Advertisement
ಬೈಂದೂರು ತಾಲೂಕು ರಚನೆಗಾಗಿ ಬೈಂದೂರು ಜನತೆಯ ಸಹಕಾರದೊಂದಿಗೆ ನಿರಂತರ ನಾಲ್ಕು ದಶಕಗಳಿಂದ ಹೋರಾಟ ನಡೆಸುತ್ತಿದ್ದೇವೆ. ಎಲ್ಲ ಪಕ್ಷದ ಮುಖಂಡರು ಪೂರ್ಣ ಪ್ರೋತ್ಸಾಹ ನೀಡಿದ್ದಾರೆ.ಈಗಾಗಲೇ ಕಂದಾಯ ಸಚಿವರು, ಮುಖ್ಯಮಂತ್ರಿಗಳಿಗೆ ಸತತ ಮನವಿ ನೀಡಿದ್ದೇವೆ. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಮಾತ್ರವಲ್ಲದೆ ನೀಡಿದ ಭರವಸೆಯಂತೆ ತಾಲೂಕು ಘೋಷಣೆ ಮಾಡಿರುವುದು ಶ್ಲಾಘನೀಯವಾಗಿದೆ.– ಜಗನ್ನಾಥ ಶೆಟ್ಟಿ, ಅಧ್ಯಕ್ಷರು ಬೈಂದೂರು ತಾ| ರಚನೆ ಮತ್ತು ಅಭಿವೃದ್ಧಿ ಸಮಿತಿ
– ಬಿ.ಎಸ್. ಸುಕುಮಾರ ಶೆಟ್ಟಿ ಬೈಂದೂರು ತಾಲೂಕು ಘೋಷಣೆ ರೈತಸಂಘದ ಹೋರಾಟಕ್ಕೆ ಸಂದ ಜಯವಾಗಿದೆ. ಈಗಾಗಲೇ ವಿಧಾನಸೌಧ ಮತ್ತು ಬೆಳಗಾಂ ಅಧಿವೇಶನದಲ್ಲಿ ಬೈಂದೂರು ತಾಲೂಕು ರಚನೆಯಾಗುವ ಕುರಿತು ಧರಣಿ ಸತ್ಯಾಗ್ರಹ ನಡೆಸಿದ್ದೇವೆ. ತಾಲೂಕು ರಚನೆಗೆ ಶೀಘ್ರ ಅನುದಾನ ಬಿಡುಗಡೆಯಾಗಬೇಕು. ರೈತರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕು.
– ದೀಪಕ್ ಕುಮಾರ ಶೆಟ್ಟಿ, ಅಧ್ಯಕ್ಷರು ರೈತ ಸಂಘ ಉಡುಪಿ ಜಿಲ್ಲೆ.
Related Articles
ಈ ಸಾಲಿನ ಬಜೆಟ್‌ನಲ್ಲಿ 21 ಜಿಲ್ಲೆಗಳ 49 ತಾಲೂಕುಗಳನ್ನು ಘೋಷಿಸಲಾಗಿದೆ. ಇದರಲ್ಲಿ ಉಡುಪಿ ಜಿಲ್ಲೆಯ ಮೂರು ತಾಲೂಕು ಸೇರಿದ್ದು, ಈ ತಾಲೂಕು ರಚನೆಯಲ್ಲಿ ಶಂಕರನಾರಾಯಣ ತಾಲೂಕು ರಚನೆಯನ್ನು ಕೈ ಬಿಟ್ಟಿರುವುದರಿಂದ ಯಾವುದೇ ನಿರಾಶೆ ಆಗಿಲ್ಲ. ಸರಕಾರವು ಶಂಕರನಾರಾಯಣದಲ್ಲಿ ನಾಡ ಕಚೇರಿಯನ್ನು ತೆರೆದು ಹೋಬಳಿ ಕೇಂದ್ರ ಮಾಡುವುದಾಗಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಭೇಟಿಯಲ್ಲಿ ತಿಳಿಸಿರುತ್ತಾರೆ. ಹೋಬಳಿ ಕೇಂದ್ರ ಮಾಡುವುದಿದ್ದಲ್ಲಿ ಬಜೆಟ್‌ನಲ್ಲಿ ಘೋಷಿಸಬೇಕೆಂದಿಲ್ಲ. ಯಾವುದೇ ಸಂದರ್ಭದಲ್ಲಿ ಸರಕಾರ ಘೋಷಣೆ ಮಾಡಬಹುದು. ಅಲ್ಲಿಯ ತನಕ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ.
