ಮಣಿಪಾಲ: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ತುಮುಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಆರಂಭಿಕವಾಗಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಶಿರಾ ಕ್ಷೇತ್ರದ ಮತ ಎಣಿಕೆಯು ತುಮಕೂರಿನ ಸರ್ಕಾರಿ ಪಾಲಿಟೆಕ್ನ್ ಕಾಲೇಜಿನಲ್ಲಿ ನಡೆಯುತ್ತಿದ್ದರೆ, ಆರ್ .ಆರ್.ನಗರದ ಮತ ಎಣಿಕೆ ಕಾರ್ಯ ಜ್ಞಾನಾಕ್ಷಿ ವಿದ್ಯಾ ನಿಕೇತನ್ ಶಾಲೆಯಲ್ಲಿ ನಡೆಯುತ್ತಿದೆ.
ಆರ್.ಆರ್.ನಗರ ಕ್ಷೇತ್ರದಲ್ಲಿ ಮೂರು ಹಂತದ ಮತ ಎಣಿಕೆ ಮುಕ್ತಾಯವಾಗಿದ್ದು, ಮುನಿರತ್ನ ಅವರು 6418 ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ. ಮುನಿರತ್ನ 15110 ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಕುಸುಮಾಗೆ 8692 ಮತಗಳು ಲಭ್ಯವಾಗಿದೆ.
ಇದನ್ನೂ ಓದಿ:LIVE ಉಪಚುನಾವಣೆ ಫಲಿತಾಂಶ: ಶಿರಾ-ರಾಜರಾಜಶ್ವೇರಿ ನಗರ ಗದ್ದುಗೆ ಯಾರ ಪಾಲಿಗೆ?
ಶಿರಾ ಕ್ಷೇತ್ರದಲ್ಲಿ ಮೊದಲ ಸುತ್ತಿನ 7043 ಮತಗಳ ಎಣಿಕೆಯಾಗಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ. ಕಮಲ ಪಾಳಯದ ಡಾ.ರಾಜೇಶ್ ಗೌಡರಿಗೆ 3224 ಮತಗಳು, ಕಾಂಗ್ರೆಸ್ ನ ಟಿ.ಬಿ.ಜಯಚಂದ್ರ ಅವರಿಗೆ 2428 ಮತಗಳು ಮತ್ತು ಜೆಡಿಎಸ್ ನ ಅಮ್ಮಾಜಮ್ಮ ಅವರಿಗೆ 1135 ಮತಗಳು ಲಭ್ಯವಾಗಿದೆ.