Advertisement

ಎಲ್ಲಾ ಯೋಜನೆಗಳಲ್ಲೂ ಜಾತಿ ತುರುಕಿದ ಕಾಂಗ್ರೆಸ್‌ : ಸಿ.ಟಿ.ರವಿ ಟೀಕೆ

08:24 PM Nov 09, 2021 | Team Udayavani |

ಬೆಂಗಳೂರು: ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಯೋಜನೆಯಲ್ಲಿ ಜಾತಿಯನ್ನು ತುರುಕಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

Advertisement

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಆಡಳಿತದಲ್ಲಿ ಯೋಜನೆಗಳಲ್ಲಿ ಜಾತಿ ತುರುಕುವ ಕೆಲಸ ನಡೆಯಿತು. ಅದನ್ನು ಪರಾಕಾಷ್ಠೆಗೆ ಒಯ್ದವರು ಸಿದ್ದರಾಮಯ್ಯ ಎಂದು ಟೀಕಿಸಿದರು.

ಯಾರು ಕೊಳಕು ಎಂಬುದನ್ನು ಅಂತರಂಗದ ಕನ್ನಡಿಯಲ್ಲಿ ನೋಡಿಕೊಳ್ಳಬೇಕು. ಯಾರು ಎಲ್ಲರಿಗೂ ಅವಕಾಶ ನೀಡಿದ್ದಾರೋ ಅವರನ್ನು ಕೊಳಕರು ಎನ್ನುವವರ ಮನಸ್ಥಿತಿಯೇ ಕೊಳಕಾಗಿದೆ. ಯಾರ ಕನ್ನಡಕ ಕೊಳಕಾಗಿರುತ್ತೋ ಅವರು ನೋಡೋದೆಲ್ಲ ಕೊಳಕಾಗಿಯೇ ಕಾಣುತ್ತದೆ ಎಂದು ಹೇಳಿದರು.

ನಾವು ಜಾತಿ ರಾಜಕಾರಣ ಮಾಡಿದ ಕಾರಣಕ್ಕಾಗಿಯೇ ಎ.ಪಿ.ಜೆ.ಅಬ್ದುಲ್‌ ಕಲಾಂ ಅವರು ರಾಷ್ಟ್ರಪತಿ ಆಗಿದ್ದು, ನಮ್ಮ ಜಾತಿ ರಾಜಕಾರಣಕ್ಕಾಗಿ ಕಾಲಿಗೆ ಚಪ್ಪಲಿಯೂ ಹಾಕದ ಹಾಜಬ್ಬ ಮತ್ತು ತುಳಸಿ ಗೌಡರಿಗೆ ಪದ್ಮ ಪ್ರಶಸ್ತಿ ಸಿಕ್ಕಿದ್ದಲ್ಲವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಆಡಳಿತದಲ್ಲಿ ಬಹಳಷ್ಟು ಜನ ಬಾಟ್ಲಿಮೇಟ್‌ಗಳಿಗೆ ಪ್ರಶಸ್ತಿ ಸಿಗುತ್ತಿತ್ತು. ಈಗ ತಳಮಟ್ಟದವರಿಗೆ ಸಿಗುತ್ತಿದೆ. ಇವರು ಜಾತಿವಾದಿಗಳಲ್ಲ. ಅದಕ್ಕಾಗಿಯೇ ಶಾದಿ ಭಾಗ್ಯ ಒಂದು ಕೋಮಿಗೆ ಮಾತ್ರ ಕೊಟ್ಟಿದ್ದಾರೆ ಎಂದರು.

Advertisement

ಇದನ್ನೂ ಓದಿ : ಇನ್‌ಸ್ಟಾಗ್ರಾಂ ಡೌನ್‌ಲೋಡ್‌ಗೆ ಭಾರತವೇ ಫ‌ಸ್ಟ್‌

ಮೇಕೆದಾಟು ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರಿಗೆ ಜಾರಿಯಾಗುವ ಯೋಜನೆ ಎಂದರೆ ಅಲ್ಲಿ ಕನ್ನಡಿಗರು ಮಾತ್ರ ಇದ್ದಾರಾ, ಎಲ್ಲ ಜನಾಂಗದವರು ಇಲ್ಲವೇ, ತಮಿಳು, ತೆಲುಗು, ಹಿಂದಿ ಸೇರಿ ಎಲ್ಲ ಭಾಷೆಯವರೂ ಇದ್ದಾರೆ. ಚೆನ್ನೈ ಕುಡಿಯುವ ನೀರಿನ ಯೋಜನೆ ಎಂದರೆ ಅಲ್ಲಿ ಎಲ್ಲ ಭಾಷೆಯವರೂ ಇಲ್ಲವೇ. ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಜೊತೆ ಬಿಜೆಪಿ ಇದೆ. ಒಂದು ರಾಷ್ಟ್ರೀಯ ಪಕ್ಷವಾಗಿ ನಾವು ಎಲ್ಲ ರಾಜ್ಯಗಳ ರೈತರನ್ನು ಸಮಾನವಾಗಿ ನೋಡುತ್ತೇವೆ ಎಂದು ತಿಳಿಸಿದರು.

ಬಿಟ್‌ಕಾಯಿನ್‌ ಪ್ರಕರಣದ ಶ್ರೀಕಿಯನ್ನು ಬಿಜೆಪಿ ಸರ್ಕಾರ ಬಂಧಿಸಿದ್ದು ಅದಕ್ಕೂ ಮೊದಲು ಯಾರ ಜೊತೆ ಶ್ರೀಕಿ ಸಂಬಂಧ ಇತ್ತು, ಮಲ್ಯ ಟವರ್‌ನಲ್ಲಿ ಯಾರ ಜೊತೆ ಆತ ಪಾರ್ಟಿ ಮಾಡುತ್ತಾ ಕುಳಿತಿದ, ಬಿಜೆಪಿ ಎಂಎಲ್‌ಎ ಮಗನ ಜೊತೆಗಾ, ಕಾಂಗ್ರೆಸ್‌ ಶಾಸಕನ ಮಗನ ಜೊತೆಗಾ ಎಂದು ಕೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next