ಹುಬ್ಬಳ್ಳಿ: ವಿದ್ಯಾರ್ಥಿನಿಯರ ಶಿಕ್ಷಣ ಉತ್ತೇಜನ ನಿಟ್ಟಿನಲ್ಲಿ ಆಕಾಶ್ ಬೈಜೂಸ್ ನಿಂದ ದೇಶಾದ್ಯಂತ ಸುಮಾರು 2,000 ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಉಚಿತ ಎನ್‌ಇಇಟಿ, ಜೆಇಇ ತರಬೇತಿ ಹಾಗೂ ಸ್ಕಾಲರ್‌ಶಿಪ್ ನೀಡಿಕೆ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿ ವೇತನ ಪರೀಕ್ಷೆ ನಡೆಸಲಾಗುವುದು ಎಂದು, ಆಕಾಶ್ ಬೈಜೂಸ್‌ನ ಬಾಲ ಶ್ರೀನಿವಾಸ ತಿಳಿಸಿದರು.
ಇಲ್ಲಿನ ಮಂತ್ರಾ ರೆಸಿಡೆನ್ಸಿ ಹೊಟೇಲ್ ನಲ್ಲಿ ಬುಧವಾರ ನಡೆದ ವಿದ್ಯಾರ್ಥಿ ವೇತನ ಪ್ರತಿಭಾನ್ವೇಷಣೆ ಯೋಜನೆ ಉದ್ಘಾಟನೆ ಹಾಗೂ 2019ರಿಂದ 2021ರವರೆಗಿನ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಉತ್ತಮ ರ್‍ಯಾಂಕಿಂಗ್ ಪಡೆದ ವಿದ್ಯಾರ್ಥಿನಿಯರಿಗೆ ಟ್ರೋಫಿ ನೀಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ದುರ್ಬಲರಾದ, ಒಂದು ಹೆಣ್ಣು ಮಗು ಇರುವ ಅಥವಾ ಒಂಟಿ ಪೋಷಕರು ಇರುವ ಕುಟುಂಬ ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಕಾಶ್ ಬೈಜೂಸ್ ಪ್ರೋತ್ಸಾಹಕರ ಯೋಜನೆ ಜಾರಿಗೊಳಿಸಿದೆ ಎಂದರು.
ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ ನವೆಂಬರ್ 5-13ರ ನಡುವೆ ದೇಶಾ ದ್ಯಂತ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಯಲ್ಲಿ ಉತ್ತಮ ರ್‍ಯಾಂಕಿಂಗ್ ಪಡೆದು ಆಯ್ಕೆಯಾಗುವ ವಿದ್ಯಾರ್ಥಿನಿಯರು ಶೇ.100 ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ. ವಿದ್ಯಾರ್ಥಿ ವೇತನ ಜತೆಗೆ 5 ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ನಾಸಾಗೆ ಉಚಿತ ಪ್ರವಾಸ ಕೈಗೊಳ್ಳುವ ಅವಕಾಶ ಪಡೆಯಲಿದ್ದಾರೆ. ಎಎನ್ ಟಿಎಚ್‌ಇಯಿಂದ ಇದುವರೆಗೆ ಸುಮಾರು 33 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ.
7ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿ ಗಳು ವಿದ್ಯಾರ್ಥಿನಿಯರು ವೇತನ ಪರೀಕ್ಷೆಗೆ ಹಾಜರಾಗಬಹುದಾಗಿದೆ. ಎನ್ ಟಿಎಚ್‌ಇ ಇದು ಒಂದು ತಾಸಿನ ಪರೀಕ್ಷೆ. ಆನ್‌ಲೈನ್ ಮೂಲಕ ನಡೆಯುವ ಈ ಪರೀಕ್ಷೆ ಬೆಳಿಗ್ಗೆ 10:00ರಿಂದ ಸಂಜೆ 7:00ಗಂಟೆ ಮಧ್ಯೆ ನಡೆಯಲಿದೆ. ಅದೇ ರೀತಿ ನ.5-13ರ ನಡುವೆ ಎರಡು ಸೆಷನ್‌ಗಳಲ್ಲಿ ಆಪ್‌ಲೈನ್ ಪರೀಕ್ಷೆ ಬೆಳಿಗ್ಗೆ 10:30ರಿಂದ 11:30 ಮತ್ತು ಸಂಜೆ 4:00ರಿಂದ 5:00ಗಂಟೆವರೆಗೆ ಆಕಾಶ್ ಬೈಜೂಸ್‌ನ ಎಲ್ಲ 285 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ತಮಗೆ ಅನುಕೂಲವಾದ ಒಂದು ತಾಸಿನ ಸ್ಲಾಟ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ವಿದ್ಯಾರ್ಥಿ ವೇತನ ಪರೀಕ್ಷೆ ಒಟ್ಟು 90 ಅಂಕಗಳನ್ನು ಹೊಂದಿದ್ದು, ಇದು 35 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದೆ. 7ರಿಂದ 11ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಹಾಗೂ ಮಾನಸಿಕ ಸಾಮರ್ಥ್ಯದ ವಿಷಯಗಳನ್ನು ಒಳಗೊಂಡಿರುತ್ತದೆ. ವೈದ್ಯಕೀಯ ಶಿಕ್ಷಣ ಬಯಸುವ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಮತ್ತು ಮಾನಸಿಕ ಸಾಮರ್ಥ್ಯದ ವಿಷಯ ಒಳ ಗೊಂಡಿರುತ್ತದೆ. ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಮಾನಸಿಕ ಸಾ ರ್ಥ್ಯದ ವಿಷಯಗಳಿರುತ್ತವೆ.
ಎನ್‌ಇಇಟಿ ಬಯಸುವ ಪಿಯು ಮೊದಲ, ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ವಿಷಯಗಳು ಇರುತ್ತವೆ ಎಂದರು.ವಿದ್ಯಾರ್ಥಿ ವೇತನ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟ ದಲ್ಲಿ ಅತ್ಯುತ್ತಮ ರ್‍ಯಾಂಕಿಂಗ್ ಪಡೆದ ವಿದ್ಯಾರ್ಥಿನಿಯರಿಗೆ ಟ್ರೋಫಿ ನೀಡಿ ಗೌರವಿಸಲಾಯಿತು. ಆಕಾಶ್ ಬೈಜೂಸ್‌ನ ಸುಧೀರ ಕುಮಾರ, ಚಂದನ್‌ಸಿಂಗ್, ಮಹಾಂತೇಶ, ಅನೂಪ್, ರಾಘವೇಂದ್ರ, ಲಿಂಗಾರಡ್ಡಿ ಇನ್ನಿತರರು, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.