Advertisement
ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತಮಗೆಲ್ಲರಿಗೂ ಗೊತ್ತಿದೆ. ಜೂನ್, ಜುಲೈ, ಆಗಸ್ಟ್ ನಲ್ಲಿ ರಾಜಕೀಯ ವಿಕೇಂದ್ರೀಕೃತ ಆಗುತ್ತದೆ, ರಾಜಕೀಯ ಬದಲಾಗುತ್ತದೆ ಎಂದು ಹೇಳಿದ್ದೆ. ಆರೂವರೆ ಕೋಟಿ ಜನರಿರುವ ರಾಜ್ಯದಲ್ಲಿ ಬದಲಾವಣೆ ಸಹಿಸುವುದಿಲ್ಲ ಎಂದರು.
Related Articles
Advertisement
ಒರಿಜಿನಲ್ ಕಾಪಿ ಇಲ್ಲ, ಝೆರಾಕ್ಸ್ ತಗೆದುಕೊಂಡು ಏನು ಮಾಡುವುದು. ಸಿಎಂ ಯಾರೇ ಆಗಲಿ, ಅದನ್ನು ನಮ್ಮ ಜನ ಒಪ್ಪಲ್ಲ. ನಾನು ಏನು ಹೇಳಿದರೂ ನಂಬುತ್ತಿರಲಿಲ್ಲ. ಈಗ ಸಿಕ್ಸ್ತ್ ಸೆನ್ಸ್ ಪ್ರಕಾರ ನಡೆದಿದೆ ಎಂದ ಅವರು, ನಾವು ಸಾಧು ಸಂತರ ಜೊತೆ ಇದ್ದವರು. ಮಠದ ಸ್ವಾಮಿಗಳು ಖಾವಿ ಹಾಕಿಕೊಂಡು ವಿದ್ಯೆ, ಅನ್ನ ಕೊಟ್ಟಿದ್ದಾರೆ. ಅವರು ಹಕ್ಕಿನ ಪ್ರಕಾರ ಕೇಳಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಹೊಸ ಪರ್ವ ಶುರುವಾಗಲಿದೆ. ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಬರಲಿಲ್ಲ. ಮಠದ ದಾಸೋಹಿ ನಾನು, ಯಡಿಯೂರಪ್ಪ ಭೇಟಿ ಆಗಲು ಬಂದೆ. ನಮ್ಮ ನಾಡು, ನಮ್ಮ ನೆಲ, ನಮ್ಮ ಜಲ ನಮ್ಮ ನಾಯಕನನ್ನ ಆಯ್ಕೆ ಮಾಡಬೇಕಿದೆ. ಸೆಪ್ಟೆಂಬರ್ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಇಬ್ರಾಹಿಂ ಹೇಳಿದರು.