ಬೈಂದೂರು: ನಾಟಕಗಳು ಸಮಾಜದ ಅಂಕುಡೊಂಕುಗಳ ಮೇಲೆ ಬೆಳಕು ಚೆಲ್ಲಿ ಅವುಗಳನ್ನು ತಿದ್ದಲು ಪ್ರಯತ್ನಿಸುತ್ತವೆೆ. ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತದೆ. ನಾಟಕದ ಮೂಲಕ ಪಾಠಗಳು ಎಂಬ ಶಿಕ್ಷಣ ವನ್ನೂ ನೀಡುತ್ತದೆ. ಆದುದರಿಂದ ಸಮಾಜ ಅದನ್ನು ಪ್ರೋತ್ಸಾಹಿಸಬೇಕು ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಹಾಗೂ ಉಡುಪಿ ರಂಗಭೂಮಿಯ ಗೌರವಾಧ್ಯಕ್ಷ ಡಾ| ಎಚ್. ಶಾಂತಾರಾಮ್ ಹೇಳಿದರು.
ಅವರು ಲಾವಣ್ಯ ಬೈಂದೂರು ಇದರ 40ರ ಸಂಭ್ರಮದ ಪ್ರಯುಕ್ತ ನಡೆಯುತ್ತಿರುವ ರಂಗ ಲಾವಣ್ಯ -2017 ಕಲಾಮಹೋತ್ಸವದ ಸಮಾ ರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದರು.
ಅನಂತರ ಕಿರುತೆರೆ ಹಾಗೂ ಚಲನಚಿತ್ರ ನಟ-ನಿರ್ದೇಶಕ ನಿಖೀಲ್ ಮಂಜು ಮಾತನಾಡಿ ಮನೋರಂಜನೆಯ ಪ್ರಾಕಾರಗಳಲ್ಲಿ ರಂಗ ಭೂಮಿ ಎಲ್ಲಕ್ಕಿಂತ ಶ್ರೇಷ್ಠ. ಹಿಂದಿ ನಿಂದಲೂ ಇದು ಸದುದ್ದೇಶ ಇಟ್ಟುಕೊಂಡು ಬೆಳೆದು ಬಂದಿದೆ. ಇದಕ್ಕೆ ಹಿಂದೆ ರಾಜಾಶ್ರಯ, ಜನಾಶ್ರಯ, ಸರಕಾರದ ಆಶ್ರಯವೂ ಸಿಕ್ಕಿದೆ. ನಾಟಕಗಳ ಮೂಲಕ ಕಲೆ- ಸಾಹಿತ್ಯ- ದೇಶ- ಭಾಷೆಗಳ ಕೊಂಡಿಯಾಗಿ ಪ್ರತಿಫಲಾಪೇಕ್ಷೆಗಳಿಲ್ಲದೇ ಧನಾತ್ಮಕ ಆಶಯಗಳ ಮೂಲಕ ಮನೋ ರಂಜನೆ ನೀಡುತ್ತಾ ಬಂದಿದೆ. ಇಂತಹ ರಂಗಭೂಮಿಯಲ್ಲಿ ಗುರುತಿಸಿಕೊಳ್ಳು ವುದೇ ಓರ್ವ ಕಲಾವಿದನ ಶ್ರೇಷ್ಠತೆ ಎಂದರು.
ಲಾವಣ್ಯ ಅಧ್ಯಕ್ಷ ಗಿರೀಶ್ ಬೈಂದೂರು ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ಲಾವಣ್ಯ ಕಲಾವಿದ ರಾದ ಮಲ್ಲಿಕಾ ಶೆಟ್ಟಿ, ಅರ್ಚನಾ, ಮಂಜೋತ್, ಸೂರಜ್ ನಾಯಕ್, ಸುಮಂತ್ ಆಚಾರ್, ಶಶಿಧರ್ ಕಾರಂತ್ ಅವರನ್ನು ಗೌರವಿಸಲಾಯಿತು.ಮುಖ್ಯ ಅತಿಥಿಗಳಾಗಿ ಕೊಲ್ಲೂರು ದೇಗುಲದ ಮಾಜಿ ಆಡಳಿತ ಧರ್ಮ ದರ್ಶಿ ಬಿ. ಎಂ. ಸುಕುಮಾರ್ ಶೆಟ್ಟಿ, ಉದ್ಯಮಿಗಳಾದ ಜಗದೀಶ್ ಮಯ್ಯ ಬೆಂಗಳೂರು, ಎನ್.ಡಿ. ಶೆಟ್ಟಿ ಹುಬ್ಬಳ್ಳಿ, ಲಕ್ಷ್ಮೀಕಾಂತ್ ಬೆಸ್ಕೂರ್ ಉಡುಪಿ, ಲಾವಣ್ಯ ಗೌರವಾಧ್ಯಕ್ಷ ಯು.ಶ್ರೀನಿವಾಸ ಪ್ರಭು, ಕಾರ್ಯದರ್ಶಿ ಗಳಾದ ಬಿ. ಮೋಹನ ಕಾರಂತ್, ನಾರಾಯಣ ಕೆ. ಉಪಸ್ಥಿತರಿದ್ದರು.
ಉದಯ್ ಆಚಾರ್ಯ ಸ್ವಾಗತಿಸಿ ದರು. ಸುಬ್ರಹ್ಮಣ್ಯ ಗಾಣಿಗ ಕಾರ್ಯ ಕ್ರಮ ನಿರ್ವಹಿಸಿದರು. ಸದಾಶಿವ ಡಿ. ವಂದಿಸಿದರು.