ಬ್ಯಾಡಗಿ: ಮಾರುಕಟ್ಟೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಪಾಣಿಗಟ್ಟಿ ಗ್ರಾಮದ ರೈತರು ಬೆಳೆದ ಡಬ್ಬಿಮೆಣಸಿನಕಾಯಿಗೆ 55,239 ರೂ.ಬಂಪರ್ ಬೆಲೆ ದೊರೆತಿದ್ದು, ಕಳೆದಸೋಮವಾರದ ದಾಖಲೆ ದರವನ್ನು (55,111) ಮುರಿದಿದೆ.
ಮಾರುಕಟ್ಟೆ ಪ್ರಾಂಗಣದಲ್ಲಿರುವ ಎಸ್.ಸಿ.ಪಾಟೀಲ ಅಂಗಡಿಯಲ್ಲಿಪಾಣಿಗಟ್ಟಿ ಗ್ರಾಮದ ರೈತ ಚೆನ್ನಪ್ಪಗೌಡಬ್ಯಾಳಿಗೌಡ್ರ ಅವರು ಮಾರಾಟಕ್ಕಿಟ್ಟಿದ್ದಡಬ್ಬಿ ಮೆಣಸಿನಕಾಯಿ (2 ಕ್ವಿಂಟಲ್)ಎ.ಎಚ್.ನಾಸಿಪುರ ಎಂಬ ವ್ಯಾಪಾರಸ್ಥರು55,239ರೂ.ಗೆ ಖರೀದಿಸುವ ಮೂಲಕಸೋಮವಾರ ದಾಖಲಾಗಿದ್ದ ದರವನ್ನುಹಿಂದಿಕ್ಕಿ ದಾಖಲೆ ದರ ನೀಡಿದ್ದಾರೆ. ಹಾವೇರಿ ಜಿಲ್ಲೆಯ ಮೆಣಸು: ಅವಿಭಜಿತ ಧಾರವಾಡ ಜಿಲ್ಲೆಯ ಸಮಯದಲ್ಲಿಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಒಣ ಮೆಣಸಿನಕಾಯಿಗಳನ್ನುಬೆಳೆಯಲಾಗುತ್ತಿತ್ತು. ಅಂದಿನಿಂದ ಲೋಕಲ್ ಮೆಣಸಿನಕಾಯಿ ತನ್ನನೈಸರ್ಗಿಕ ಬಣ್ಣ ಹಾಗೂ ಸಿಹಿಯಾದಖಾರದಿಂದ ಪ್ರಪಂಚದಾದ್ಯಂತ ಖ್ಯಾತಿಗಳಿಸಿತ್ತು. ನಂತರದ ದಿನಗಳಲ್ಲಿ ಅಂತಹತಳಿ ವಿನಾಶದ ಅಂಚಿಗೆ ತಲುಪಿತ್ತು.ಆದರೆ ಗುರುವಾರ ಮಾರಾಟವಾದ ಮೆಣಸಿನ ಕಾಯಿ ಹಾವೇರಿ ಜಿಲ್ಲೆಯಲ್ಲಿಯೇ ಬೆಳೆದ ಬೆಳೆಯಾಗಿದ್ದು,ಮತ್ತೆ ಗತವೈಭವದ ದಿನಗಳನ್ನು ತಳಿಮರಳಿ ನೀಡಲಿದೆ ಎಂಬ ಆಶಾ ಭಾವನೆ ಚಿಗುರೊಡೆದಿದೆ.
ದಾಖಲೆ ನಿಲ್ಲುತ್ತಿಲ್ಲ: ಕಳೆದ ಸೋಮವಾರ ಗದಗ ಜಿಲ್ಲೆ ಬೆಟಗೇರಿ ಗ್ರಾಮದ ರೈತ ಮಲ್ಲಿಕಾರ್ಜುನ ಬಸಪ್ಪ ಕರಿಮಿಷ್ಟಿ50,111 ರೂ.ಗೆ ಮೆಣಸಿನಕಾಯಿ ಮಾರಾಟ ಮಾಡಿ ದಾಖಲೆ ಬರೆದಿದ್ದರು. ಗುರುವಾರ ಈ ದರವನ್ನುಸಹ ವ್ಯಾಪಾರಸ್ಥರು ಮುರಿದಿದ್ದು,ಮುಂದಿನ ದಿನಗಳಲ್ಲಿ ಮತ್ಯಾವ ದರ ದಾಖಲಾಗಲಿದೆ ಕಾದು ನೋಡಬೇಕಿದೆ.
ಲಕ್ಷ ಚೀಲದ ಗಡಿ ದಾಟಿದ ಆವಕ: ಗುರುವಾರ ಬ್ಯಾಡಗಿ ಮಾರುಕಟ್ಟೆಗೆ ಒಟ್ಟು 101783 ಲಕ್ಷ ಮೆಣಸಿಕಾಯಿಚೀಲಗಳು ಆವಕವಾಗಿವೆ. ಕಳೆದಸೋಮವಾರ ಸಹ ಒಂದು ಲಕ್ಷಚೀಲಗಳು ಆವಕವಾಗಿದ್ದು, ವರ್ಷದ ಕೊನೆ ದಿನದಲ್ಲಿ ಮತ್ತೆ ಮೆಣಸಿನಕಾಯಿ ಆವಕ ಲಕ್ಷ ಚೀಲದ ಗಡಿ ದಾಟಿದೆ.
ಸೋಮವಾರದ ಮಾರುಕಟ್ಟೆಯಲ್ಲಿ ದಾಖಲೆ ದರ ಪಡೆದ ಮೆಣಸಿನಕಾಯಿ ಬಗ್ಗೆ ಪತ್ರಿಕೆಯಲ್ಲಿ ಮೊನ್ನೆ ತಾನೇ ಓದಿದ್ದೆ.ಇದೀಗ ನಾನು ಬೆಳೆದ ಬೆಳೆಗೆಮಾರುಕಟ್ಟೆ ಇತಿಹಾಸದಲ್ಲಿಯೇದಾಖಲೆ ದರ ಪಡೆದಿರುವುದುಸಂತಸ ನೀಡಿದೆ.
– ಚೆನ್ನಬಸಗೌಡ್ರ ಬ್ಯಾಳಿಗೌಡ್ರ, ರೈತ