Advertisement
ನನಗಂತೂ ಇದರಲ್ಲಿ ರಾಜಕೀಯ ವಾಸನೆ ಬರುತ್ತಿದೆ ಎಂದು ತಿಳಿಸಿದರು. ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಊಹಾಪೋಹ. ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಸೋನಿಯಾಗಾಂಧಿಯವರು ನನ್ನನ್ನು ಕರೆದಿಲ್ಲ. ಆ ಬಗ್ಗೆ ಚರ್ಚೆಯೂ ಆಗಿಲ್ಲ. ಎಲ್ಲವೂ ಊಹಾಪೋಹದ ಚರ್ಚೆಗಳಾಗಿದ್ದು, ನಾನು ಎಂದೂ ಆ ಯೋಚನೆ ಮಾಡಿಯೂ ಇಲ್ಲ.
Related Articles
Advertisement
ದಿಕ್ಸೂಚಿ ಅಲ್ಲ: ಉಪಚುನಾವಣೆ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆ ದಿಕ್ಸೂಚಿ ಅಲ್ಲ. ಹಾಗೇ ಹೇಳುವುದಕ್ಕೂ ಸಾಧ್ಯವಿಲ್ಲ. ಆದರೆ ಈ ಫಲಿತಾಂಶದಿಂದ ಈ ಸರ್ಕಾರದ ಮೇಲೆ ಜನರ ಅಭಿಪ್ರಾಯ ಏನು ಎಂಬುದು ಗೊತ್ತಾಗುತ್ತೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸ ಇಟ್ಟುಕೊಂಡು ಚುನಾವಣೆ ಮಾಡಬೇಕು.
ಹಾಗಾಗಿ ಉಪಚುನಾವಣೆ ಪಾರದರ್ಶಕವಾಗಿ ನಡೆಯುತ್ತದೆ ಎಂವ ವಿಶ್ವಾಸ ಇದೆ ಎಂದರು. ಶಾಸಕ ಕೆ.ಜೆ.ಜಾರ್ಜ್, ಎಂಎಲ್ಸಿ ಗೋವಿಂದರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಇತರರಿದ್ದರು.
ಜೆಡಿಎಸ್ ಉದ್ದೇಶ ಒಳ್ಳಿಯದಂತೂ ಅಲ್ಲ
ಎರಡೂ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಜೆಡಿಎಸ್ ಉದ್ದೇಶ ಒಳ್ಳೆಯದಂತು ಅಲ್ಲ. ಏಕೆಂದರೆ ಅಲ್ಪಸಂಖ್ಯಾತರನ್ನು ಗೆಲ್ಲಿಸಬೇಕು ಎಂಬುದು ಅವರ ಉದ್ದೇಶ ಅಲ್ಲ. ಅಲ್ಪಸಂಖ್ಯಾರರನ್ನು ಗೆಲ್ಲಿಸಬೇಕು ಎಂಬ ಉದ್ದೇಶವಿದ್ದಿದ್ದರೆ ಅಲ್ಲೆ ಏಕೆ ಟಿಕೆಟ್ ಕೊಡಬೇಕಿತ್ತು. ರಾಮನಗರ, ಮಂಡ್ಯ ಮತ್ತು ಹಾಸದಲ್ಲಿ ಕೊಡಬಹುದಿತ್ತು. ಆದರೆ ಹಾಗೆ ಮಾಡಿಲ್ಲ. ಅಲ್ಪಸಂಖ್ಯಾತರ ಮತಗಳನ್ನು ವಿಂಗಡಿಸುವುದೇ ಅವರ ಉದ್ದೇಶ. ಆದರೆ ಜನ ಬುದ್ಧಿವಂತರಿದ್ದಾರೆ. ಇಂತಹ ತಂತ್ರಗಳು ಜನರಿಗೆ ಅರ್ಥವಾಗುತ್ತವೆ ಎಂದು ಸಿದ್ದರಾಮಯ್ಯ ಹೇಳಿದರು.