Advertisement

ಸ್ಮಾರ್ಟ್ ಫೋನ್ ಉದ್ಯಮದಲ್ಲಿ ಈ ವರ್ಷಾಂತ್ಯಕ್ಕೆ ಸೃಷ್ಟಿಯಾಗಲಿದೆ 50 ಸಾವಿರ ಉದ್ಯೋಗವಕಾಶ

08:56 PM Aug 20, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ಸೋಂಕಿನ ಹೊಡೆತದ ಕಾರಣದಿಂದ ಭಾರತವೂ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳು ಉದ್ಯೋಗ ನಷ್ಟದ ಹೊಡೆತಕ್ಕೆ ಕಂಗೆಟ್ಟಿವೆ.

Advertisement

ಅದರಲ್ಲೂ ಜನಸಂಖ್ಯೆ ಹೆಚ್ಚಾಗಿರುವ ಮತ್ತು ಯುವ ಸಮುದಾಯವೇ ಪ್ರಮುಖವಾಗಿರುವ ಭಾರತ, ಚೀನಾ ಮತ್ತು ಏಷ್ಯಾದ ಇನ್ನಿತರ ರಾಷ್ಟ್ರಗಳಲ್ಲಿ ಈ ಉದ್ಯೋಗ ನಷ್ಟದ ಭೀತಿ ಕಳೆದ ಕೆಲವು ತಿಂಗಳುಗಳಿಂದ ತೀವ್ರವಾಗಿಯೇ ತಟ್ಟುತ್ತಿದೆ.

ನಮ್ಮ ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತದ ಪರಿಕಲ್ಪನೆಯಡಿಯಲ್ಲಿ ಮುಂಬರುವ ದಿನಗಳಲ್ಲಿ ಹಲವಾರು ಕ್ಷೇತ್ರಗಳಲ್ಲಿ ಹೊಸ ಉದ್ಯೋಗವಕಾಶಗಳನ್ನು ಸೃಷ್ಟಿಸಲು ಕೇಂದ್ರ ಸರಕಾರ ಕಟಿಬದ್ಧವಾಗಿದೆ.

ಇದರ ಫಲವೆಂಬಂತೆ ಸ್ಮಾರ್ಟ್ ಫೋನ್ ಕ್ಷೇತ್ರದಲ್ಲಿ ಈ ವರ್ಷದ ಡಿಸೆಂಬರ್ ಅಂತ್ಯದೊಳಗಾಗಿ ಭಾರತದಲ್ಲಿ ಸುಮಾರು 50 ಸಾವಿರ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿಡಿರುವ ಮಾಹಿತಿ ಉಂಟುಮಾಡಿದೆ.

ಫಾಕ್ಸ್ ಕಾನ್, ವಿಸ್ಟ್ರನ್, ಸ್ಯಾಮ್ಸಂಗ್, ಡಿಕ್ಸನ್ ಮತ್ತು ಲಾವಾ ಸೇರಿದಂತೆ ಹಲವಾರು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮೊಬೈಲ್ ತಯಾರಿಕಾ ಕಂಪೆನಿಗಳು ದೇಶದ ವಿವಿಧ ಭಾಗಗಳಲ್ಲಿ ತಮ್ಮ ಉತ್ಪಾದನಾ ಘಟಕಗಳನನ್ನು ತೆರೆಯುವ ಸಿದ್ಧತೆಯಲ್ಲಿವೆ.

Advertisement

ಇದು ಸರಕಾರದ PLI ಯೋಜನೆಯನ್ವಯ ಸದ್ಯದಲ್ಲೇ ತಮ್ಮ ಘಟಕಗಳನ್ನು ಸ್ಥಾಪಿಸಿ ಉತ್ಪಾದನೆಯನ್ನು ಪ್ರಾರಂಭಿಸಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೊಬೈಲ್ ಫೋನ್ ತಯಾರಿಕೆಯಲ್ಲಿ ದೇಶೀಯ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಹಾಗೂ ದೊಡ್ಡ ಕಂಪೆನಿಗಳನ್ನು ಆಕರ್ಷಿಸಲು ಕೇಂದ್ರ ಸರಕಾರವು ಕಳೆದ ಏಪ್ರಿಲ್ ತಿಂಗಳಿನಲ್ಲಿ ಉತ್ಪಾದಕತಾ ಸಂಬಂಧಿ ಭತ್ಯೆ ಸವಲತ್ತನ್ನು ಘೋಷಿಸಿತ್ತು.

ಭಾರತದ ಸೆಲ್ಯುಲರ್ ಹಾಗೂ ಎಲೆಕ್ಟ್ರಾನಿಕ್ ಅಸೋಸಿಯೇಷನ್ ಅಧ್ಯಕ್ಚರಾಗಿರುವ ಪಂಕಜ್ ಮೊಹಿಂದ್ರೋ ಅವರು ಹೇಳುವ ಪ್ರಕಾರ, ಮೊಬೈಲ್ ಫೋನ್ ಉತ್ಪಾದನಾ ಉದ್ಯಮವು ಇದೀಗ 1100% ಬೆಳವಣಿಗೆಯನ್ನು ದಾಖಲಿಸುವ ಮೂಲಕ ನಮ್ಮ ದೇಶದೊಳಗಿನ ಬೇಡಿಕೆಯನ್ನು ಪೂರೈಸಿರುವುದು ಮಾತ್ರವಲ್ಲದೇ ಬೇರೆ ರಾಷ್ಟ್ರಗಳಿಗೆ ಮೊಬೈಲ್ ಫೋನ್ ಗಳ ರಫ್ತನ್ನೂ ಪ್ರಾರಂಭಿಸಿವೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಮೊಬೈಲ್ ಫೋನ್ ತಯಾರಿ ಉದ್ಯಮವು ಸ್ಪೋಟಕ ಪ್ರಗತಿಯಲ್ಲಿದ್ದು ಕೋವಿಡ್ 19 ಕಾರಣದಿಂದ ಅದಕ್ಕೆ ಸ್ವಲ್ಪ ಮಟ್ಟಿನ ತಡೆಯುಂಟಾಗಿದ್ದರೂ ಮುಂದಿನ ಡಿಸೆಂಬರ್ ವೇಳೆಗೆ ಸುಮಾರು 50 ಸಾವಿರ ಹೊಸ ಉದ್ಯೋಗವಕಾಶ ಈ ಕ್ಷೇತ್ರದಲ್ಲಿ ಸೃಷ್ಟಿಯಾಗಲಿದೆ ಎಂಬುದು ಈ ಕ್ಷೇತ್ರದ ತಜ್ಞರ ಅಭಿಪ್ರಾಯವೂ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next