Advertisement

ಐಎಎಫ್ ಗೆ ‘ಸಿ-17 ಗ್ಲೋಬ್‌ಮಾಸ್ಟರ್‌’ಬಲ

01:13 AM Aug 27, 2019 | mahesh |

ನವದೆಹಲಿ: ಸಿ-17 ಗ್ಲೋಬ್‌ಮಾಸ್ಟರ್‌ 3 (11ನೇ ಆವೃತ್ತಿ) ಹೆಸರಿನ ಸರಕು ಸಾಗಣೆ ವಿಮಾನಗಳನ್ನು, ಅಮೆರಿಕದ ಹೆಸರಾಂತ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್‌, ಸೋಮವಾರ ಭಾರತೀಯ ವಾಯುಪಡೆಗೆ (ಐಎಎಫ್) ಹಸ್ತಾಂತರ ಗೊಳಿಸಿದೆ.

Advertisement

ಹೆಚ್ಚು ತೂಕದ ವಸ್ತುಗಳು, ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಬಲ್ಲ ಛಾತಿಯಿರುವ ಈ ವಿಮಾನವು ಗಟ್ಟಿಮುಟ್ಟಾಗಿದ್ದು, ಅತಿ ಹೆಚ್ಚು ಸಿಬ್ಬಂದಿಯನ್ನೂ ಕೊಂಡೊಯ್ಯಬಲ್ಲದು. ಜತೆಗೆ, ಎಂಥಾ ಪ್ರತಿ ಕೂಲ ಹವಾಮಾನವಿದ್ದರೂ ಅದರ ನಡುವೆಯೇ ಪ್ರಯಾಣ ಬೆಳೆಸಬಲ್ಲ ದ್ದಾಗಿದೆ. ಇಂಥದ್ದೊಂದು ವಿಮಾನದ ಸೇರ್ಪಡೆ ಯಿಂದಾಗಿ ಐಎಎ ಫ್ನ ಕಾರ್ಯಾಚರಣೆಗಳಿಗೆ ಹೆಚ್ಚಿನ ಬಲ ಒದಗಿಸಿದಂತಾಗಿದೆ ಎಂದು ಬೋಯಿಂಗ್‌ ಸಂಸ್ಥೆ ತಿಳಿಸಿದೆ. ಸೇನಾ ಕಾರ್ಯಾಚರಣೆಗಳಿಗೆ ಮಾತ್ರವಲ್ಲದೆ, ಪ್ರಾಕೃತಿಕ ವಿಕೋಪದಂಥ ತುರ್ತು ಸಂದರ್ಭಗಳಲ್ಲಿಯೂ ಈ ವಿಮಾನವನ್ನು ಬಳಸಬಹುದಾಗಿದ್ದು, ಅಪಾರ ಪ್ರಮಾಣದ ನಿರಾಶ್ರಿತರನ್ನು ಏಕಕಾಲದಲ್ಲಿ ಬೇರೆಡೆಗೆ ಸ್ಥಳಾಂತರಿಸಲು ಸಾಧ್ಯವಾಗಲಿದೆ. 2013ರಲ್ಲಿ ಇದೇ ಮಾದರಿಯ ಸ್ಕೈ ಲಾರ್ಡ್ಸ್ ಸ್ಕ್ವಾಡ್ರನ್‌ ವಿಮಾನಗಳನ್ನು ಐಎಎಫ್ ತನ್ನಲ್ಲಿ ಸೇರ್ಪಡೆಗೊಳಿಸಿತ್ತು. ಸಿ-17 ಗ್ಲೋಬ್‌ಮಾಸ್ಟರ್‌ 3 ವಿಮಾನಗಳು ಅವಕ್ಕಿಂತ ಹೆಚ್ಚಿನ ಕಾರ್ಯದಕ್ಷತೆಯುಳ್ಳ ವಿಮಾನಗಳೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next