Advertisement
ಅಧ್ಯಕ್ಷೆ ಕವಿತಾ ಯಾವುದೇ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸಭೆ ದಿನಾಂಕ ಸೇರಿದಂತೆ ಅಝೆಂಡಾ ಸಿದ್ಧಪಡಿಸಿದ್ದು ಸದಸ್ಯರ ಆಕ್ರೋಶಕ್ಕೆ ಕಾರಣ ಎನ್ನಲಾಗುತ್ತಿದೆ. ಪೂರ್ವ ನಿಗದಿಯಂತೆ ಬೆಳಗ್ಗೆ 11ಕ್ಕೆಅಧ್ಯಕ್ಷೆ ಕವಿತಾ ಸಭೆಗೆ ಆಗಮಿಸಿದರಾದರೂ 11.30 ಆದರೂ ಯಾವುದೇ ಸದಸ್ಯರು ಪಾಲ್ಗೊಳಲಿಲ್ಲ. ಕೆಳಗಿಳಿಸಲು ತೆರೆಮರೆ ಹುನ್ನಾರ: ಪುರಸಭೆಯಲ್ಲಿ ಪ್ರಸಕ್ತ ಬಿಜೆಪಿ 13, ಕಾಂಗ್ರೆಸ್ 6 ಹಾಗೂ 4 ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದರಿಂದ 7ನೇ ವಾರ್ಡ್‌ನಿಂದ ಪಕ್ಷೇತರರಾಗಿ ಆಯ್ಕೆಯಾಗಿದ್ದ ಕವಿತಾ ಅವರನ್ನು ಬಿಜೆಪಿ ಹೈಕಮಾಂಡ್‌ಅಧ್ಯಕ್ಷೆಯನ್ನಾಗಿ ಮಾಡಿದೆ. ಇತ್ತೀಚೆಗೆ ಅಧ್ಯಕ್ಷೆ ನಡವಳಿಕೆ ಸದಸ್ಯರಿಗೆ ಇರಿಸುಮುರಿಸು ಉಂಟು ಮಾಡಿದ್ದು, ಬಿಜೆಪಿ ಹಿಡಿತದಿಂದ ಆಡಳಿತ ತಪ್ಪುತ್ತಿರುವ ಬೆನ್ನಲ್ಲೇ, ಅಧ್ಯಕ್ಷ ಸ್ಥಾನದಿಂದ ಕೆಳಗಿಸುವ ಕಸರತ್ತು ತೆರೆಮರೆಯಲ್ಲಿ ಆರಂಭವಾಗಿತ್ತು. ಅವರಿಂದ ರಾಜೀನಾಮೆ ಪಡೆಯುವಂತೆ ಬಿಜೆಪಿ ಸದಸ್ಯರು ಹೈಕಮಾಂಡ್‌ಗೆ ಲಿಖಿತ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ, ಇದೀಗ ಸಭೆಗೆ ಗೈರು ಹಾಜರಾಗುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Related Articles
Advertisement
ಸರ್ವ ಸದಸ್ಯರ ಅಭಿಪ್ರಾಯ ಪಡೆದು ಒಮ್ಮತದ ನಿರ್ಣಯದಂತೆ ಅಧ್ಯಕ್ಷರಿಗೆ ಗೌರವದಿಂದ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು. ಆದರೆ ಅವರ ಸರ್ವಾಧಿಕಾರಿ ಧೋರಣೆ ಮುಂದುವರಿದಿದ್ದು,ಪಶಸ್ತಿ ಪಡೆದ ಪುರಸಭೆಗೆ ಅಗೌರವದಿಂದ ನಡೆದುಕೊಂಡಿದ್ದಾರೆ. ಇನ್ನೇನಿದ್ದರೂ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು. ಬಾಲಚಂದ್ರಗೌಡ ಪಾಟೀಲ, -ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು