Advertisement
ಉಡುಪಿ: ಜಿಲ್ಲೆಯಾದ್ಯಂತ ಚುನಾವಣೆ ರಣಕಣ ರಂಗೇರುತ್ತಿದೆ. ಯಾರಿಗೆ ಟಿಕೆಟ್, ಯಾರು ಶಾಸಕರಾಗಲಿದ್ದಾರೆ ಎಂಬ ಚರ್ಚೆಯೂ ನಡೆಯು ತ್ತಿದೆ. ಈ ಮಧ್ಯೆ ಕಳೆದ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿ, ಒಮ್ಮೆ ಶಾಸಕರಾದವರು, ಹಲವು ಬಾರಿ ಶಾಸಕರಾದವರೂ ಇದ್ದಾರೆ. ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಈವರೆಗೂ ಹೆಚ್ಚು ಶಾಸಕರನ್ನು ಕಂಡಿದ್ದು ಬೈಂದೂರು ಮತ್ತು ಉಡುಪಿ ಕ್ಷೇತ್ರ.
Related Articles
ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ 1972ರಿಂದ 2004ರ ಅವಧಿಯಲ್ಲಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮೂರು ಬಾರಿ ಶಾಸಕರಾಗಿದ್ದಾರೆ. 1972ರಲ್ಲಿ ಜಯಪ್ರಕಾಶ್ ಎಸ್. ಕೊಳ್ಕೆಬೈಲು, 1978ರಲ್ಲಿ ಆನಂದ ಕುಂದ ಹೆಗ್ಡೆ, 1983 ಬಿ.ಬಿ. ಶೆಟ್ಟಿ, 1985 ಬಸವರಾಜ್, 1989 ಪಿ. ಬಸವರಾಜ್, 1994ರಿಂದ 2004ರ ವರೆಗೆ ಜಯಪ್ರಕಾಶ್ ಹೆಗ್ಡೆ ಶಾಸಕರಾಗಿದ್ದರು. ಅನಂತರ ಕ್ಷೇತ್ರ ಪುನರ್‌ವಿಂಗಡಣೆಯಾಗಿ ಕುಂದಾಪುರ, ಉಡುಪಿ, ಕಾರ್ಕಳದೊಂದಿಗೆ ವಿಲೀನಗೊಂಡಿದೆ. ಈ ಕ್ಷೇತ್ರದಲ್ಲಿ ಬಂಟ ಸಮುದಾಯದವರೇ ಹೆಚ್ಚು ಬಾರಿ ಶಾಸಕರಾಗಿದ್ದರು.
Advertisement
ಕಾರ್ಕಳದಲ್ಲಿ ಮೂವರುಕಾರ್ಕಳ ವಿಧಾನಸಭಾ ಕ್ಷೇತ್ರ 1972ರಿಂದ 2018ರ ಅವಧಿಯಲ್ಲಿ ಕಂಡಿದ್ದು ಮೂವರು ಶಾಸಕರನ್ನು ಮಾತ್ರ. 1972ರಿಂದ 1994ರ ವರೆಗೆ ಎಂ. ವೀರಪ್ಪ ಮೊಲಿ, 1990, 2008ರಲ್ಲಿ ಎಚ್. ಗೋಪಾಲ ಭಂಡಾರಿ, 2004, 2013, 2018ರಲ್ಲಿ ವಿ. ಸುನಿಲ್ ಕುಮಾರ್ ಶಾಸಕರಾಗಿದ್ದರು. ಕಾಪು, ಕುಂದಾಪುರದಲ್ಲಿ ತಲಾ ನಾಲ್ವರು
ಕಾಪು ಕ್ಷೇತ್ರದಲ್ಲಿ 1972ರಿಂದ 2018ರ ವರೆಗೆ ನಾಲ್ವರು ಶಾಸಕರು ಆಡಳಿತ ನಡೆಸಿದ್ದಾರೆ. 1972, 1978ರಲ್ಲಿ ಬಿ. ಭಾಸ್ಕರ್ ಶೆಟ್ಟಿ 1983ರಿಂದ 1999ರ ವರೆಗೆ ವಸಂತ ಸಾಲ್ಯಾನ್, 2004, 2008, 2018 ರಲ್ಲಿ ಲಾಲಾಜಿ ಆರ್. ಮೆಂಡನ್, 2013ರಲ್ಲಿ ವಿನಯ ಕುಮಾರ್ ಸೊರಕೆ ಶಾಸಕರಾಗಿದ್ದರು. ಬಿಲ್ಲವರು ಹೆಚ್ಚು ಅವಧಿಗೆ, ಅನಂತರ ಮೊಗವೀರರು ಮತ್ತು ಬಂಟ ಸಮುದಾಯದವರು ಇಲ್ಲಿ ಶಾಸಕರಾಗಿದ್ದರು. ಕುಂದಾಪುರ ಕ್ಷೇತ್ರ 1972ರಿಂದ 2018ರ ವರೆಗೆ ನಾಲ್ವರು ಶಾಸಕರನ್ನು ಕಂಡಿದೆ. 1972 ವಿನ್ನಿ ಫೆರ್ನಾಂಡಿಸ್, 1978 ಕಾಪು ಸಂಜೀವ ಶೆಟ್ಟಿ, 1983ರಿಂದ 1994ರ ವರೆಗೆ ಕೆ. ಪ್ರತಾಪ್‌ಚಂದ್ರ ಶೆಟ್ಟಿ, 1999ರಿಂದ 2018ರ ವರೆಗೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರಾಗಿದ್ದರು. -ಅವಿನ್ ಶೆಟ್ಟಿ