Advertisement

ಹೆಸರಿಗೆ ಮಾತ್ರ ಬೈಂದೂರು ಹೊಸ ತಾಲೂಕು

01:00 AM Feb 14, 2019 | Harsha Rao |

ಬೈಂದೂರು: ಬಹುನಿರೀಕ್ಷಿತ ಬೈಂದೂರು ತಾಲೂಕು ಘೋಷಣೆಯಾಗಿ ಒಂದು ವರ್ಷ ಕಳೆದಿದೆ. ಆದರೆ ಈ ಘೋಷಣೆ ಕಡತಕ್ಕೆ ಮಾತ್ರ ಸೀಮಿತವಾಗಿದ್ದು, ಯಾವುದೇ ಸವಲತ್ತುಗಳೂ ಸಿಕ್ಕಿಲ್ಲ.  

Advertisement

ನಾಲ್ಕು ದಶಕಗಳ ಹೋರಾಟ
1984ರಿಂದ ಬೈಂದೂರು ತಾ.ಹೋರಾಟ ಶುರುವಾಗಿದ್ದು  2018ರ ಬಜೆಟ್‌ನಲ್ಲಿ ತಾಲೂಕು ಘೋಷಣೆಯಾಗಿತ್ತು. ಹೊಸ ತಾಲೂಕಿನಲ್ಲಿ ಒಟ್ಟು 20 ಗ್ರಾಮಗಳಿವೆ. ಒಟ್ಟು  1,42,911.50 ಎಕ್ರೆ ವಿಸ್ತಿರ್ಣ ಹೊಂದಿದೆ.

ಸೌಲಭ್ಯಗಳು ಸಿಕ್ಕಿಲ್ಲ 
ಹೊಸ ತಾಲೂಕು ಉದ್ಘಾಟನೆಯಾದ ಬಳಿಕ ವಿಶೇಷ ತಹಶೀಲ್ದಾರ್‌ ಕಚೇರಿ ಫಲಕ ತಾಲೂಕು ದಂಡಾಧಿಕಾರಿಗಳ ಕಚೇರಿ ಎಂದು ಬೋರ್ಡ್‌ ಮಾತ್ರ ಬದಲಾವಣೆಯಾಗಿದೆ. ಒಟ್ಟು 21 ಕಚೇರಿಗಳು ಸದ್ಯ ಕಾರ್ಯನಿರ್ವಹಿಸುತ್ತಿವೆ. ಆದರೆ ಪಡಿತರ ವ್ಯವಸ್ಥೆ, ಆಹಾರ ವಿಭಾಗ, ಭೂನ್ಯಾಯ ಮಂಡಳಿ ಇದುವರೆಗೂ ಕಚೇರಿಗೆ ಬಂದಿಲ್ಲ.  ತಾಲೂಕು ಪಂಚಾಯತ್‌, ನ್ಯಾಯಾಲಯ ಸಂಕೀರ್ಣಕ್ಕಾಗಿ ಜನರು ಕಾಯುವಂತಾಗಿದೆ. 

ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಬೇಕು
ಈ ತಾಲೂಕಿನ ಜನರಿಗೆ ಅವಶ್ಯವಿರುವುದು ತಾ| ಆಸ್ಪತ್ರೆ. 30 ಬೆಡ್‌ಗಳಿರುವ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿದರೆ 100 ಹಾಸಿಗೆ ಆಸ್ಪತ್ರೆಯಾಗಲಿದೆ. ಆದರೆ ಈ ಬಗ್ಗೆ ಸರಕಾರ ಮನಸ್ಸು ಮಾಡಿಲ್ಲ. ಉತ್ತಮ ವೈದ್ಯಾಧಿಕಾರಿಗಳ ತಂಡವಿದ್ದರೂ ಸೌಲಭ್ಯಗಳಿಲ್ಲದ್ದರಿಂದ ಜನ ಸಣ್ಣಪುಟ್ಟ ಸಮಸ್ಯೆ ಪರಿಹಾರಕ್ಕೂ  40 ಕಿ.ಮೀ. ದೂರದ ಕುಂದಾಪುರಕ್ಕೆ ತೆರಳಬೇಕಾಗಿದೆ.

ಅನುದಾನ ಬೇಕು 
ತಾಲೂಕಿಗೆ ಅಗತ್ಯವಿರುವ ಕಚೇರಿಗಳನ್ನು ಶೀಘ್ರ ಆರಂಭಿಸಲು ಮುಖ್ಯಮಂತ್ರಿಗಳಿಗೆ ಹಾಗೂ ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ. ಅಗ್ನಿಶಾಮಕ ಠಾಣೆ,ತಾಲೂಕು ಆಸ್ಪತ್ರೆ ಮುಂತಾದವುಗಳನ್ನು ಆದಷ್ಟು ಶೀಘ್ರ ಆರಂಭಿಸಲು ಸರಕಾರ ಅನುದಾನ ನೀಡಬೇಕಾಗಿದೆ.
-ಬಿ. ಜಗನ್ನಾಥ ಶೆಟ್ಟಿ, ಅಧ್ಯಕ್ಷರು, ಬೈಂದೂರು, ತಾ| ರಚನೆ ಮತ್ತು ಅಭಿವೃದ್ಧಿ ಸಮಿತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next