– ಚಿಟ್ಟೆ ರಾಜಗೋಪಾಲ ಹೆಗ್ಡೆ, ಸಂಚಾಲಕರು, ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ
Advertisement
ಈಗಾಗಲೇ ಬೈಂದೂರು ತಾಲೂಕು ರಚನೆಗೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ತಾಲೂಕು ರಚನೆಗೆ ಮೀಸಲಿರುವ ಅನುದಾನ ಶೀಘ್ರ ಬಿಡುಗಡೆಯಾಗಲಿದೆ ಹಂತ ಹಂತವಾಗಿ ಉಳಿದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಕೆ.ಎಸ್.ಆರ್.ಟಿ.ಸಿ. ಡಿಪೋ ಸ್ಥಾಪನೆಗೆ ಈಗಾಗಲೇ ಪ್ರಕ್ರಿಯೆ ನಡೆಯತ್ತಿದೆ. ಮುಖ್ಯಮಂತ್ರಿಗಳು ಕರಾವಳಿ ಜಿಲ್ಲೆಯ ಬೇಡಿಕೆಯ ಕುರಿತು ವಿಶೇಷ ಮನ್ನಣೆ ನೀಡಿದ್ದಾರೆ. ಬೈಂದೂರು ಕ್ಷೇತ್ರ ಸಮಗ್ರ ಅಭಿವೃದ್ಧಿಯಾಗಲಿದೆ.– ಕೆ. ಗೋಪಾಲ ಪೂಜಾರಿ, ಶಾಸಕರು ಬೈಂದೂರು ಬೈಂದೂರು ಕ್ಷೇತ್ರದಲ್ಲಿ ಶಾಸಕ ಗೋಪಾಲ ಪೂಜಾರಿಯವರ ಅವಧಿಯಲ್ಲಿ ದಾಖಲೆಯ ಅಭಿವ್ರದ್ದಿ ಕಾಮಗಾರಿ ನಡೆದಿದೆ. ತಾಲೂಕು ರಚನೆಯ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡುವ ಭರವಸೆ ನೀಡಿದ್ದರು. ಮಾತ್ರವಲ್ಲದೆ ನಿರಂತರ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ಬೈಂದೂರಿನ ಬಹುಕಾಲದ ಬೇಡಿಕೆ ಈಡೇರಿಸಿದ ಶಾಸಕರಿಗೆ ಬೈಂದೂರು ಜನತೆಯ ಅಭಿನಂದನೆಗಳು.
– ಎಸ್. ರಾಜುಪೂಜಾರಿ, ಜಿಲ್ಲಾ ಕೆ.ಡಿ.ಪಿ. ಸದಸ್ಯರು ಬೈಂದೂರು ತಾಲೂಕು ರಚನೆಯಾಗುವ ಮೂಲಕ ಪ್ರವಾಸೋ ದ್ಯಮದ ಅಭಿವೃದ್ಧಿ, ಭೌಗೋಳಿಕ ಬೆಳವಣಿಗೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗಲಿದೆ. ಮಾತ್ರವಲ್ಲದೇ ಬಹುವರ್ಷದ ಕನಸು ನನಸಾಗುವಂತಾಗಿದೆ.
– ವೆಂಕಟೇಶ್ ಕಿಣಿ, ಅಧ್ಯಕ್ಷರು ಮೂಕಾಂಬಿಕಾ ರೈಲ್ವೇ ಯಾತ್ರಿ ಸಂಘ ಬೈಂದೂರು