Advertisement

ಮೈಸೂರಿನಲ್ಲಿ ಸಂರಕ್ಷಣ ವಿ.ವಿ. ಆರಂಭಿಸಲು ಸಿ.ಟಿ. ರವಿ ಮನವಿ

08:10 AM Aug 19, 2020 | mahesh |

ಬೆಂಗಳೂರು: ಉದ್ದೇಶಿತ ಭಾರತೀಯ ಪರಂಪರೆ ಮತ್ತು ಸಂರಕ್ಷಣ ವಿಶ್ವವಿದ್ಯಾಲಯವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರಂಭಿಸಬೇಕು ಎಂದು ಸಚಿವ ಸಿ.ಟಿ. ರವಿ ಅವರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ. ದಿಲ್ಲಿಯಲ್ಲಿ ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿ.ಟಿ. ರವಿ ಅವರು, ಕೇಂದ್ರ ಸರಕಾರ ಬಜೆಟ್‌ನಲ್ಲಿ ಭಾರತೀಯ ಪರಂಪರೆ ಮತ್ತು ಸಂರಕ್ಷಣ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಘೋಷಿಸಿದ್ದು, ಮೈಸೂರಿನಲ್ಲಿ ವಿಶ್ವವಿದ್ಯಾನಿಲಯ ಆರಂಭಿಸಿದರೆ ರಾಜ್ಯ ಸರಕಾರ ಅಗತ್ಯ ಭೂಮಿ ಸಹಿತ ಎಲ್ಲ ರೀತಿಯ ಮೂಲ ಸೌಕರ್ಯ ನೀಡಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next