೆ ರಾಜಕಾರಣವನ್ನು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮಾಡುತ್ತಿವೆ ಎಂದು ಕಿಡಿಕಾರಿದರು.

ಕನಕಪುರಕ್ಕೆ ಒಬ್ಬ ಹುಲಿ, ಚನ್ನಪಟ್ಟಣಕ್ಕೆ ಹುಲಿ ಇರಬಹುದು. ಆದರೆ ಡಿ.ಕೆ.ಶಿವಕುಮಾರ ಆಟ ಚಿಕ್ಕಬಳ್ಳಾಪುರದಲ್ಲಿ ಏನು ನಡೆಯುವುದಿಲ್ಲ ಎಂದರು. ಮಂಡ್ಯದಲ್ಲಿ ಇವರ ಆಟ ಏನು ನಡೆಯಿತು. ಅಲ್ಲಿ ಸ್ವಾಭಿಮಾನಕ್ಕೆ ಗೆಲುವು ಆದಂತೆ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ಗೆಲುವು ಆಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next