Advertisement
ಮಗುವಿನ ತಂದೆ- ತಾಯಿ ಮಹಾರಾಷ್ಟ್ರದಲ್ಲಿದ್ದು, ಅಲ್ಲಿಯೇ ಹೆರಿಗೆಯಾಗಿ, ಸೋಮವಾರಷ್ಟೇ ಊರಿಗೆ ಬಂದಿದ್ದು, ಲಕ್ಷಣ ಕಂಡು ಬಂದಿದ್ದರಿಂದ ಪರೀಕ್ಷೆಗೊಳಪಡಿಸಿದಾಗ ದೃಢಪಟ್ಟಿದೆ. ತಂದೆ ಅಥವಾ ತಾಯಿಗೆ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಈಗ ಮಗುವಿನೊಂದಿಗೆ ಆಸ್ಪತ್ರೆಯಲ್ಲಿ ತಾಯಿ ಜತೆಗಿದ್ದಾರೆ. ಅದೇ ಗ್ರಾಮದ ಗುಡ್ಡೆ ಹೊಟೇಲ್‌ನಲ್ಲಿ ಮಹಾರಾಷ್ಟ್ರದಿಂದ ಬಂದಿದ್ದ ಮಹಿಳೆಯೊಬ್ಬರಿಗೆ ಪಾಸಿಟಿವ್ ಬಂದಿದ್ದು, ಅವರಿದ್ದ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಬೀಜಾಡಿ ಗ್ರಾಮದಲ್ಲಿ ಮತ್ತೂಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ತಗ್ಗರ್ಸೆ, ಉಪ್ಪುಂದ ತಲಾ ಇಬ್ಬರು, ಕಿರಿಮಂಜೇಶ್ವರ ಹಾಗೂ ಹೇರೂರಲ್ಲಿ ತಲಾ ಒಬ್ಬರು ಸೇರಿ ಬೈಂದೂರು ತಾಲೂಕಿನಲ್ಲಿ ಶುಕ್ರವಾರ ಒಟ್ಟು 6 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ.
ತೆಕ್ಕಟ್ಟೆ : ಇಲ್ಲಿನ ಕೆದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದ 13 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಕಳೆದೆರಡು ದಿನಗಳಿಂದ ಜ್ವರದಿಂದ ಬಳಲು ತ್ತಿದ್ದ ಬಾಲಕಿಯನ್ನು ಕೆದೂರು ಪ್ರಾ. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅರ್ಪಿತಾ ಪರೀಕ್ಷಿಸಿದ್ದರು. ಗಂಟಲ ದ್ರವ ಪರೀಕ್ಷೆಗಾಗಿ ಕಳುಹಿಸಿದ್ದು ಪಾಸಿಟಿವ್ ಇರುವುದು ದೃಢಪಟ್ಟಿದೆ. ಬಾಲಕಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಬಾಧಿಸಿರುವ ಅನುಮಾನ ವ್ಯಕ್ತವಾಗಿದ್ದು, ಮೂಲವನ್ನು ಪತ್ತೆಹಚ್ಚಲಾಗುತ್ತಿದೆ. ಸೋಂಕಿತ ಬಾಲಕಿ ಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಡುವರಿ ಗ್ರಾ.ಪಂ ಸಿಬಂದಿಗೆ ಪಾಸಿಟಿವ್
ಬೈಂದೂರು: ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿಬಂದಿಯೋರ್ವರಿಗೆ ಪಾಸಿಟಿವ್ ದೃಢ ವಾಗಿದ್ದು ಪಂಚಾಯತ್ ಸೀಲ್‌ಡೌನ್ ಮಾಡಲಾಗಿದೆ. ಪಂಚಾಯತ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬಂದಿ ಗಳನ್ನು ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಇದೇ ವೇಳೆ ಕಾರ್ಕಳ ತಾಲೂಕಿನ ಗ್ರಾಮ ಪಂಚಾಯತ್ ಒಂದರ ಪಿಡಿಒ ಅವರಿಗೆ ಸೋಂಕು ತಗಲಿದ ಕಾರಣ ಗ್ರಾಮ ಪಂಚಾಯತ್ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ.