Advertisement

3 ಲೋಕಸಭೆ ಮತ್ತು 7 ವಿಧಾನಸಭಾ ಸ್ಥಾನಗಳ ಉಪಚುನಾವಣೆಯ ಫಲಿತಾಂಶ ಹೀಗಿದೆ

09:45 PM Jun 26, 2022 | Team Udayavani |

ನವದೆಹಲಿ : ಮೂರು ಲೋಕಸಭೆ ಮತ್ತು ಏಳು ವಿಧಾನಸಭಾ ಸ್ಥಾನಗಳಿಗೆ ಜೂನ್ 23 ರಂದು ನಡೆದ ಉಪಚುನಾವಣೆಯ ಫಲಿತಾಂಶಗಳು ಭಾನುವಾರ ಪ್ರಕಟವಾಗಿದ್ದು, ಗೆಲುವಿನ ವಿವರ ಈ ಕೆಳಗಿನಂತಿವೆ.

Advertisement

ಉತ್ತರ ಪ್ರದೇಶ
ರಾಂಪುರ ಲೋಕಸಭಾ ಸ್ಥಾನ

ಬಿಜೆಪಿಯ ಘನಶ್ಯಾಮ್ ಲೋಧಿ ಅವರು ಎಸ್‌ಪಿಯ ಮೊಹಮ್ಮದ್ ಅಸಿಂ ರಾಜಾ ಅವರನ್ನು 42,192 ಮತಗಳಿಂದ ಸೋಲಿಸಿದರು.

ಅಜಂಗಢ ಲೋಕಸಭಾ ಸ್ಥಾನ

ಬಿಜೆಪಿಯ ದಿನೇಶ್ ಲಾಲ್ ಯಾದವ್ ‘ನಿರಾಹುವಾ’ ಅವರು ಸಮೀಪದ ಪ್ರತಿಸ್ಪರ್ಧಿ ಎಸ್‌ಪಿಯ ಧರ್ಮೇಂದ್ರ ಯಾದವ್ ಅವರನ್ನು 8,679 ಮತಗಳಿಂದ ಸೋಲಿಸಿದ್ದಾರೆ.

Advertisement

ಪಂಜಾಬ್ : ಸಂಗ್ರೂರ್ ಲೋಕಸಭಾ ಸ್ಥಾನ

ಶಿರೋಮಣಿ ಅಕಾಲಿ ದಳ (ಅಮೃತಸರ) ನ ಸಿಮ್ರಂಜಿತ್ ಸಿಂಗ್ ಮಾನ್ ಅವರು 5,822 ಮತಗಳಿಂದ ಹತ್ತಿರದ ಸ್ಪರ್ಧಿ ಆಪ್ ಅಭ್ಯರ್ಥಿ ಗುರ್ಮೈಲ್ ಸಿಂಗ್ ಅವರನ್ನು ಸೋಲಿಸಿದರು.

ತ್ರಿಪುರ

ಟೌನ್ ಬರ್ದೋವಾಲಿ ವಿಧಾನಸಭಾ ಕ್ಷೇತ್ರ

ತ್ರಿಪುರ ಮುಖ್ಯಮಂತ್ರಿ ಬಿಜೆಪಿಯ ಮಾಣಿಕ್ ಸಹಾ ಅವರು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಆಶಿಶ್ ಕುಮಾರ್ ಸಹಾ ಅವರನ್ನು 6,104 ಮತಗಳಿಂದ ಸೋಲಿಸಿದ್ದಾರೆ.

ಅಗರ್ತಲಾ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ ನ ಸುದೀಪ್ ರಾಯ್ ಬರ್ಮನ್ ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಅಶೋಕ್ ಸಿನ್ಹಾ ಅವರನ್ನು 3,163 ಮತಗಳಿಂದ ಸೋಲಿಸಿದ್ದಾರೆ.

ಜುಬಾರಾಜನಗರ ವಿಧಾನಸಭಾ ಕ್ಷೇತ್ರ

ಬಿಜೆಪಿಯ ಮಲಿನಾ ದೇಬನಾಥ್ ಅವರು ಸಮೀಪದ ಪ್ರತಿಸ್ಪರ್ಧಿ ಸಿಪಿಐ(ಎಂ) ನ ಶೈಲೇಂದ್ರ ಚಂದ್ರನಾಥ್ ಅವರನ್ನು 4,572 ಮತಗಳಿಂದ ಸೋಲಿಸಿದ್ದಾರೆ.

ಸುರ್ಮಾ ಅಸೆಂಬ್ಲಿ ಸೀಟ್

ಬಿಜೆಪಿಯ ಸ್ವಪ್ನಾ ದಾಸ್ ಅವರು ಸಮೀಪದ ಪ್ರತಿಸ್ಪರ್ಧಿ ತಿಪ್ರಾ ಮೋಥಾದ ಬಾಬುರಾಮ್ ಸತ್ನಾಮಿ ಅವರನ್ನು 4,583 ಮತಗಳಿಂದ ಸೋಲಿಸಿದ್ದಾರೆ.

ದೆಹಲಿ

ರಾಜಿಂದರ್ ನಗರ ವಿಧಾನಸಭಾ ಕ್ಷೇತ್ರ

ಆಪ್ ನ ದುರ್ಗೇಶ್ ಪಾಠಕ್ ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರಾಜೇಶ್ ಭಾಟಿಯಾ ಅವರನ್ನು 11,468 ಮತಗಳಿಂದ ಸೋಲಿಸಿದ್ದಾರೆ.

ಜಾರ್ಖಂಡ್

ಮಂದರ್ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್‌ನ ಶಿಲ್ಪಿ ನೇಹಾ ಟಿರ್ಕಿ ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಗಂಗೋತ್ರಿ ಕುಜೂರ್ ಅವರನ್ನು 23,517 ಮತಗಳಿಂದ ಸೋಲಿಸಿದ್ದಾರೆ.

ಆಂಧ್ರಪ್ರದೇಶ

ಆತ್ಮಕೂರು ವಿಧಾನಸಭಾ ಕ್ಷೇತ್ರ

ವೈಎಸ್‌ಆರ್‌ಸಿಯ ಮೇಕಪತಿ ವಿಕ್ರಮ್ ರೆಡ್ಡಿ ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಜಿ ಭರತ್ ಕುಮಾರ್ ಯಾದವ್ ಅವರನ್ನು 82,888 ಮತಗಳಿಂದ ಸೋಲಿಸಿದ್ದಾರೆ.

ಇದನ್ನೂ ಓದಿ : ಮಹಾರಾಷ್ಟ್ರ : ಶಿವಸೇನೆಯ 15 ಬಂಡಾಯ ಶಾಸಕರಿಗೆ ಕೇಂದ್ರದಿಂದ Y+ ಭದ್ರತೆ, ಶಿಂಧೆ ಹೆಸರು ಮಾಯ 

Advertisement

Udayavani is now on Telegram. Click here to join our channel and stay updated with the latest news.

Next