ಬೆಂಗಳೂರು: 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿದೆ.ಈಗಾಗಲೇ ಕುಮಾರಸ್ವಾಮಿ ಮೈಸೂರಿನಲ್ಲಿ ತಮ್ಮ ಅನುಭವದಲ್ಲಿ ಎಲ್ಲ ಕಡೆ ಸ್ವತಂತ್ರ ಸ್ಪರ್ಧೆ ಅಂತ ಘೋಷಣೆ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ಮಾತನಾಡಿದ ಅವರು 14 ತಿಂಗಳ ಮೈತ್ರಿ ಸರ್ಕಾರದಲ್ಲಿ ನೋವು ಅನುಭವಿಸಿರುವುದರಿಂದ ಕುಮಾರಸ್ವಾಮಿ ಅವರು ಈ ಮಾತು ಹೇಳಿದ್ದಾರೆ.ನಾಳೆ ಪಕ್ಷದ ಹಿರಿಯ ಮುಖಂಡರ ಸಭೆ ಕರೆದಿದ್ದೇನೆ. ಅಲ್ಲಿ ಚರ್ಚೆ ಮಾಡಿ ಶೀಘ್ರದಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುತ್ತೇವೆ.
ಮೂರು ತಿಂಗಳಿನಿಂದ ನಾನು ಸಭೆ ನಡೆಸುತ್ತಾ ಬಂದಿದ್ದೇನೆ. ಇಡೀ ಮೂವತ್ತು ಜಿಲ್ಲೆಗಳ ಕಾರ್ಯಕರ್ತರ ಅಭಿಪ್ರಾಯ ಪಡೆಯಲಾಗಿದೆ.ಎಲ್ಲರ ಅಭಿಪ್ರಾಯವೂ ಕೈ ಜತೆ ಮೈತ್ರಿ ಬೇಡ ಎಂಬುದೇ ಆಗಿದೆ.
ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಮತ್ತು ಪ್ರತಿ ಪಕ್ಷ ನಾಯಕನ ಆಯ್ಕೇ ಕೈ ಹೈಕಮಾಂಡ್ ಗೆ ಗೊಂದಲ ಆಗಿದೆ. ಇಂಥ ಸಂದರ್ಭದಲ್ಲಿ ಜೆಡಿಎಸ್ ಜತೆಗಿನ ಮೈತ್ರಿ ಬಗ್ಗೆ ತೀರ್ಮಾನ ಮಾಡುವ ತಲೆ ನೋವು ಅವರಿಗೆ ಬೇಡ ಎಂದು ನಾವೇ ಮೈತ್ರಿಗೆ ಇತಿಶ್ರೀ ಹಾಡಿದ್ದೇವೆ ಎಂದರು.
ಎಷ್ಟು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ನಾಳೆ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಶಿಕ್ಷೆ ಸಾಕಾಗಿದೆ ಅಂತ ಕಾರ್ಯಕರ್ತರ ಮಾತಿಗೆ ಬೆಲೆ ನೀಡಿ ಸ್ವತಂತ್ರ ಸ್ಪರ್ಧೆ ಮಾಡುತ್ತಿದ್ದೇವೆ.
ಕೋಡಿಮಠ ಶ್ರೀಗಳ ಭವಿಷ್ಯ ಕುರಿತು ಪ್ರತಿಕ್ರಿಯೆ ನೀಡಲು ಎಚ್‌ಡಿಡಿ ನಿರಾಕರಿಸಿದರು.
ಮಧ್ಯಂತರ ಚುನಾವಣೆ ಬಗ್ಗೆ ಈಗಲೇ ಹೇಳಕ್ಕೆ ನಾನೇನು ಡಾಕ್ಟ್ರಾ ಮಹಾರಾಷ್ಟ್ರ,
ಹರ್ಯಾಣ ಚುನಾವಣೆ ಇದೆ.ಹೀಗಾಗಿ ಜೊತೆಯಲ್ಲೇ ಘೋಷಿಸಿದ್ದಾರೆ. ದಿನಾಂಕ ಘೋಷಿಸಿದ್ದರಲ್ಲಿ ವಿಶೇಷವೇನಿಲ್ಲ ಎಂದರು .