ಬೆಂಗಳೂರು: “ಬೆಂಗಳೂರಿನಾಚೆ’ (ಬಿಯಾಂಡ್ ಬೆಂಗಳೂರು) ಎಂಬ ಪರಿಕಲ್ಪನೆಯಡಿ ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಮಂಗಳೂರು ಸೇರಿದಂತೆ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಐಟಿ-ಬಿಟಿ ಕ್ಷೇತ್ರ ದಲ್ಲಿ 75 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ಗುರಿ ರಾಜ್ಯಸರಕಾರ ಹೊಂದಿದೆ.
“ಉದಯವಾಣಿ’ ಕಚೇರಿಯಲ್ಲಿ ಸೋಮವಾರ “ಸಂವಾದ’ದಲ್ಲಿ ಪಾಲ್ಗೊಂಡು ಮಾತನಾಡಿದ ಐಟಿ-ಬಿಟಿ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ ಅವರು, ಈ ನಿಟ್ಟಿನಲ್ಲಿ ವಿಜ್ಞಾನ, ಐಟಿ-ಬಿಟಿ ಇಲಾಖೆ ಈಗಾಗಲೇ ಕಾರ್ಯಪ್ರವೃತ್ತವಾಗಿದೆ’ ಎಂದರು.
ಹತ್ತು ತಿಂಗಳಲ್ಲಿ 24 ಕಂಪೆನಿಗಳನ್ನು ಬೆಂಗಳೂರಿನಾಚೆಗಿನ ನಗರಗಳಲ್ಲಿ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಪೈಕಿ ಏಳು ಕಂಪೆನಿಗಳು ಮೈಸೂರಿಗೆ ಬಂದಿವೆ. ಈ ಪ್ರಯೋಗ ಮುಂಬರುವ ದಿನಗಳಲ್ಲಿ ಮತ್ತಷ್ಟು ವಿಸ್ತರಣೆಯಾಗಲಿದೆ. ಮೂರು ವರ್ಷಗಳಲ್ಲಿ 10 ಬಿಲಿಯನ್ ಡಾಲರ್ (75 ಸಾವಿರ ಕೋಟಿ) ಬಂಡವಾಳ ಹೂಡಿಕೆ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಇಎಸ್‌ಡಿಎಂ (ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಆ್ಯಂಡ್ ಮ್ಯಾನ್ಯು ಫ್ಯಾಕ್ಚರಿಂಗ್), ರಕ್ಷಣ ವಿಭಾಗ ಮತ್ತು ಸೈಬರ್ ಸೆಕ್ಯುರಿಟಿಯಲ್ಲಿ ಹೂಡಿಕೆಯಾಗಿದೆ. 200 ಎಕರೆಯಲ್ಲಿ ಇಎಂಸಿ (ಎಲೆಕ್ಟ್ರಾನಿಕ್ ಮ್ಯಾನ್ಯು ಫ್ಯಾಕ್ಚರಿಂಗ್‌ಕ್ಲಸ್ಟರ್) ಬರಲಿದೆ. ಇದೇ ಮಾದರಿಯಲ್ಲಿ ಮಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆಯಂಥ ನಗರಗಳಲ್ಲಿ ಸ್ಟಾರ್ಟ್‌ಅಪ್, ಐಟಿ-ಬಿಟಿ, ಎಲೆಕ್ಟ್ರಾನಿಕ್ಸ್ ವಲಯವನ್ನು ಕೊಂಡೊಯ್ಯಲಾಗು ವುದು ಎಂದರು.
ದೇಶದಲ್ಲೇ ಮೊದಲ ಪ್ರತಿಷ್ಠಿತ ಸೆಮಿಕಂಡಕ್ಟರ್ ಘಟಕ ಮೈಸೂರಿನಲ್ಲಿ ಫೆಬ್ರವರಿ ವೇಳೆಗೆ ಆರಂಭವಾಗಲಿದೆ. 22,900 ಕೋಟಿ ಹೂಡಿಕೆ ಆಗಲಿದೆ. 1,500 ಮಂದಿಗೆ ಉದ್ಯೋಗದ ಜತೆಗೆ ಪರೋಕ್ಷವಾಗಿ ಹತ್ತು ಸಾವಿರ ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದರು.
ಪಠ್ಯಕ್ರಮ ಬದಲಾವಣೆ ಅಲ್ಲ; ಅಂತರಶಿಸ್ತು ಅಷ್ಟೇ
ಎಂಜಿನಿಯರಿಂಗ್ ಪಠ್ಯಕ್ರಮ ಬದ ಲಾಯಿಸು ತ್ತಿಲ್ಲ. ಬದಲಿಗೆ ಈಗಿನ ಅಗತ್ಯಕ್ಕೆ ತಕ್ಕಂತೆ ಅಂತರ ಶಿಸ್ತೀಯ ಸ್ಪರ್ಶ ನೀಡಲಾಗುತ್ತಿದೆ. ಈ ಪ್ರಯೋಗ ದಿಂದ ವಿದ್ಯಾರ್ಥಿಗಳ ಮುಂದೆ ಹೆಚ್ಚು ಆಯ್ಕೆಗಳು ತೆರೆದುಕೊಳ್ಳಲಿವೆ ಎಂದು ಡಾ| ಸಿ.ಎನ್. ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದರು.
ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಕಂಪ್ಯೂ ಟರ್ ಸೈನ್ಸ್ ಕಲಿಯಬಹುದು, ಮೆಕಾನಿಕಲ್ ಎಂಜಿನಿಯರ್ ಮತ್ತೂಂದು ಕೋರ್ಸ್ ಆಯ್ಕೆ ಮಾಡಿ ಕೊಳ್ಳ ಬಹುದು. ಇದರ ಮೂಲ ಉದ್ದೇಶ ಪರಿ ಕಲ್ಪನೆ ಆಧಾರಿತ ಕಲಿಕೆ, ಅಗತ್ಯಕ್ಕೆ ಪೂರಕವಾದ ದ್ದನ್ನು ಕಲಿಸುವುದು ಎಂದು ಹೇಳಿದರು.