Advertisement
ಬೈಂದೂರು ಹಾಗೂ ಯಡ್ತರೆ ಗ್ರಾಮ ಪಂಚಾಯತ್ ಗಡಿ ಭಾಗದಲ್ಲಿರುವ ಕಲ್ಲಣ್ಕಿ, ಕುಂಜಳ್ಳಿ, ಮಧ್ದೋಡಿ, ತೋಕ್ತಿ ಸೇರಿದಂತೆ ಮೊದಲಾದ ಕುಗ್ರಾಮಗಳು ಬೈಂದೂರು ಪೇಟೆಯಿಂದ ಸುಮಾರು 13 ಕಿ.ಮೀ. ದೂರದಲ್ಲಿದೆ.ಇಲ್ಲಿನ ಸಾರ್ವಜನಿಕರು, ವಿದ್ಯಾರ್ಥಿಗಳು ಪ್ರತಿದಿನ ಬೈಂದೂರಿಗೆ ಬರಬೇಕಾದರೆ ಗಂಗನಾಡು ಹೊಳೆಯನ್ನು ದಾಟಿ ಬರ ಬೇಕಾಗಿದೆ. ಆದರೆ ಮಳೆಗಾಲದಲ್ಲಿ ಈ ಹೊಳೆಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು ಹೊಳೆ ದಾಟಲು ಇಲ್ಲಿನ ಸ್ಥಳೀಯರು ಮರದ ದಿಮ್ಮಿಗಳನ್ನು ಬಳಸಿ ತಾತ್ಕಾಲಿಕ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ. ಕೆಲವೊಮ್ಮೆ ಮಳೆ ಹೆಚ್ಚಾದಾಗ ಈ ಮರದ ಕಾಲುಸಂಕ ನದಿಪಾಲಾಗುತ್ತದೆ.
ಇಲಾಖೆಯ ನಿರ್ವಹಣೆಯ ಕೊರತೆ ಯಿಂದ ಸಮರ್ಪಕ ವಿದ್ಯುತ್ ದೊರೆಯುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಬೈಂದೂರಿನಿಂದ ಮಧ್ದೋಡಿಯ ತನಕ ಡಾಮರುಗೊಂಡ ರಸ್ತೆಯಿದೆ. ಕಲ್ಲಣ್ಕಿ, ಕುಂಜಳ್ಳಿ, ತೋಕ್ತಿ ಮೊದ
ಲಾದ ಊರುಗಳಿಗೆ ರಸ್ತೆ, ಸೇತುವೆಯೂ ಇಲ್ಲ. ಈಗಾಗಲೇ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸಿ ದ್ದಾರೆ.
Related Articles
Advertisement
ಗಮನಕ್ಕೆ ತರಲಾಗಿದೆಕಲ್ಲಣ್ಕಿ ಕುಂಜಳ್ಳಿ ಜನರು ಕಳೆದ ಹಲವು ವರ್ಷಗಳಿಂದ ಸೇತುವೆಗಾಗಿ ಬೇಡಿಕೆ ನೀಡುತ್ತಿದ್ದಾರೆ.ಪಂಚಾಯತ್ ವ್ಯಾಪ್ತಿಯಲ್ಲಿ ಸೇತುವೆ ನಿರ್ಮಾಣ ಸಾಧ್ಯವಿಲ್ಲ.ಹೀಗಾಗಿ ಸರಕಾರದ ಅನುದಾನ ನೀಡುವ ಬಗ್ಗೆ ಈಗಾಗಲೇ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ.ಸೇತುವೆ ನಿರ್ಮಾಣ ಈ ಭಾಗಕ್ಕೆ ಅತ್ಯಗತ್ಯವಾಗಿದೆ.
– ನಾಗರಾಜ ಶೆಟ್ಟಿ,ಗ್ರಾ.ಪಂ. ಸದಸ್ಯ ನಿತ್ಯದ ಗೋಳು
ಕಳೆದ ಹತ್ತಾರು ವರ್ಷಗಳಿಂದ ಇಲ್ಲಿನ ಹೊಳೆಗೆ ಸೇತುವೆ ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳೂ ಸೇರಿದಂತೆ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ.ಸೇತುವೆ ಸಮಸ್ಯೆ ನಿತ್ಯದ ಗೋಳಾಗಿದೆ. ಜನಪ್ರತಿನಿಧಿಗಳು ಸ್ಪಂದಿಸುವ ಭರವಸೆ ಇದೆ.
– ಜೋಸೆಫ್ ಸ್ಥಳೀಯರು