Advertisement

ಬೈಜು ಈಗ ಕೋಟ್ಯಧಿಪತಿ

11:17 AM Jul 31, 2019 | mahesh |

ಹೊಸದಿಲ್ಲಿ: ದೇಶದ ಸಿರಿವಂತರ ಪಟ್ಟಿಗೆ ಈಗ ಹೊಸ ಸೇರ್ಪಡೆಯಾಗಿದೆ. ಆನ್‌ಲೈನ್‌ ಕಲಿಕಾ ಆ್ಯಪ್‌ ಬೈಜೂಸ್‌’ನ ಸಿಇಒ ಬೈಜು ರವೀಂದ್ರನ್‌ (37) ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 2011ರಲ್ಲಿ ಬೆಂಗಳೂರಿನಲ್ಲಿ ಥಿಂಕ್‌ ಆ್ಯಂಡ್‌ ಲರ್ನ್ ಸ್ಟಾರ್ಟಪ್‌ ಮೂಲಕ ಆನ್‌ಲೈನ್‌ ಪಾಠ ಪ್ರವಚನ ಶುರು ಮಾಡಿದ್ದ ಇವರು, ಈಗ ಭಾರತದ ಕಿರಿಯ ಕೋಟ್ಯಧಿಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಥಿಂಕ್‌ ಆ್ಯಂಡ್‌ ಲರ್ನ್ ಸ್ಟಾರ್ಟಪ್‌ 2015ರಲ್ಲಿ ಬೈಜೂಸ್‌ ಎಂದು ಪರಿವರ್ತನೆಯಾಯಿತು. ಬೈಜೂಸ್‌ನ ಮೌಲ್ಯ ಏಳು ವರ್ಷಗಳ ಅವಧಿಯಲ್ಲಿ 41,200 ಕೋಟಿ ರೂ (6 ಬಿಲಿಯನ್‌ ಡಾಲರ್‌)ಗೆ ಏರಿಕೆಯಾಗಿದೆ. ಶಿಕ್ಷಕರಾಗಿದ್ದುಕೊಂಡೇ, ಸ್ಟಾರ್ಟಪ್‌ ನಡೆಸು ತ್ತಿರುವ ರವೀಂದ್ರನ್‌ ಅವರು ಕಂಪೆನಿಯಲ್ಲಿ ಶೇ.21ರಷ್ಟು ಷೇರು ಹೊಂದಿದ್ದಾರೆ. ಹೀಗಾಗಿ, ಇವರೀಗ ಭಾರತದ ಅತ್ಯಂತ ಯುವ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ.

ಬೈಜೂಸ್‌ ಸಂಸ್ಥೆ ಇತ್ತೀಚೆಗಷ್ಟೇ ಕತಾರ್‌ ಬಂಡವಾಳ ಪ್ರಾಧಿಕಾರ (ಕ್ಯೂಐಎ)ದಿಂದ 150 ದಶಲಕ್ಷ ಡಾಲರ್‌ ಮೊತ್ತವನ್ನು ಸಂಗ್ರಹಿಸಿತ್ತು. ಬಂಡವಾಳ ಸಂಗ್ರಹಿಸುವ ಈ ಪ್ರಕ್ರಿಯೆಯಲ್ಲಿ ಔಲ್‌ ವೆಂಚರ್ಸ್‌ ಕೂಡ ಭಾಗಿಯಾಗಿತ್ತು. ಅವರು ಶೀಘ್ರದಲ್ಲಿಯೇ ತಮ್ಮ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಅಮೆರಿಕಕ್ಕೂ ವಿಸ್ತರಿಸುವ ಸಾಧ್ಯತೆ ಇದೆ. ರವೀಂದ್ರನ್‌ ಸಂಸ್ಥೆ ಇದುವರೆಗೆ 970 ದಶಲಕ್ಷ ಡಾಲರ್‌ ಮೊತ್ತವನ್ನು ಹೂಡಿಕೆದಾರರಿಂದ ಸಂಗ್ರಹ ಮಾಡಿದೆ.

ಭಾರತೀಯ ಕ್ರಿಕೆಟಿಗರ ಹೊಸ ಜೆರ್ಸಿಯಲ್ಲಿ ಕೂಡ ಬೈಜೂಸ್‌ ಮಿಂಚಲಿದೆ. ಚೀನದ ಮೊಬೈಲ್‌ ತಯಾರಕ ಸಂಸ್ಥೆ ಒಪ್ಪೋ ತನ್ನ ಪ್ರಾಯೋಜಕತ್ವದ ಹಕ್ಕನ್ನು ಬೈಜೂಸ್‌ಗೆ 2 ದಿನಗಳ ಹಿಂದಷ್ಟೇ ಹಸ್ತಾಂತರಿಸಿದೆ. ಇದೇ ವರ್ಷದ ಸೆ. 5ರಿಂದ 2022ರ ಮಾ.31ರ ವರೆಗೆ ಕ್ರಿಕೆಟ್‌ ಆಟಗಾರರು ಬೈಜೂಸ್‌ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next