Advertisement

ಸಿಎಂ ತವರಲ್ಲಿ ಟೈಟ್ ಫೈಟ್: ಮುನ್ನಡೆಯತ್ತ ಕಾಂಗ್ರೆಸ್, ಸಿಂದಗಿಯಲ್ಲಿ ಬಿಜೆಪಿ ಓಟ

10:39 AM Nov 02, 2021 | Team Udayavani |

ಹಾವೇರಿ/ವಿಜಯಪುರ:  ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದೆ. ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರ್ಜರಿ ಮುನ್ನಡೆ ಸಾಧಿಸಿದ್ದರೆ, ಹಾನಗಲ್ ನಲ್ಲಿ ಕಠಿಣ ಸ್ಪರ್ಧೆ ಏರ್ಪಟ್ಟಿದೆ.

Advertisement

ಮುಖ್ಯಮಂತ್ರಿ ತವರು ಜಿಲ್ಲೆಯ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಮುನ್ನಡೆ ಸಾಧಿಸಿದ್ದಾರೆ. ಐದು ಸುತ್ತಿನ ಮತ ಎಣಿಕೆಯ ಮುಕ್ತಾಯದ ಬಳಿಕ ಮಾನೆ ಅವರು 23,344 ಮತ ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರು 22,024 ಮತ ಪಡೆದಿದ್ದಾರೆ. ಜೆಡಿಎಸ್ ನ ನಿಯಾಜ್ ಶೇಖ್ ಕೇವಲ 204 ಮತಗಳನ್ನಷ್ಟೇ ಪಡೆದಿದ್ದಾರೆ.

ಇದನ್ನೂ ಓದಿ:ಇಂದು ಉಪಚುನಾವಣೆ ಫಲಿತಾಂಶ: ಹಾನಗಲ್  ನಲ್ಲಿ ಮತ ಎಣಿಕೆ ಆರಂಭ

ಸಿಂದಗಿ ಕ್ಷೇತ್ರದಲ್ಲಿ ಎಂಟು ಸುತ್ತಿನ ಮತ ಎಣಿಕೆ ಬಳಿಕ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು 37021 ಮತಗಳನ್ನು ಪಡೆದು ಮುನ್ನುಗ್ಗುತ್ತಿದ್ದಾರೆ. ಕಾಂಗ್ರೆಸ್ ನ ಅಶೋಕ ಮನಗೂಳಿ 22342 ಮತ ಪಡೆದಿದ್ದಾರೆ. ಭೂಸನೂರ ಅವರು 14679 ಮತಗಳ ಮುನ್ನಡೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next