Advertisement
ಶಿರೂರಿನ ಹೆದ್ದಾರಿ ಇಕ್ಕೆಲಗಳಲ್ಲಿ ಕೆಲವು ತಿಂಗಳುಗಳ ಹಿಂದೆ ಚರಂಡಿಗೆ ಕಾಂಕ್ರೀಟ್ ಮೇಲ್ಚಾವಣೆ ಮೂಲಕ ಮುಚ್ಚಲಾಗಿತ್ತು. ಆದರೆ ಕೆಲವು ಕಡೆ ತೆರೆದ ಗುಂಡಿಗಳು ಹಾಗೇ ಉಳಿದಿದ್ದವು. ಇದರಿಂದಾಗಿ ಪಾದಚಾರಿ, ಜಾನುವಾರು ಗಳು ಹೊಂಡಕ್ಕೆ ಬಿದ್ದ ಘಟನೆ ನಡೆದಿದ್ದವು. ಜತೆಗೆ ಕಸ-ಕಡ್ಡಿ ಗಳನ್ನು ಕೂಡ ಈ ಗುಂಡಿ ಗಳಲ್ಲಿ ಎಸೆಯುತ್ತಿರುವುದರಿಂದ ಕಸದ ತೊಟ್ಟಿಯಾಗಿ ಮಾರ್ಪಟ್ಟಿತ್ತು. ಈ ಕುರಿತು ಉದಯವಾಣಿ ಕೆಲವು ದಿನಗಳ ಹಿಂದೆ ವರದಿ ಪ್ರಕಟಿಸಿ ಎಚ್ಚರಿ ಸಿತ್ತು. ವರದಿಗೆ ಸ್ಪದಿಸಿದ ಐ.ಆರ್.ಬಿ . ಕಂಪೆನಿ ಶಿರೂರಿನ ವಿವಿಧ ಕಡೆ ಇರುವ ಇಂತಹ ತೆರೆದ ಗುಂಡಿ ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದೆ.