Advertisement

‘ಬೈಟು ಲವ್‌’ ಮಾಸ್‌ ಟೀಸರ್‌ ಬಂತು

12:08 PM Sep 09, 2021 | Team Udayavani |

“ಬೈ ಟು ಲವ್‌’ ಚಿತ್ರತಂಡ ಕೂಡಾ ತಮ್ಮ ನಾಯಕ ನಟನ ಬರ್ತ್‌ಡೇಗೆ ಸರ್‌ಪ್ರೈಸ್‌ ನೀಡಲು ಸಿದ್ಧವಾಗಿದ್ದ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಸರ್‌ಪ್ರೈಸ್‌ ರಿಲೀಸ್‌ ಆಗಿದೆ. ಹೌದು,ಕೆವಿಎನ್ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗುತ್ತಿರುವ “ಬೈ ಟು ಲವ್‌’ ಚಿತ್ರದ ಟೀಸರ್‌ ಬುಧವಾರ ಬಿಡುಗಡೆಯಾಗಿದೆ.

Advertisement

ಅದಕ್ಕೆಕಾರಣ ನಾಯಕ ಧನ್ವೀರ್‌ ಹುಟ್ಟುಹಬ್ಬ. ಸೆ.08 ಧನ್ವೀರ್‌ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಚಿತ್ರತಂಡ ವಿಶೇಷವಾದ ಗಿಫ್ಟ್ವೊಂದನ್ನು ನೀಡಿದೆ. ಮಾಸ್‌ ಡೈಲಾಗ್‌ನೊಂದಿಗೆ ಬಿಡುಗಡೆಯಾಗಿರುವ ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನುಕೆವಿಎನ್‌ ಬ್ಯಾನರ್‌ ನಿರ್ಮಿಸುತ್ತಿದೆ.

ಇದನ್ನೂ ಓದಿ:‘’ಮನಿ ಹೈಸ್ಟ್’’ ಜಗತ್ತನ್ನೇ ದೋಚಿಬಿಟ್ಟ ಖದೀಮರ ಕತೆ…!

ಮೊದಲ ಚಿತ್ರದಲ್ಲಿ ಮಾಸ್‌ ಲುಕ್‌ನಲ್ಲಿಕಾಣಿಸಿಕೊಂಡಿರುವ ಧನ್ವೀರ್‌ ಈ ಚಿತ್ರದಲ್ಲಿ ಲವರ್‌ ಬಾಯ್‌ ಲುಕ್‌ನಲ್ಲಿಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫ‌ಸ್ಟ್‌ಲುಕ್‌ ಎಲ್ಲರ ಮೆಚ್ಚುಗೆ ಪಡೆದಿದೆ. ಸುಮಾರು 70 ದಿನಗಳಿಗೂ ಹೆಚ್ಚುಕಾಲ ಚಿತ್ರೀಕರಣವಾಗಿದ್ದು, ಮಾತಿನ ಭಾಗದ ಚಿತ್ರೀಕರಣ ಪೂರ್ಣವಾಗಿದೆ. ಚಿತ್ರದಲ್ಲಿ ಧನ್ವೀರ್‌ಗೆ ಜೋಡಿಯಾಗಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಕೆವಿಎನ್‌ ನಿರ್ಮಾಣ ಸಂಸ್ಥೆಯಡಿ “ಸಖತ್‌’, “ಬೈ ಟು ಲವ್‌’, ನಿಖೀಲ್‌ ಅಭಿನಯದ ಒಂದು ಚಿತ್ರ ಹಾಗೂ ಪ್ರೇಮ್‌ ಹಾಗೂ ಧ್ರುವಕಾಂಬಿನೇಶನ್‌ನ ಸಿನಿಮಾಗಳಿವೆ. ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಇದ್ದು, ಹರಿ ಸಂತೋಷ್‌ ನಿರ್ದೇಶಕರು.

Advertisement
Advertisement

Udayavani is now on Telegram. Click here to join our channel and stay updated with the latest news.

Next