Advertisement
ಕುಂದಾಪುರ1983ರಲ್ಲಿ ಒಟ್ಟು 60,044 ಮತಗಳು ಚಲಾವಣೆ ಯಾಗಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ 32,469, ಜನತಾ ಪಕ್ಷದ ಮಾಣಿಗೋಪಾಲ್ 25,197 ಮತಗಳನ್ನು ಪಡೆದರು. ಗೆಲುವಿನ ಅಂತರ 7,272 ಮತಗಳಾಗಿದ್ದವು. 1985ರಲ್ಲಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ ಅವರಿಗೆ 38,296, ಜನತಾ ಪಕ್ಷದ ಅಪ್ಪಣ್ಣ ಹೆಗ್ಡೆ ಅವರಿಗೆ 29,638 ಮತಗಳು ಸಿಕ್ಕಿ, 8,658 ಅಂತರ ಇತ್ತು. 1989ರಲ್ಲಿ ಒಟ್ಟು 83,354 ಮತಗಳು ಚಲಾವಣೆಯಾಗಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟರಿಗೆ 46,641, ಜನತಾ ದಳದ ಕೆ.ಎನ್. ಗೋವರ್ಧನರಿಗೆ 27,540 ಮತಗಳಾಗಿ 19,101 ಮತಗಳ ಅಂತರವಾಯಿತು. 1994ರಲ್ಲಿ ಒಟ್ಟು 92,235 ಮತ ಚಲಾವಣೆಯಾಗಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟರಿಗೆ 41,209, ಬಿಜೆಪಿಯ ಎ.ಜಿ. ಕೊಡ್ಗಿ ಅವರಿಗೆ 37,770 ಮತ ಲಭಿಸಿ ಅಂತರ 3,439 ಮತಗಳಾದವು.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 1983ರಲ್ಲಿ ಜನತಾ ಪಕ್ಷದಿಂದ ಅಪ್ಪಣ್ಣ ಹೆಗ್ಡೆ ಅವರು ಕಾಂಗ್ರೆಸ್‌ನ ಜಿ.ಎಸ್. ಆಚಾರ್ ಅವರೆದುರು ಗೆಲ್ಲಲು ಕೇವಲ 24 ಹೆಚ್ಚು ಮತಗಳನ್ನು ಪಡೆದಿದ್ದರು. ಅಪ್ಪಣ್ಣ ಹೆಗ್ಡೆ ಅವರಿಗೆ 25,771 ಮತ ಬಿದ್ದಿದ್ದರೆ ಜಿ.ಎಸ್. ಆಚಾರ್‌ಗೆ 25,747 ಮತಗಳು ದೊರೆತಿದ್ದವು. ಒಟ್ಟು 53,579 ಮತಗಳು ಚಲಾವಣೆಯಾಗಿದ್ದವು. ಇದು ಎರಡು ಜಿಲ್ಲೆಯಲ್ಲಿಯೇ ಕನಿಷ್ಠ ದಾಖಲೆ ಅಂತರವಾಗಿ ದಾಖಲಾಯಿತು. ಎರಡೇ ವರ್ಷದ ಅಂತರದಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದ ಮಾಣಿ ಗೋಪಾಲ್ ಅವರನ್ನು ಕಾಂಗ್ರೆಸ್‌ನ ಜಿ.ಎಸ್. ಆಚಾರ್ 414 ಮತಗಳ ಅಂತರದಿಂದ ಸೋಲಿಸಿದರು. ಒಟ್ಟು 58,956 ಮತಗಳಲ್ಲಿ ಜಿ.ಎಸ್. ಆಚಾರ್‌ಗೆ 28,393, ಮಾಣಿಗೋಪಾಲ್‌ಗೆ 27,979 ಮತ ಲಭಿಸಿತ್ತು. 1989ರಲ್ಲಿ ಗೆಲುವಿನ ಅಂತರ 519. ಚಲಾವಣೆಯಾದ 77,879 ಮತಗಳಲ್ಲಿ ಕಾಂಗ್ರೆಸ್‌ನ ಜಿ.ಎಸ್. ಆಚಾರ್ 35,892, ಜನತಾ ದಳದ ಮಾಣಿಗೋಪಾಲ್ 35,373 ಪಡೆದಿದ್ದರು. 1994ರಲ್ಲಿ ಮತಗಳಿಕೆ ಅಂತರ 11,300ಕ್ಕೆ ಏರಿ ಒಮ್ಮೆಲೆ ಏರಿಕೆ ಕಂಡಿತು. ಆಗ ಕಣದಲ್ಲಿ ಇದ್ದುದು ಬಿಜೆಪಿಯ ಐ.ಎಂ. ಜಯರಾಮ ಶೆಟ್ಟಿ ಹಾಗೂ ಕಾಂಗ್ರೆಸ್‌ನ ಮಾಣಿಗೋಪಾಲ್. ಒಟ್ಟು 80,767 ಮತ ಗಳಲ್ಲಿ ಬಿಜೆಪಿಗೆ 29,841, ಕಾಂಗ್ರೆಸ್‌ಗೆ 18,541 ಮತ ಗಳಿದ್ದವು. 1997ರಲ್ಲಿ ಕಾಂಗ್ರೆಸ್‌ನ ಗೋಪಾಲ ಪೂಜಾರಿ ಗೆದ್ದರು. 1999ರಲ್ಲಿ ಒಟ್ಟು 89,383 ಮಂದಿ ಮತ ಚಲಾಯಿಸಿದ್ದು ಕೆ. ಗೋಪಾಲ ಪೂಜಾರಿ 46,075,ಬಿಜೆಪಿಯ ಲಕ್ಷ್ಮೀನಾರಾಯಣ 40,693 ಪಡೆದು 5,382 ಅಂತರ ದೊರೆಯಿತು. 2004ರಲ್ಲಿ ಒಟ್ಟು ಚಲಾವಣೆಯಾದ 1,01,028 ಮತಗಳಲ್ಲಿ ಗೋಪಾಲ ಪೂಜಾರಿ 47,627, ಬಿಜೆಪಿಯ ಲಕ್ಷ್ಮೀನಾರಾಯಣ 44,375, ಅಂತರ ಕಳೆದ ಅವಧಿಗಿಂತ ಕಡಿಮೆಯಾಗಿ 3,252ಕ್ಕೆ ಸೀಮಿತವಾಯಿತು. 2008ರಲ್ಲಿ 1,27,881 ಮತ ಚಲಾವಣೆಯಾಗಿ ಲಕ್ಷ್ಮೀ ನಾರಾಯಣ (62,196) ಅವರು ಗೋಪಾಲ ಪೂಜಾರಿ (54,226)ಯನ್ನು 7,970 ಮತಗಳಿಂದ ಮಣಿಸಿದರು.
Related Articles
Advertisement
– ಲಕ್ಷ್ಮೀ ಮಚ್ಚಿನ